ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕರೇ ಎಚ್ಚರ, ಟೋಲ್‌ಗೇಟ್‌ನಲ್ಲಿ ಕಳ್ಳರ ಕಾಟ

|
Google Oneindia Kannada News

ತುಮಕೂರು, ಜನವರಿ 1: ಪ್ರಯಾಣಿಕರೇ ಎಚ್ಚರ, ಟೋಲ್‌ಗಳ ಬಳಿ ಕಳ್ಳರಿದ್ದಾರೆ. ಒಂದೊಮ್ಮೆ ಕಾರಿನ ಕಿಟಕಿಯನ್ನು ತೆಗೆದಲ್ಲಿ ಅಥವಾ ನೀವು ಕೆಳಗಿಳಿದಲ್ಲಿ ನಿಮ್ಮಿಂದ ಹಣ, ಚಿನ್ನವನ್ನು ದೋಚಿ ಪರಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ಟೋಲ್‌ಗಿಂತಲೂ ಸ್ವಲ್ಪ ಹಿಂದೆ ಬೀದಿದೀಪಗಳಿಲ್ಲದ ಜಾಗದಲ್ಲಿ ಇದ್ದುಕೊಂಡು ಟೋಲ್‌ಗೆ ಬರುವ ಎಲ್ಲಾ ವಾಹನಗಳನ್ನು ವೀಕ್ಷಿಸುತ್ತಿರುತ್ತಾರೆ, ಒಂದೊಮ್ಮೆ ನೀವು ಕಾರಿನಿಂದ ಇಳಿಯಲು ಅಥವಾ ಹೊರಗಡೆ ನೋಡಲು ಕಾರಿನ ಬಾಗಿಲು ತೆರೆದರೆ ತಕ್ಷಣ ಬಂದು ಅಟ್ಯಾಕ್ ಮಾಡಿ ನಿಮ್ಮಿಂದ ಹಣ ದೋಚಿ ವಿಐಪಿ ಲೈನ್‌ನಲ್ಲಿ ಪರಾರಿಯಾಗಿಬಿಡುತ್ತಾರೆ. ಯಾವುದೇ ಕಾರಣಕ್ಕೂ ಟೋಲ್ ಬಳಿ ನಿಂತಾಗ ಕಾರಿನಿಂದ ಇಳಿಯದೇ ಇರುವುದು ಒಳಿತು.

ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

ಸೋಮವಾರ ಸಂಜೆ ಇಂಥದ್ದೇ ಘಟನೆ ಶಿರಾ ಬಳಿ ನಡೆದಿದೆ. ಇದು ನನ್ನ ಪರ್ಸನಲ್ ಎಕ್ಸ್‌ಪೀರಿಯನ್ಸ್ ಕೂಡ. ರಾತ್ರಿ 9.30ರ ಸುಮಾರಿಗೆ ಶಿರಾದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮಕೂರಿಗೆ ಬರುವಾಗ ಕರ್ಜೀವನಹಳ್ಳಿ ಟೋಲ್ ಬಳಿ ಬಂದಾಗ ಫಾಸ್ಟ್ ಟ್ಯಾಗ್ ಇದ್ದರೂ ನಾರ್ಮಲ್ ಲೇನ್‌ಗಿಂತ ತಡವಾಗುತ್ತಿದ್ದುದರಿಂದ ಎನಾಗಿದೆ ಎಂದು ನೋಡಲು ಇಳಿದಾಗ ದರೋಡೆಕೋರರು ದಾಳಿ ನಡೆಸಿದರು. ಕಾರಿನೊಳಗೆ ನುಗ್ಗಲು ಕೂಡ ಯತ್ನಿಸಿದರು.

Robbers at National Highway toll gate

ಅಷ್ಟರೊಳಗೆ ಎಚ್ಚೆತ್ತು ಆತನನ್ನು ತಳ್ಳಿ ಬಾಗಿಲು ಹಾಕಿಕೊಂಡಾಗ ಆತ ಓಡಿ ಹೋಗಿ ಕತ್ತಲಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಕೂತರು. ಈ ಕುರಿತು ಅಲ್ಲಿಯ ಸೆಕ್ಯುರಿಟಿ ಗಾರ್ಡ್‌ಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಸಂಬಂಧ 100ಗೆ ಕರೆ ಮಾಡಿ ದೂರು ನೀಡಲು ಸುಮಾರು 15 ನಿಮಿಷಗಳ ಕಾಲ ಹರಸಾಹಸ ಪಡಬೇಕಾಯಿತು. ಶಿರಾ ಪೊಲೀಸ್‌ ಠಾಣೆಗೆ ತಿಳಿಸಿದ್ದರು.

ಈ ಬಗ್ಗೆ ಅದೇ ಪೊಲೀಸ್ ಠಾಣೆಗೆ ಬೆಳಗ್ಗೆ ವಿಚಾರಿಸಿದರೆ ಇದು ಕಳ್ಳಂಬಳ್ಳ ಠಾಣೆಗೆ ಬರುತ್ತದೆ ನಮ್ಮ ವ್ಯಾಪ್ತಿಯದ್ದಲ್ಲ ಎಂದು ಬೇಜವಾಬ್ದಾರಿ ತನ ತೋರಿಸುತ್ತಿದ್ದಾರೆ. ಉಳಿದ ಪ್ರಯಾಣಿಕರಿಗೆ ಸಮಸ್ಯೆಯಾಗ ಕೂಡದು ಎನ್ನುವ ಕಾಳಜಿಯಿಂದ ನೀಡಿದ ದೂರಾಗಿತ್ತು. ಆದರೆ ಪೊಲೀಸರಿಗೆ ಅದು ಮಹತ್ವದೆನಿಸಲಿಲ್ಲ.

English summary
National Highway toll gate are becoming more problematic for the passengers, because of the toll plaza negligence some robbers are trying to snatch the passengers Valuable things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X