ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ್ಮಿಶ್ರ ಸರ್ಕಾರ ಪಥನದ ಬಗ್ಗೆ ಭವಿಷ್ಯ ನುಡಿದಿದ್ದಾರೆ ಸದಾನಂದಗೌಡ

By Manjunatha
|
Google Oneindia Kannada News

ತುಮಕೂರು, ಜುಲೈ 15: ಸಮ್ಮಿಶ್ರ ಸರ್ಕಾರ ಯಾವಾಗ ಹೇಗೆ ಪಥನವಾಗುತ್ತದೆ ಎಂದು ಬಿಜೆಪಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಮಂತ್ರಿ ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ತುಮಕೂರಿನ ಕುಣಿಗಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುಗಿಯುವ ಮೊದಲಿಗೆ ಸಮ್ಮಿಶ್ರ ಸರ್ಕಾರ ಪಥನ ಶತ ಸಿದ್ಧ ಎಂದು ಅವರು ಭವಿಷ್ಯ ನುಡಿದರು.

ಶಾಕಿಂಗ್ : 2019ರಲ್ಲಿ ಹಾಲಿ ಬಿಜೆಪಿ ಸಂಸದರನೇಕರು ಸೋಲ್ತಾರೆ!ಶಾಕಿಂಗ್ : 2019ರಲ್ಲಿ ಹಾಲಿ ಬಿಜೆಪಿ ಸಂಸದರನೇಕರು ಸೋಲ್ತಾರೆ!

ಲೋಕಸಭೆ ಚುನಾವಣೆ ಸಮಯದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಎದ್ದು ಮೈತ್ರಿ ಸರ್ಕಾರ ಮುರಿದು ಬೀಳುತ್ತದೆ, ಇದು ಖಾಯಂ ಎಂದು ಸದಾನಂದಗೌಡ ಅವರು ಆತ್ಮವಿಶ್ವಾಸದಿಂದ ಹೇಳಿದರು.

Minister Sadananda Gowda said coalition government will fall soon

ಬಜೆಟ್‌ ಬಗ್ಗೆ ಬೇಸರವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿ ಮಂಡಿಸಿದ ಬಜೆಟ್ ಪ್ರಾದೇಶಿಕ ಅಸಮತೋಲನದಿಂದ ಕೂಡಿದೆ. ಅದೊಂದು ಅರ್ಥವಿಲ್ಲದ ಬಜೆಟ್ ಎಂದು ಅವರು ಟೀಕಿಸಿದರು.

ಲೋಕಸಭಾ ಚುನಾವಣೆ ಯಾವಾಗ? ಸುಳಿವು ನೀಡಿದ ಅಮಿತ್ ಶಾಲೋಕಸಭಾ ಚುನಾವಣೆ ಯಾವಾಗ? ಸುಳಿವು ನೀಡಿದ ಅಮಿತ್ ಶಾ

ತಾಲೂಕಿನಲ್ಲಿ ಬಿಜೆಪಿ ಸೋಲಲು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರಾಜೇಶ್‍ಗೌಡ ಅವರ ಪಕ್ಷ ವಿರೋಧ ಚಟುವಟಿಕೆ ಕಾರಣ. ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ಒತ್ತಾಯಿಸಿದಾಗ, ಸೂಕ್ತ ದಾಖಲೆಗಳನ್ನು ನೀಡಿದರೆ ಖಂಡಿತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

English summary
Central minister Sadananda Gowda said coalition government will fall very soon. He said they fight for Lokasabha election ticket with each other and coalition will be broken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X