ಪ್ರಶ್ನೆ ಪತ್ರಿಕೆ ಸೋರಿಕೆ : ಟೊಮೆಟೊ ಅಣ್ಣನ ಮಗ ಸಿಕ್ಕಿಬಿದ್ದ

Posted By:
Subscribe to Oneindia Kannada

ತುಮಕೂರು, ಮೇ 11 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಮತ್ತೊಬ್ಬ ಪ್ರಮುಖ ಆರೋಪಿ ಕಿರಣ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹಗರಣದ ಕಿಂಗ್ ಪಿನ್ ಶಿವಕುಮಾರಸ್ವಾಮಿ ಅಲಿಯಾಸ್ ಟೊಮೆಟೋ ಅಣ್ಣನ ಮಗನಾದ ಕಿರಣ್‌ನನ್ನು ತುಮಕೂರಿನಲ್ಲಿ ಬಂಧಿಸಲಾಗಿದೆ.

ತುಮಕೂರಿನ ಪರಿಚಿತರ ತೋಟದ ಮನೆಯಲ್ಲಿ ಅಡಗಿ ಕುಳಿತಿದ್ದ ಕಿರಣ್‌ನನ್ನು ಮಂಗಳವಾರ ಮುಂಜಾನೆ ವಶಕ್ಕೆ ಪಡೆಯಲಾಗಿದೆ. ಕಿರಣ್ ಅಲಿಯಾಸ್ ಕುಮಾರಸ್ವಾಮಿ (28) ಗುಬ್ಬಿ ತಾಲೂಕಿನ ಚೇಳೂರು ಗ್ರಾಮದವನು. ಸಿಐಡಿ ವಶದಲ್ಲಿರುವ ಶಿವಕುಮಾರ ಸ್ವಾಮಿ ಕಿರಣ್ ಬಗ್ಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದ. [ಕಿರಣ್ ಕಡೆ ಕೈ ತೋರಿಸಿದ ಗುರೂಜಿ!]

kiran

ವ್ಯಾಪಾರ ಮಾಡಿಕೊಂಡಿದ್ದರು : ಶಿವಕುಮಾರ ಸ್ವಾಮಿ ಮತ್ತು ಕಿರಣ್ ಪ್ರಶ್ನೆ ಪತ್ರಿಕೆ ಬಯಲು ಮಾಡುವುದನ್ನು ವ್ಯಾಪಾರ ಮಾಡಿಕೊಂಡಿದ್ದರು. ಕಿರಣ್ ಜೊತೆ ಸೇರಿ ಶಿವಕುಮಾರಸ್ವಾಮಿ ಪತ್ರಿಕೆ ಬಯಲು ಮಾಡುತ್ತಿದ್ದ. 2014ರಿಂದ ನಾನು ಈ ವ್ಯಾಪಾರ ನಡೆಸುತ್ತಿಲ್ಲ. ಕಿರಣ್ ಈ ದಂಧೆ ನೋಡಿಕೊಳ್ಳುತ್ತಾನೆ ಎಂದು ಟೊಮೆಟೊ ಪೊಲೀಸರಿಗೆ ಹೇಳಿದ್ದಾನೆ. [ಶಿವಕುಮಾರ ಸ್ವಾಮಿ ಕುರಿತ ಕುತೂಹಲಕಾರಿ ಕಥೆ!]

ಅಧಿಕಾರಿಗಳ ಜೊತೆ ಸಂಪರ್ಕವಿದೆ : ಬಂಧಿತ ಕಿರಣ್‌ಗೆ ಪಿಯು ಮಂಡಳಿ, ಖಜಾನೆ ಅಧಿಕಾರಿಗಳು ಮತ್ತು ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವವರ ಜೊತೆ ಸಂಪರ್ಕವಿದೆ. ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ವಿಜಯನಗರದ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಮತ್ತು ಕಿರಣ್‌ ನಿಕಟವರ್ತಿಗಳು. [20 ಕಾಲೇಜುಗಳಿಗೆ ಪತ್ರಿಕೆ ಮಾರಿದ್ದ ಶಿವಕುಮಾರ ಸ್ವಾಮಿ]

ಅಂದಹಾಗೆ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಆರೋಪಿಗಳನ್ನು ಬಂಧಿಸಲಾಗಿದೆ. ಸಿಐಡಿ ಪೊಲೀಸರು ಹೇಳುವ ಪ್ರಕಾರ ದಿನೇಶ್ ಎಂಬ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Criminal Investigation Department (CID) police have arrested 2nd PUC Chemistry question paper leak scam accused Kiran(28) on May 10, 2016. Kiran resident of Tumakuru, was picked up from farm house near Tumakuru.
Please Wait while comments are loading...