ಗೂಳೂರಿನ ತೋಪಿನಲ್ಲಿ ವಿಧವೆ ಮೇಲೆ ಗ್ಯಾಂಗ್ ರೇಪ್

Posted By:
Subscribe to Oneindia Kannada

ತುಮಕೂರು, ಡಿಸೆಂಬರ್ 16:ನಿರ್ಭಯಾ ದೌರ್ಜನ್ಯ ಆಗಿ ಇವತ್ತಿಗೆ 4 ವರ್ಷ ತುಂಬಿತು, ಎಲ್ಲಿದೆಯೋ ನ್ಯಾಯ? ಎಂದು ದೇಶ ಚೀರುತ್ತಿರುವಾಗಲೇ ತುಮಕೂರಿನ ನಾಲ್ಕು ಕಿಮೀ ದೂರದ ಗೂಳೂರಿನಲ್ಲಿ 34 ವರ್ಷದ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿರುವ ಘಟನೆ ಜರುಗಿದೆ.

ಆಟೋ ಚಾಲಕ ಹಾಗೂ ಮತ್ತವನ ಸ್ನೇಹಿತ ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದು ಗೂಳೂರು ಬಳಿಯ ನೀಲಗಿರಿ ತೋಪಿನಲ್ಲಿ ಕರೆತಂದು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಮಂಗಳವಾರ ಅತ್ಯಾಚಾರವೆಸಗಿ ದುಷ್ಕರ್ಮಿಗಳು ಅಲ್ಲಿಯೇ ಬಿಟ್ಟುಹೋಗಿದ್ದರು. 2 ದಿನಗಳ ನಂತರ ಯಾರಿಗೋ ಆಕೆಗೆ ಸಿಕ್ಕಿ ಆಸ್ಪತ್ರೆಗೆ ಸೇರಿಸಿದ್ದು ಆಕೆ ಇನ್ನು ಅರೆ ಪ್ರಜ್ಞಾವಸ್ಥೆಯಲ್ಲಿಯೇ ಇದ್ದಾರೆ.[ನಿರ್ಭಯಾ ದೌರ್ಜನ್ಯಕ್ಕೆ 4 ವರ್ಷ, ಎಲ್ಲಿದೆಯೋ ನ್ಯಾಯ?]

Over the gang rape of a 34-year-old widow

ವಿಧವೆ ಮೂಲತಃ ಚಿಕ್ಕನಾಯಕನ ಹಳ್ಳಿಯವಳಾಗಿದ್ದು, ಕೆಲಸದ ನಿಮಿತ್ತ ತುಮಕೂರಿಗೆ ಆಗಮಿಸಿದ್ದಳು. ತನ್ನ ನಿಶ್ಚಿತ ಜಾಗ ತಲುಪಲು ಆಟೋದವನ ಸಹಾಯ ಬೇಡಿದ್ದಾಳೆ. ಆದರೆ ಆಟೋದವನು ಆಕೆಯ ಪೂರ್ವಪರ ವಿಚಾರಿಸಿ ಏಕಾಂಗಿ ಎಂದು ತಿಳಿದು ಆತನ ಸ್ನೇಹಿತನೊಂದಿಗೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.[ಜೆಪಿ ನಗರ ಗ್ಯಾಂಗ್ ರೇಪ್ ಆರೋಪಿಗಳ ಬಂಧನ]

ಪ್ರಸ್ತುತ ಅಕೆ ಆಸ್ಪತ್ರೆಯಲ್ಲಿಯೆ ಇದ್ದು, ಇನ್ನು ಸಹಜ ಸ್ಥಿತಿಗೆ ತುಲುಪಿಲ್ಲ. ಅಕೆಯನ್ನು ಜಿಲ್ಲಾ ಪೊಲೀಸ್ ಅಧಿಕಾರಿ ಎಸ್ ಪಿ ಕಾರ್ತಿಕ್ ರೆಡ್ಡಿ ಭೇಟಿ ಮಾಡಿದರು. ಹಾಗು ಪ್ರಕರಣವನ್ನು ದಾಖಲಿಸಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 34-year-old widow was gang-raped by auto driver and his friend in Tumakur near gulur.
Please Wait while comments are loading...