ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೇಶ್ಯಾವಾಟಿಕೆಗೆ ಒಲ್ಲೆ ಎಂದಿದ್ದಕ್ಕೆ ಆಕೆಯನ್ನು ಪತಿ, ಮಾವನೇ ಕೊಂದರೆ?

ಪಾವಗಡದಲ್ಲಿ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಹಿಳೆಯ ಪತಿ ಹಾಗೂ ಮಾವ ಒತ್ತಾಯಿಸಿದ್ದಾರೆ. ಒಪ್ಪದಿದ್ದಾಗ ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ

By ತುಮಕೂರು ಪ್ರತಿನಿಧಿ
|
Google Oneindia Kannada News

ಪಾವಗಡ, ಮೇ 9: ತುಮಕೂರು ಜಿಲ್ಲೆ ಪಾವಗಡದಲ್ಲಿ ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ನಂದಿನಿ ಎಂಬ ಗೃಹಿಣಿಯ ಪ್ರಕರಣಕ್ಕೆ ಹೊಸ ಆಯಾಮ ದೊರೆತಿದೆ. ಪತಿ ಮೋಹನ್ ಹಾಗೂ ಮಾವ ಹನುಮಂತರಾಯಪ್ಪ ಸೇರಿ ವ್ಯಭಿಚಾರಕ್ಕೆ ಒತ್ತಾಯಿಸಿದ್ದು, ಅದನ್ನು ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ನಂದಿನಿ ಸಂಬಂಧಿಕರು ಅರೋಪ ಮಾಡಿದ್ದಾರೆ.

ಮೃತ ನಂದಿನಿಯ ಮಾವ ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ. ಇದರಲ್ಲಿ ನಂದಿನಿಯನ್ನು ತೊಡಗಿಸಿ, ಹಣ ಮಾಡುವ ಇರಾದೆ ಆತನಿಗಿತ್ತು. ಆದರೆ ಯಾವಾಗ ನಂದಿನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರೋ ಪತಿ ಮೋಹನ್ ಹಾಗೂ ಮಾವ ಹನುಮಂತರಾಯಪ್ಪ ಸೇರಿ, ಆಕೆಯನ್ನು ಕೊಲೆ ಮಾಡಿ, ನೇಣಿಗೆ ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.[ತುಮಕೂರಿನಲ್ಲಿ ಅತ್ತೆ-ಮಾವನ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ]

Pavagada woman allegedly murdered by husband and father in law

ತವರಿನಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸಿದರು. ಹಣ ಇಲ್ಲ ಎಂದಾಗ ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾರೆ ಎಂದು ಮೃತಳ ತಾಯಿ ಇಂದ್ರಮ್ಮ ಆರೋಪ ಮಾಡಿದ್ದಾರೆ. ಮೊದಲಿಗೆ ವರದಕ್ಷಿಣೆ ಕಿರುಕುಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಅದರ ಜತೆಗೆ ವೇಶ್ಯಾವಾಟಿಕೆಗೆ ಬಲವಂತ ಮಾಡಿದ ಆರೋಪ ಕೂಡ ಸೇರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಸದ್ಯಕ್ಕೆ ನಂದಿನಿಯ ಪತಿ ಮೋಹನ್ ನನ್ನು ಪೊಲೀಸ್ ಬಂಧಿಸಿದ್ದಾರೆ. ಇನ್ನು ಅತ್ತೆ ಪಾರಿಜಾತಾ ಹಾಗೂ ಮಾವ ಹನುಮಂತರಾಯಪ್ಪ ತಲೆ ಮರೆಸಿಕೊಂಡಿದ್ದು, ಶೋಧ ಮುಂದುವರಿದಿದೆ.[ರಾಯಚೂರು: ಪುಡಾರಿಯ ಪುಂಡಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ]

ಅಂತೂ ಮೇ 11ರಂದೇ ದ್ವಿತೀಯ ಪಿಯುಸಿ ಫಲಿತಾಂಶ ಎಂಬುದು ಖಚಿತವಾಗಿದೆ. ಅಂದು ಮಧ್ಯಾಹ್ನ 3 ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಮರುದಿನ ಆಯಾ ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ಈ ಬಗ್ಗೆ ಪದವಿಪೂರ್ವ ಶಿಕ್ಷಣಾ ಇಲಾಖೆ ನಿರ್ದೇಶಕಿ ಸಿ.ಶಿಖಾ ಮಾಹಿತಿ ನೀಡಿದ್ದಾರೆ.

English summary
Tumakuru district, Pavagada taluk woman Nandini allegedly murdered by husband and father in law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X