ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟ್ಯಂತರ ಭಕ್ತರ ಶೋಕದಲ್ಲಿ ನಾನೂ ಭಾಗಿ : ಪ್ರಧಾನಿ ಮೋದಿ ಕಂಬನಿ

|
Google Oneindia Kannada News

Recommended Video

Siddaganga Swamiji : ಶಿವೈಕ್ಯರಾದ ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಿದ ನರೇಂದ್ರ ಮೋದಿ | Oneindia Kannada

ಬೆಂಗಳೂರು, ಜನವರಿ 21 : ಬಡವರು ಮತ್ತು ದಮನಿತ ಜನರ ಉದ್ಧಾರಕ್ಕಾಗಿಯೇ ತಮ್ಮಿಡೀ ಜೀವನವನ್ನು ತೇಯ್ದು, 111 ವರ್ಷ ಸಾರ್ಥಕ ಜೀವನ ಬದುಕಿದ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ಹಲವಾರು ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತುಮಕೂರಿನಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು 'ನಡೆದಾಡುವ ದೇವರು' ಎಂದು ವಿಶ್ವದಾದ್ಯಂತ ಜನಜನಿತರಾಗಿದ್ದ ಶಿವಕುಮಾರ ಸ್ವಾಮೀಜಿಗಳ ಆಶೀರ್ವಚನ ಪಡೆದು ಅವರಿಂದ ಸಲಹೆಗಳನ್ನು ಪಡೆದಿದ್ದರು.

Breaking News: ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದ 'ನಡೆದಾಡುವ ದೇವರು'Breaking News: ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದ 'ನಡೆದಾಡುವ ದೇವರು'

ನಿಸ್ವಾರ್ಥದಿಂದ ಸಮಾಜದ ಏಳಿಗೆಗೆ ಸೇವೆ ಮಾಡಿದ್ದಲ್ಲದೆ, ನಿಷ್ಕಲ್ಮಷ ವ್ಯಕ್ತಿತ್ವದಿಂದ ಕೋಟ್ಯಂತರ ಭಕ್ತಾದಿಗಳನ್ನು ಪಡೆದಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು, ಕೆಲ ದಿನಗಳ ಅನಾರೋಗ್ಯದ ನಂತರ ಜನವರಿ 21ರಂದು ಬೆಳಿಗ್ಗೆ 11.44 ನಿಮಿಷಕ್ಕೆ ದೈವಾಧೀನರಾದರು.

ಅವರ ಅಗಲಿಕೆಯಿಂದ ಇಡೀ ವಿಶ್ವದಾದ್ಯಂತ ಪಸರಿಸಿರುವ ಭಕ್ತಾದಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಕೈಂಕರ್ಯವನ್ನು ಕೊಂಡಾಡಿ ಜನರು ಸಂತಾಪ ಸೂಚಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಉದಾತ್ತ ವ್ಯಕ್ತಿತ್ವವನ್ನು ನೆನೆದು ಕೋಟ್ಯಂತರ ಭಕ್ತಾದಿಗಳ ಶೋಕದಲ್ಲಿ ಒಂದಾಗಿದ್ದಾರೆ.

ಲಕ್ಷಾಂತರ ಭಕ್ತರ ಶೋಕದಲ್ಲಿ ನಾನೂ ಭಾಗಿ

ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಜನರಿಗಾಗಿ, ಅದರಲ್ಲಿಯೂ ಬಡವರಿಗಾಗಿ ಮತ್ತು ದಮನಿತರಿಗಾಗಿ ಬದುಕಿದವರು. ಸಮಾಜದಲ್ಲಿರುವ ಪಿಡುಗುಗಳಾದ ಬಡತನ, ಹಸಿವು ಮತ್ತು ಸಾಮಾಜಿಕ ಅನ್ಯಾಯವನ್ನು ತೊಡೆದುಹಾಕಲು ತಮ್ಮ ಜೀವನವನ್ನೇ ತೊಡಗಿಸಿದ್ದರು. ವಿಶ್ವದಾದ್ಯಂತ ಹಬ್ಬಿಕೊಂಡಿರುವ ಅವರ ಲಕ್ಷಾಂತರ ಭಕ್ತರ ಶೋಕದಲ್ಲಿ ನಾನೂ ಇದ್ದೇನೆ ಎಂದಿದ್ದಾರೆ ಮೋದಿ.

ಶೋಷಿತರ ರಕ್ಷಣೆಗೆ ಸ್ವಾಮೀಜಿ ಶ್ರಮಿಸುತ್ತಿದ್ದರು

ಸಮಾಜದಲ್ಲಿ ಕಡೆಗಣಿಸಲಾದ ಜನರಿಗಾಗಿ ಅತ್ಯುತ್ತಮ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ನೀಡಲು ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಕುಮಾರಸ್ವಾಮಿಗಳು ಕಟಿಬದ್ಧರಾಗಿದ್ದರು. ನಿಸ್ವಾರ್ಥ ಸೇವೆ, ಆಧ್ಯಾತ್ಮ ಮತ್ತು ಶೋಷಿತರ ಹಕ್ಕುಗಳ ಸಂರಕ್ಷಣೆಗಾಗಿ ಅವರು ಯಾವತ್ತೂ ಶ್ರಮಿಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರಿನಲ್ಲಿ ಕೊಂಡಾಡಿದ್ದಾರೆ.

ಲಿಂಗೈಕ್ಯ 'ನಡೆದಾಡುವ ದೇವರು' ಶ್ರೀಗಳನ್ನು ಸ್ಮರಿಸಿದ ಟ್ವಿಟ್ಟಿಗರು ಲಿಂಗೈಕ್ಯ 'ನಡೆದಾಡುವ ದೇವರು' ಶ್ರೀಗಳನ್ನು ಸ್ಮರಿಸಿದ ಟ್ವಿಟ್ಟಿಗರು

ಸ್ವಾಮೀಜಿಗಳ ಆಶೀರ್ವಾದ ಪಡೆಯುವ ಸೌಭಾಗ್ಯ

ಶ್ರೀ ಸಿದ್ದಗಂಗಾ ಮಠವನ್ನು ಸಂದರ್ಶಿಸುವ ಮತ್ತು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ ನನಗೆ ಹಲವು ಬಾರಿ ದೊರೆತಿತ್ತು. ವಿಭಿನ್ನ ರೀತಿಯಲ್ಲಿ ಮತ್ತು ಬೃಹತ್ ಪ್ರಮಾಣದಲ್ಲಿ ಶ್ರೀ ಸಿದ್ದಗಂಗಾ ಮಠದಲ್ಲಿ ಮಾಡುತ್ತಿರುವ ಸೇವೆಗೆ ಸರಿಸಮಾನವಾದ ಇನ್ನೊಂದು ಸೇವೆಯಿಲ್ಲ ಎಂದು ನುಡಿದಿರುವ ನರೇಂದ್ರ ಮೋದಿಯವರು ಮಂಗಳವಾರ ಅಂತಿಮ ದರ್ಶನಕ್ಕೆಂದು ತುಮಕೂರಿಗೆ ಬರಲಿದ್ದಾರೆ.

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ

Array

ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿರ್ವಾತ ಆವರಿಸಿದೆ

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಟ್ವೀಟ್ ಮಾಡಿ ಶ್ರೀಗಳ ನಿಧನದಿಂದ ನೊಂದು ಕಂಬನಿ ಮಿಡಿದಿದ್ದಾರೆ. ಎಲ್ಲ ಧರ್ಮ ಮತ್ತು ಸಮುದಾಯಕ್ಕೆ ಸೇರಿದ ಲಕ್ಷಾಂತರ ಭಾರತೀಯರಿಂದ ಗೌರವಕ್ಕೆ ಪಾತ್ರರಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ದುಃಖವಾಗುತ್ತಿದೆ. ಅವರ ಅಗಲಿಕೆಯಿಂದ ಆಧ್ಯಾತ್ಮಿಕ ನಿರ್ವಾತ ಆವರಿಸಿಕೊಂಡಂತಾಗಿದೆ. ಅವರ ಹಿಂಬಾಲಕರಿಗೆ ನನ್ನ ಸಾಂತ್ವನ ಎಂದು ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ.

ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದರೆ ಸಿದ್ದಗಂಗಾ ಶ್ರೀ?ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದರೆ ಸಿದ್ದಗಂಗಾ ಶ್ರೀ?

'ಭಾರತ ರತ್ನ' ನೀಡುವಂತೆ ಅಭಿಮಾನಿಗಳ ಆಗ್ರಹ

'ಭಾರತ ರತ್ನ' ನೀಡುವಂತೆ ಅಭಿಮಾನಿಗಳ ಆಗ್ರಹ

ಕೋಟ್ಯಂತರ ಭಕ್ತರನ್ನು ಅಗಲಿ ಲಿಂಗೈಕ್ಯರಾದ 111 ವರ್ಷದ ಕರ್ಮಜೀವಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡುವಂತೆ ನರೇಂದ್ರ ಮೋದಿಯವರನ್ನು ಲಕ್ಷಾಂತರ ಭಕ್ತರು ಆಗ್ರಹಿಸುತ್ತಿದ್ದಾರೆ. ಈ ಆಗ್ರಹ ಶ್ರೀಗಳು ಬದುಕಿದ್ದಾಗಲಿಂದಲೂ ಕೇಳಿಬರುತ್ತಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಾದರೂ ನರೇಂದ್ರ ಮೋದಿಯವರು ಕೋಟ್ಯಂತರ ಭಕ್ತರ ಈ ಕೂಗಿಗೆ ಓಗೆಡುವರೆ, ಶ್ರೀಗಳಿಗೆ 'ಭಾರತ ರತ್ನ' ಪ್ರಶಸ್ತಿ ನೀಡುವರೆ? ಈ ಪ್ರಶಸ್ತಿಗೆ ಶ್ರೀ ಶಿವಕುಮಾರ ಸ್ವಾಮಿಜಿಗಳು ಅರ್ಹತೆ ಹೊಂದಿದ್ದಾರೆ.

English summary
PM Narendra Modi said, his holiness Dr. Sree Sree Sree Shivakumara Swamigalu lived for the people, especially the poor and vulnerable. Siddaganga seer Shri Shivakumara Swamiji breathed his last on 21st January at 11.44 AM in Tumakuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X