ಪೂಜಾರಪ್ಪನ ಅತ್ಯಾಚಾರ ಯತ್ನ, ದುಡ್ಡು ಕೊಡಲಿಲ್ಲ ಅಂತ ದೂರು ಕೊಟ್ಟರಾ?

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ತುರುವೇಕೆರೆ, ಏಪ್ರಿಲ್ 12: ಪೂಜಾರಿಯೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಮಂಗಲ ತಾಲೂಕು ಮುಳಕಟ್ಟೆ ಗ್ರಾಮದ ದಲಿತ ಕಾಲೋನಿಯ ಮಹೇಶ್ ಎಂಬಾತನ ವಿರುದ್ಧ ದೂರು ದಾಖಲಿಸಲಾಗಿದೆ.

ಮನೆಗೆ ಮುಳಕಟ್ಟಮ್ಮ ದೇವಿಯ ಮೂರ್ತಿಯನ್ನು ಕರೆಸಲಾಗಿತ್ತು. ಆಗ ದೇವರ ಕೋಣೆಯಲ್ಲಿ ಒಬ್ಬಳೇ ಇದ್ದೆ. ಪೂಜೆ ಮಾಡಿ, ದೋಷ ಪರಿಹರಿಸುತ್ತೀನಿ ಎಂದ ಪೂಜಾರಿ, ಅರಿಶಿನ-ಕುಂಕುಮ ಹಚ್ಚಿ, ಬಟ್ಟೆ ತೆಗೆಯುವಂತೆ ಹೇಳಿ, ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.['ನಾನು ಹೇಗೆ ಸಿಎಂ ಆಗಲಿಲ್ಲವೋ ಅದೇ ಥರ ರಾಜಣ್ಣ ಸಚಿವರಾಗಲಿಲ್ಲ']

Rape attempt on woman by priest in Turuvekere taluk

ನಾನು ದಲಿತ ಅಂತ ಬೇಕೆಂತಲೇ ದೂರು ಕೊಟ್ಟಿದ್ದಾರೆ. ನನ್ನ ಮೇಲೆ ದೌರ್ಜನ್ಯ ಎಸಗಿದ್ದರು. ಅದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದೀನಿ. ಜತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹೇಶ್ ಕೂಡ ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ದೂರು ನೀಡಿದ್ದಾನೆ ಮಹಿಳೆ ಹಾಗೂ ಆಕೆ ಪತಿಯನ್ನು ಬಂಧಿಸಲಾಗಿದೆ.[ಈ ಬಾರಿ ತುಮಕೂರಲ್ಲಿ ಐಪಿಎಲ್ ನೋಡುವ ಮಜಾನೇ ಬೇರೆ!]

ಇನ್ನೂ ಆಸಕ್ತಿಕರ ಮಾಹಿತಿ ಏನೆಂದರೆ, ಈ ಘಟನೆ ನಡೆದಿದ್ದು ಏಪ್ರಿಲ್ 7ರಂದು. ಗ್ರಾಮಸ್ಥರು ಸೇರಿ ಐದು ಲಕ್ಷ ರುಪಾಯಿ ಪರಿಹಾರ ಕೊಟ್ಟುಬಿಡು ಎಂದು ಮಹೇಶ್ ಗೆ ಹೇಳಿದ್ದರಂತೆ. ಆದರೆ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಮಹಿಳೆ ತಡವಾಗಿ ದೂರು ಕೊಟ್ಟರಂತೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rape attempt on woman by priest in Dandinashivara police station limit in Turuvekere taluk, Tumakuru district.
Please Wait while comments are loading...