ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತರಹೇವಾರಿ ಹಕ್ಕಿಗಳು ಬಂದಿವೆ ತುಮಕೂರಿನ ಮೆಳೇಕೋಟೆ-ಭೀಮಸಂದ್ರ ಕೆರೆಗೆ

By ಡಾ.ರಜತ್
|
Google Oneindia Kannada News

ದೊಡ್ಡ ಆಲದ ಮರದ ಬುಡದಲ್ಲಿರುವ ಗಿಡದಂತಾಗಿದೆ ತುಮಕೂರು. ಇಲ್ಲಿನ ಜೀವ ವೈವಿಧ್ಯ, ಇತಿಹಾಸ, ಕಲೆ, ಜನಪದ, ಆಹಾರ ವಿಶೇಷ ಎಲ್ಲವೂ ಬೆಂಗಳೂರಿನ ನೆರಳಿನಿಂದ ಕಣ್ಣಿಗೆ ಕಾಣದಂತಾಗಿರುವುದು ಬಹಳ ಬೇಸರದ ಸಂಗತಿ. ನಗರಕ್ಕೆ ತುಂಬ ಹತ್ತಿರದಲ್ಲಿರುವ ಮೆಳೇಕೋಟೆ-ಭೀಮಸಂದ್ರ ಕೆರೆಗೆ ಬಂದಿರುವ ಹಕ್ಕಿಗಳನ್ನು ನೋಡಿದರೆ, ಖಂಡಿತ ಹೀಗನ್ನಿಸುತ್ತದೆ.

ಇಂಥ ಸ್ಥಳದ ವಾತಾವರಣವನ್ನು ಉಳಿಸಿಕೊಳ್ಳುವ, ಆಸಕ್ತರಿಗೆ ಈ ಬಗ್ಗೆ ಪ್ರಚಾರ ಮಾಡುವ ಕಾರ್ಯ ಏಕಾಗುತ್ತಿಲ್ಲ ಎಂದು ಅಚ್ಚರಿಯಾಗಿ, ವಿಶ್ವಾಸವನ್ನೇ ಚಿವುಟಿದಂತಾಗುತ್ತದೆ. ಪುಟ್ಟ ಮಕ್ಕಳಿಗೆ ಹೇಳುವಂತೆ ಇಲ್ಲಿನ ವಿಶೇಷಗಳನ್ನು ತೆರೆದಿಡುವ ಬಿ.ವಿ.ಗುಂಡಪ್ಪ ಮತ್ತು ಅವರಂಥ ಆಸಕ್ತರು ವಹಿಸಿದ ಶ್ರಮದ ಕಾರಣಕ್ಕೆ ನಮ್ಮ ಜಿಲ್ಲೆಯ ವೈಶಿಷ್ಟ್ಯದ ಮಾಹಿತಿ ಮುಂದಿನ ಪೀಳಿಗೆಗೆ ತಲುಪುತ್ತಿದೆ.[ಪ್ರೇಮ ಪಕ್ಷಿಗಳ ಪಾಲಿನ ಹನಿಮೂನ್ ಸ್ಪಾಟ್ ರಂಗನತಿಟ್ಟು!]

ಆದರೆ, ಪ್ರವಾಸೋದ್ಯಮ ಹಾಗೂ ಸಂರಕ್ಷಣೆ ದೃಷ್ಟಿಯಿಂದ ತುಮಕೂರು ಜಿಲ್ಲೆ ಸರಕಾರಕ್ಕೆ ಬೇಡವಾದ ಕೂಸು. ಮಧುಗಿರಿ ಏಕಶಿಲಾ ಬೆಟ್ಟ, ಜಯಮಂಗಲಿ ಕೃಷ್ಣಮೃಗ, ಸೋಪನಹಳ್ಳಿಯ ಕಾಡುಪಾಪ, ದೇವರಾಯನ ದುರ್ಗ, ಮಧುಗಿರಿಯಲ್ಲಿರುವ ತಿಮ್ಲಾಪುರ ಕರಡಿ ತಾಣ, ಶಿರಾದಲ್ಲಿರುವ ಕಗ್ಗಲಡು, ಇನ್ನು ತುಮಕೂರು ನಗರದ ಸಮೀಪವಿರುವ ಕೆರೆಗಳಿಗೆ ಬರುವ ಹಕ್ಕಿಗಳು...ಉಹುಂ, ಯಾವುದರ ಬಗ್ಗೆಯೂ ಮೆಚ್ಚುಗೆ ಸೂಚಿಸಬಹುದಾದಷ್ಟು ಕಾಳಜಿ ವ್ಯಕ್ತವಾಗುತ್ತಿಲ್ಲ.

ಈ ರೀತಿ ಕೊರಗುವುದು ಬೇಡ. ಅದರೆ ಇಲ್ಲಿರುವ ಹಕ್ಕಿಗಳ ಫೋಟೋಗಳನ್ನು ನೋಡಿ. ಇವೆಲ್ಲ ಬೆಂಗಳೂರಿಗೆ ಎಪ್ಪತ್ತು ಚಿಲ್ರೆ ಕಿಲೋಮೀಟರ್ ದೂರವಿರುವ ತುಮಕೂರಿನ ಭೀಮಸಂದ್ರ-ಮೆಳೇಕೋಟೆ ಕೆರೆಗೆ ಬಂದಿರುವಂಥವು. ಬಿಡುವಾದರೆ ಒಮ್ಮೆ ಬಂದು ಹೋಗಿ. ಕ್ಯಾಮೆರಾ, ಬೈನಾಕ್ಯುಲರ್ ಗಳು ಕಣ್ಣಿಗೆ ಹಬ್ಬದ ಸಂಭ್ರಮ ತರುತ್ತವೆ.[ಇದು ಸಿಂಹಗಳ ಜಗತ್ತು, ಎಷ್ಟೊಂದು ಇಂಟರೆಸ್ಟಿಂಗ್ ವಿಚಾರಗಳು!]

ಪರ್ಪಲ್ ಸ್ವಾಂಪ್ ಹೆನ್

ಪರ್ಪಲ್ ಸ್ವಾಂಪ್ ಹೆನ್

ಇದರ ಕಾಲು ತುಂಬ ಅಗಲವಾಗಿರುತ್ತದೆ. ಇದನ್ನು ಕನ್ನಡದಲ್ಲಿ ನೀರು ಕೋಳಿ ಅಂತ ಕರೆಯುತ್ತಾರೆ. ನೀರಿನ ಮೇಲೆ ತೇಳುವ ಎಲೆಗಳ ಮೇಲೆ ಓಡಾಡುವಂಥ, ಎಲ್ಲ ಋತುಮಾನದಲ್ಲೂ ಕಾಣಬಹುದಾದಂಥ ಪಕ್ಷಿ.

ಕಾಮನ್ ಮೈನಾ

ಕಾಮನ್ ಮೈನಾ

ಇದು ಕಾಮನ್ ಮೈನಾ. ಎಲ್ಲ ಕಡೆಯೂ ಸಾಮಾನ್ಯವಾಗಿ ಕಾಣಬಹುದಾದಂಥ ಪಕ್ಷಿ. ಕಾಗೆಗಳ ನಂತರ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪಕ್ಷಿ.

ಸಿಟ್ರಿನ್ ವಾಗ್ ಟೈಲ್

ಸಿಟ್ರಿನ್ ವಾಗ್ ಟೈಲ್

ಇವು ವಲಸೆ ಹಕ್ಕಿಗಳು. ಬರ್ಮಾ, ಹಿಮಾಲಯ ತಪ್ಪಲು ಅಲ್ಲಿಂದ ವಲಸೆ ಬಂದಂಥ ಪಕ್ಷಿ. ಇವುಗಳನ್ನು ಕನ್ನಡದಲ್ಲಿ ಕುಂಡೆ ಕುಸುಕ ಅಂತಲೇ ಕರೆಯುತ್ತಾರೆ.

ಬಾರ್ನ್ ಸ್ವಾಲೋ

ಬಾರ್ನ್ ಸ್ವಾಲೋ

ಇದು ಕೂಡ ವಲಸೆ ಹಕ್ಕಿ. ಇವುಗಳ ವಿಶೇಷ ಅಂದರೆ ಜೇಡಿಮಣ್ಣು, ಅದರ ಎಂಜಲಿನಿಂದ ಗೂಡು ಕಟ್ಟಿ, ಸಂತಾನೋತ್ಪತ್ತಿ ನಂತರ ಹಿಂತಿರುಗುತ್ತವೆ. ಗ್ರಾಮೀಣ ಭಾಗದಲ್ಲಿ ಕಟಾವು ಆದ ನಂತರ ನೆಲಮಟ್ಟದಲ್ಲಿ ತುಂಬ ವೇಗವಾಗಿ ಹಾರಾಡುವಂಥ ಪಕ್ಷಿ. ಕೀಟಗಳು ಇವುಗಳ ಆಹಾರ.

ಡ್ರಾಂಗೋ

ಡ್ರಾಂಗೋ

ಕುವೆಂಪು ಅವರ ಪುಸ್ತಕದ ಮೇಲೆ ಕಾಣುವ ಎರಡು ಹಕ್ಕಿಗಳನ್ನು ನೋಡಿದ್ದರೆ ಇವುಗಳ ಗುರುತು ತುಂಬ ಸುಲಭಕ್ಕೆ ಸಿಗುತ್ತದೆ. ಏಕೆಂದರೆ ಕುವೆಂಪು ಅವರು ಬಹಳ ಇಷ್ಟಪಡುತ್ತಿದ್ದ ಕಾಜಾಣ ಇದೇ. ಉತ್ತರ ಭಾರತದಲ್ಲಿ ಇವುಗಳನ್ನು ಕೊತ್ವಾಲ ಎನ್ನುತ್ತಾರೆ.

ಸೈಬೀರಿಯನ್ ಸ್ಟೋನ್ ಚಾಟ್

ಸೈಬೀರಿಯನ್ ಸ್ಟೋನ್ ಚಾಟ್

ಈ ಪಕ್ಷಿ ಆರು ಸಾವಿರ ಕಿಲೋಮೀಟರ್ ದೂರದಿಂದ ಬಂದಿದೆ. ಇದು ವಲಸೆ ಹಕ್ಕಿ. ಚಳಿಗಾಲದಲ್ಲಿ ಮಾತ್ರ ಭಾರತದಾದ್ಯಂತ ಕಾಣಿಸಿಕೊಳ್ಳುವ ಪಕ್ಷಿ

ಲಿಟ್ಲ್ ರಿಂಗ್ಡ್ ಪ್ಲೋವರ್

ಲಿಟ್ಲ್ ರಿಂಗ್ಡ್ ಪ್ಲೋವರ್

ಯುರೋಪ್ ಮತ್ತು ಪಶ್ಚಿನ ಏಷ್ಯಾದಲ್ಲಿ ನದಿಗಳ ಬಳಿ ಕಂಡು ಬರುತ್ತದೆ. ಇವು ವಲಸೆ ಹಕ್ಕಿಗಳು ನೆಲದ ಮೇಲೆ ಗೂಡು ಕಟ್ಟುವಂಥ ವಿಶಿಷ್ಟ ಪಕ್ಷಿ ಇದು.

ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್

ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್

ದ್ವೀಪದ ರೀತಿಯಲ್ಲಿ ಇರುವ ನೀರಿನ ಸೆಲೆ ಬಳಿ ಮೊಟ್ಟೆ ಇಡುತ್ತವೆ. ಇವುಗಳ ಮೊಟ್ಟೆ ನೆಲದ ಬಣ್ಣವೇ ಇರುತ್ತದೆ

ಪೈಡ್ ಕಿಂಗ್ ಫಿಷರ್

ಪೈಡ್ ಕಿಂಗ್ ಫಿಷರ್

ನೀರಿನ ಸೆಲೆ ಇರುತ್ತದೋ ಅಲ್ಲಿ ಕಾಣುವಂಥ ಪಕ್ಷಿ. ಕಪ್ಪು-ಬಿಳುಪು ಎರಡೂ ಬಣ್ಣ ಹೊಂದಿರುವ ಪಕ್ಷಿಗಳಿಗೆಲ್ಲ ಪೈಡ್ ಅಂತಲೇ ಹೆಸರು ಶುರುವಾಗುತ್ತದೆ. ಒಂದು ಜಾಗದಲ್ಲಿ ಹೆಲಿಕಾಪ್ಟರ್ ರೀತಿ ನಿಂತು, ಮೀನನ್ನು ಬೇಟೆ ಆಡುವಂಥ ಚಾಣಾಕ್ಷ ಪಕ್ಷಿ.

ಇಗ್ರೆಟ್

ಇಗ್ರೆಟ್

ಕನ್ನಡದಲ್ಲಿ ಇವುಗಳನ್ನು ಬೆಳ್ಳಕ್ಕಿ ಎನ್ನುತ್ತಾರೆ. ಬಿತ್ತನೆ ಹಾಗೂ ಕಟಾವಿನ ನಂತರ ಹೊಲಗಳಲ್ಲಿ ಓಡಾಡುತ್ತ ಕೀಟಗಳನ್ನು ಹೆಕ್ಕುತ್ತಾ ತಿನ್ನುತ್ತವೆ. ಕೀಟಗಳ ನಿಯಂತ್ರಣಕ್ಕೆ ಇವು ಸಹಕಾರಿ

ಇಂಡಿಯನ್ ಸಿಲ್ವರ್ ಬಿಲ್

ಇಂಡಿಯನ್ ಸಿಲ್ವರ್ ಬಿಲ್

ಗುಬ್ಬಚ್ಚಿಯ ಜಾತಿ ಪಕ್ಷಿ ಇದು. ಕಾಳುಗಳನ್ನು ತಿನ್ನುವುದಕ್ಕೆ ಅಂತಲೇ ಇರುವಂಥ ಕೊಕ್ಕು ಹೊಂದಿರುವ ಪಕ್ಷಿ ಇದು.

ಸ್ಮಾಲ್ ಗ್ರೀನ್ ಬೀ ಈಟರ್

ಸ್ಮಾಲ್ ಗ್ರೀನ್ ಬೀ ಈಟರ್

ಇವುಗಳನ್ನು ಜೇನು ಹಿಡುಕ ಅಂತ ಕರೆಯುತ್ತಾರೆ. ಬೆಳಗ್ಗೆ ವೇಳೆ ವಿದ್ಯುತ್ ಕಂಬಗಳ ಮೇಲೆ, ಮರಗಳ ತುದಿಯಲ್ಲಿ ಕೂತು ಜೇನು ನೊಣ ಹಿಡಿದು ತಿನ್ನುವಂಥ ಪಕ್ಷಿ.

ಗ್ರೇ ಹೆರಾನ್

ಗ್ರೇ ಹೆರಾನ್

ನಾರಿ ಕ್ಯಾತ ಅಂತ ಕೂಡ ಈ ಪಕ್ಷಿಯನ್ನು ಕನ್ನಡದಲ್ಲಿ ಕರೆಯುತ್ತಾರೆ. ಇದು ಉತ್ತರ ಭಾರತದಿಂದ ಬಂದಂಥ ಪಕ್ಷಿ. ಸಂತಾನೋತ್ಪತ್ತಿ ನಂತರ ಇಲ್ಲಿಂದ ವಾಪಸ್ ಹೋಗ್ತವೆ.

ಇಂಡಿಯನ್ ರೋಲರ್

ಇಂಡಿಯನ್ ರೋಲರ್

ಇದನ್ನು ಕನ್ನಡದಲ್ಲಿ ನೀಲಕಂಠ ಎಂದು ಕರೆಯುತ್ತಾರೆ. ಇದು ನಮ್ಮ ರಾಜ್ಯ ಪಕ್ಷಿ. ಕಾಡುಗಳು ಹಾಗೂ ಹಳ್ಳಿಗಾಡು ಪ್ರದೇಶದಲ್ಲಿ ಕಾಣಸಿಗುವ ಪಕ್ಷಿ.

ವೈಟ್ ಬ್ರೀಸ್ಟೆಡ್ ಕಿಂಗ್ ಫಿಷರ್

ವೈಟ್ ಬ್ರೀಸ್ಟೆಡ್ ಕಿಂಗ್ ಫಿಷರ್

ಎದೆಭಾಗ ಬಿಳಿ ಇರುವುದರಿಂದ ಇದಕ್ಕೆ ಈ ಹೆಸರು. ಮಿಡತೆ, ಸಣ್ಣ-ಪುಟ್ಟ ಹಾವುಗಳು ಇವುಗಳ ಆಹಾರ.

ಕಾಮನ್ ಕಿಂಗ್ ಫಿಷರ್

ಕಾಮನ್ ಕಿಂಗ್ ಫಿಷರ್

ನದಿ ಹಾಗೂ ಕೆರೆಗಳ ಅಂಚಿನಲ್ಲಿ ಕಾದು ಕೂತು ಮೀನುಗಳನ್ನು ಬೇಟೆ ಆಡುವಂಥ ಪಕ್ಷಿ ಇದು.

ರೆಡ್ ವ್ಯಾಟಲ್ ಲ್ಯಾಪ್ ವಿಂಗ್

ರೆಡ್ ವ್ಯಾಟಲ್ ಲ್ಯಾಪ್ ವಿಂಗ್

ಇದನ್ನು ಟಿಟ್ಟಿಭ ಹಕ್ಕಿ ಅಂತ ಕೂಡ ಕರೆಯುತ್ತಾರೆ. ಕೆರೆ ಅಂಚಿನಲ್ಲಿ ಆಹಾರಕ್ಕಾಗಿ ಅರಸುತ್ತವೆ. ಕಾಡು ಪ್ರಾಣಿಗಳಿಗೆ ಹಾಗೂ ಹಕ್ಕಿಗಳಿಗೆ ಅಪಾಯದ ಮುನ್ಸೂಚನೆ ನೀಡುವಂಥ ಪಕ್ಷಿ ಇದು.

ಲಿಟ್ಲ್ ಗ್ರೀಬ್

ಲಿಟ್ಲ್ ಗ್ರೀಬ್

ಬಾತುಕೋಳಿಗಳಿಂತ ಚಿಕ್ಕದಾಗಿರುತ್ತವೆ. ಕಪ್ಪೆ ಮರಿ, ಮೀನು, ಕೀಟಗಳು ಇವುಗಳ ಆಹಾರ.

ಕಾಮನ್ ಸ್ಯಾಂಡ್ ಪೈಪರ್

ಕಾಮನ್ ಸ್ಯಾಂಡ್ ಪೈಪರ್

ಇದು ವಲಸೆ ಹಕ್ಕಿ. ಕರ್ನಾಟಕ, ಆಂಧ್ರ, ತಮಿಳುನಾಡಿಗೆ ತುಂಬ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ.

ಬ್ರಹ್ಮಿನಿ ಕೈಟ್

ಬ್ರಹ್ಮಿನಿ ಕೈಟ್

ಕನ್ನಡದಲ್ಲಿ ಗರುಡ ಅಂತ ಕರೆಯುತ್ತಾರೆ. ಕೆರೆಗಳ ಸುತ್ತ ಮುತ್ತ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

English summary
Various birds are found in Tumakuru city near Melehalli-Bheemasandra lake. Photos and article by Dr.Rajath
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X