ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ವಾಹನಗಳ ವಿರುದ್ಧ ಆರ್ ಟಿ ಓ ಕ್ರಮ: 212 ದೂರು ದಾಖಲು

|
Google Oneindia Kannada News

ತುಮಕೂರು, ಫೆಬ್ರವರಿ 09 : ತುಮಕೂರು ನಗರದಲ್ಲಿ ಶಾಲಾ ಕಾಲೇಜು ವಾಹನಗಳು ನಿಯಮ ಉಲ್ಲಂಘಿಸಿರುವ ಬಗ್ಗೆ2014 ರಿಂದ ಮಾರ್ಚ್ ಅಂತ್ಯದ ವರೆಗೆ ಒಟ್ಟು 212 ಪ್ರಕರಣಗಳನ್ನು ದಾಖಲಿಸಿ1,76,800 ದಂಡವನ್ನು ಸಂಗ್ರಹಿಸಲಾಗಿದೆ ಎಂದು ತುಮಕೂರಿನ ಪ್ರಾದೇಶಿಕ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ತುಮಕೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಆರ್.ವಿಶ್ವನಾಥನ್ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ 2000 ನೇ ಇಸವಿಯಿಂದ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಇಲಾಖೆಯು ಕೇವಲ 2014 ರಿಂದ ಮಾಹಿತಿ ನೀಡಿದೆ. ಅದಕ್ಕೂ ಮೊದಲು ಇಲಾಖೆಯು ಯಾವುದೇ ಕ್ರಮ ಕೈಗೊಂಡಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ತುಮಕೂರು ನಗರದಲ್ಲಿ ಒಟ್ಟು 315 ಅಧಿಕೃತ ಶಾಲಾ ವಾಹನಗಳಿವೆ ಎಂದು ಉತ್ತರಿಸಿದ್ದಾರೆ.

RTE ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆ.20 ರಿಂದ ಆರಂಭ!RTE ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆ.20 ರಿಂದ ಆರಂಭ!

ನಿಯಮದ ವಿವರ: ಶಾಲಾ ಕಾಲೇಜು ವಾಹನಗಳಿಗೆ ವಿಧಿಸಲಾಗಿರುವ ನಿಯಮಾವಳಿಗಳ ಬಗ್ಗೆ ವಿಶ್ವನಾಥನ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಸಾರಿಗೆ ಅಧಿಕಾರಿಗಳು, ವಾಹನವು ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು. ಅನುಮೋದಿತ ಸ್ಪೀಡ್ ಗವರ್ನರ್ ಅಳವಡಿಸಿದ್ದು, ವೇಗಮಿತಿ ಪ್ರತಿ ಗಂಟೆಗೆ 40 ಕಿ.ಮೀಗೆ ನಿಯಂತ್ರಿತವಾಗಿರಬೇಕು.

School vans violations: 212 case in three years

ವಾಹನಕ್ಕೆ ಹೆದ್ದಾರಿ ಹಳದಿ ಬಣ್ಣ ಬಳಿದಿದ್ದು, ಹೊರಕವಚ ಮಧ್ಯದಲ್ಲಿ ಹಸಿರು ಬಣ್ಣದ ಪಟ್ಟಿ ಹಾಕಿರಬೇಕು. ವಾಹನದ ಹೊರ ಭಾಗದ ನಾಲ್ಕು ಭಾಗಗಳಲ್ಲಿ ಶಾಲಾ ವಾಹನ ಎಂದು ಬರೆಸಿರಬೇಕು ಟಿಂಟೆಡ್ ಗ್ಲಾಸ್ ಹೊಂದರಬಾರದು ಎಂದು ನಿಯಮದಲ್ಲಿದೆ.

ಮಾರುತಿ ವ್ಯಾನ್ ಅಕ್ರಮ ಬಳಕೆ, ಮೂರು ಪ್ರಕರಣ ಪತ್ತೆ: ವೈಟ್ ಬೋರ್ಡ್ ಇರುವ ಆರುತಿ ವ್ಯಾನ್ ಇತ್ಯಾದಿ ವಾಹನಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಕರೆದೊಯ್ಯುವ ೩ ಪ್ರಕರಣಗಳು ೨೦೧೬-೧೭ ನೇ ಸಾಲಿನಲ್ಲಿ ಪತ್ತೆಯಾಗಿದ್ದು, ಒಟ್ಟು 14,700 ರೂ. ದಂಡ ವಿಧಿಸಲಾಗಿದೆ. ಮತ್ತೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ವಿಶ್ವನಾಥನ್ ಅವರಿಗೆ ತಿಳಿಸಿದ್ದಾರೆ.

English summary
In the three years, 212 cases have been registered against school vans which violated rules in Tumkur RTO jurisdiction. The RTO has collected Rs.1.7 lakhs as penalties on the school vans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X