ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಡೋಮ್ ಗಾಗಿ ತಿಪಟೂರು ಸರಕಾರಿ ಆಸ್ಪತ್ರೆ ಎದುರು ಧರಣಿ

By ತುಮಕೂರು ಪ್ರತಿನಿಧಿ
|
Google Oneindia Kannada News

ತಿಪಟೂರು, ಜುಲೈ 12: ಈ ವ್ಯಕ್ತಿಯು ಯಾವ ಉದ್ದೇಶಕ್ಕಾಗಿ ಧರಣಿ ಮಾಡಿದರು ಎಂಬುದು ತಿಳಿದರೆ ಮಿತಿ ಮೀರುತ್ತಿರುವ ಜನಸಂಖ್ಯೆ ಬಗ್ಗೆ ಇವರಿಗಿರುವ ಕಾಳಜಿ ಬಗ್ಗೆ ಹೆಮ್ಮೆ ಮೂಡುತ್ತದೆ. ಅಷ್ಟಕ್ಕೂ ಆಗಿದ್ದೇನು ಅಂದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ಗಣೇಶ್ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸರಕಾರಿ ಆಸ್ಪತ್ರೆ ಎದುರು ಧರಣಿ ನಡೆಸಿದ್ದಾರೆ.

ತಿಪಟೂರು ಮೂಲದ ಮಹಿಳೆಯನ್ನು ಮದುವೆ ಆಗಿರುವ ಗಣೇಶ್ ಅವರಿಗೆ ಮಕ್ಕಳಿದ್ದಾರೆ. ಜನನ ನಿಯಂತ್ರಣದ ಸಾಧನ ಕಾಂಡೋಮ್ ಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಹೋಗಿ ಕೇಳಿದ್ದಾರೆ. ಪ್ರಾಯಶಃ ಬಹಳ ಸಲ ಹೋಗಿರಬೇಕು, ಪ್ರತಿ ಸಲ 'ಇಲ್ಲ' ಎಂಬ ಉತ್ತರವೇ ಸಿಕ್ಕಿದೆ. ಇದರಿಂದ ಬೇಸತ್ತ ಗಣೇಶ್ ಆಸ್ಪತ್ರೆ ಎದುರೇ ಧರಣಿಗೆ ಕೂತಿದ್ದಾರೆ.

ಚೀನಾವನ್ನು ಸೋಲಿಸಲು ಭಾರತಕ್ಕೆ ಇನ್ನೆಷ್ಟು ದಿನ ಬೇಕು?ಚೀನಾವನ್ನು ಸೋಲಿಸಲು ಭಾರತಕ್ಕೆ ಇನ್ನೆಷ್ಟು ದಿನ ಬೇಕು?

Protest in front of Tiptur government hospital for condom

ಆ ನಂತರ ಏನಾಯಿತು ಎಂಬ ಮಾಹಿತಿ ಲಭಿಸಿಲ್ಲ. ಆದರೆ ಈ ರೀತಿ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಎದುರು ಧರಣಿಗೆ ಕೂತಿದ್ದು ಮಾತ್ರ ಅಪರೂಪದ ಘಟನೆ ಎಂಬುದರಲ್ಲಿ ಎರಡು ಮಾತಿಲ್ಲ ಬಿಡಿ. ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ ವೇಗದಲ್ಲಿ ಓಡುತ್ತಿರುವ ಭಾರತದಲ್ಲಿ ಇಂಥ ಘಟನೆಗಳೂ ನಡೆಯುತ್ತಿರುತ್ತವೆ.

English summary
Ganesh- Basically from Tarikere, Chikkamagalur district protest in front of Tiptur government hospital for not getting condom. He came to wife's house. Asked condom in hospital many times. But he did not get. So, he protest against hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X