ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನಲ್ಲಿ ಕುಡಿಯುವ ನೀರು ಯೋಜನೆಗೆ ಮುತ್ತಪ್ಪ ರೈ ಚಾಲನೆ

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಮಾರ್ಚ್ 8: ಜಯ ಕರ್ನಾಟಕ ಸಂಘಟನೆಯು ತುಮಕೂರು ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು ಒದಗಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ ಬುಧವಾರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ಚಾಲನೆಯನ್ನು ನೀಡಿದರು.

ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ದಿನಗಳಲ್ಲಿ ಸರಕಾರವು ಜನತೆಗೆ ಕುಡಿಯುವ ನೀರೊದಗಿಸುವಲ್ಲಿ ವಿಫಲವಾಗಿದೆ. ನಮ್ಮ ಈ ಯೋಜನೆ ಅನುಷ್ಠಾನದಿಂದ ಸರಕಾರ ಎಚ್ಚೆತ್ತು, ಜನತೆಗೆ ಕುಡಿಯುವ ನೀರೊದಗಿಸಲಿ. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಗೂ ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.[ಮಾ.8ರಂದು ನೀರಿನ ಬವಣೆ ನೀಗಿಸುವ ಕಾರ್ಯಕ್ಕೆ ಮುತ್ತಪ್ಪ ರೈ ಚಾಲನೆ]

Muttappa rai

ಎಲ್ಲ ಜಿಲ್ಲೆಯ ಸಂಘಟನೆ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿರುವ ಕಡೆ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಜಯಕರ್ನಾಟಕ ರಾಜ್ಯಾಧ್ಯಕ್ಷ ಎಚ್.ಎನ್ ದೀಪಕ್, ರಾಜ್ಯ ಕಾರ್ಯಾಧ್ಯಕ್ಷ ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುದೀಪ್ ಕುಮಾರ್, ರಾಜ್ಯ ವಲಯ ಕಾರ್ಯದರ್ಶಿ ಸೋಮಶೇಖರ್, ಹೋಟೆಲ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಹಾಜರಿದ್ದರು

English summary
Free drinking water project by Jaya Karnataka organisation in Tumakuru inaugurated by Muttappa rai on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X