ತುಮಕೂರಿನಲ್ಲಿ ಎಚ್ಎಎಲ್ ಕೇಂದ್ರ: ಪರಿಸರ ಇಲಾಖೆ ಒಪ್ಪಿಗೆ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 12 : ತುಮಕೂರು ಜಿಲ್ಲೆಯ ಗುಬ್ಬಿ ಬಿದರೆಹಳ್ಳ ಕಾವಲ್ ನಲ್ಲಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಹೆಲೆಕಾಪ್ಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ.

ರಾಜಧಾನಿಯಿಂದ ಅಂದಾಜು 100 ಕಿ.ಮೀ ದೂರದಲ್ಲಿ ಈ ಘಟಕವಿದ್ದು, 2016 ಜ.3 ರಂದು ಪ್ರಧಾನಿ ನೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಹೆಲಿಕಾಪ್ಟರ್ ಉತ್ಪಾದನೆಗೆ ಮುಂದಾಗಿರುವ ಎಚ್ ಎಎಲ್ 2017 ರ ಜೂನ್ ನಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಕೇಳಿತ್ತು.

2017 ಡಿಸೆಂಬರ್ ನಲ್ಲಿ ಇಲಾಖೆ ಒಪ್ಪಿಗೆ ನೀಡಿದೆ. ಅಂದಾಜು 610 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣವಾಗಲಿದ್ದು, ಲಘು ಯುದ್ಧ ಹೆಲೆಕಾಪ್ಟರ್, ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ ಧ್ರುವ್ ಉತ್ಪಾದನೆ ಒಳಗೊಂಡಂತೆ ಕೇವಲ ಹೆಲೆಕಾಪ್ಟರ್ ಉತ್ಪಾದನೆ ಮತ್ತು ಪರೀಕ್ಷೆ ಗೆ ಮಾತ್ರ ಸೀಮಿತವಾಗಿರಲಿದೆ. ಸೇನೆ ಮತ್ತು ನಾಗರಿಕ ಸೇವೆಗಿರುವ 3 ರಿಂದ 12 ಟನ್ ತೂಕದ ಹೆಲಿಕಾಪ್ಟರ್ ಇಲ್ಲಿ ನಿರ್ಮಾಣವಾಗಲಿದೆ.

MoFE nods for Helicopter Manufacturing unit in Tumkur

ಈ ಘಟಕದ ಮೂಲಕ ಪ್ರತಿ ವರ್ಷ 50 ಹೆಲಿಕಾಪ್ಟರ್ ಉತ್ಪಾದನಾ ಗುರಿ ಹೊಂದಿದೆ. ಶಂಕುಸ್ಥಾಪನೆ ಸಂದರ್ಭದಲ್ಲಿ 2018 ಅಂತ್ಯಕ್ಕೆ ಘಟಕದಿಂದ ಮೊದಲ ಮೇಕ್ ಇನ್ ಇಂಡಿಯಾ ಹೆಲಿಕಾಪ್ಟರ್ ಉತ್ಪಾದನೆಯಾಗಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಎಂಎಲ್ ಎಚ್ ವಿನ್ಯಾಸ ಹಂತದಲ್ಲಿದ್ದು, ಗಂಟೆಗೆ 275 ಕಿ.ಮೀ ವೇಗ, 28 ಜನರನ್ನು ಅಥವಾ 4500 ಕೆಜಿ ವಸ್ತುವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ministry of forest and ecology has given nod to Hindustan Aeronautics Limited for Helicopter manufacturing unit Gubbi Bidarehalli Kaval in Tumkur district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ