ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ: ಭಕ್ತಾದಿಗಳ ನೂಕು-ನುಗ್ಗಲು

|
Google Oneindia Kannada News

Recommended Video

Siddaganga Swamiji : ಡಾ ಶಿವಕುಮಾರ ಸ್ವಾಮಿಗಳಿಗೆ ವಿದಾಯ ಹೇಳಲು ಸಜ್ಜಾಗುತ್ತಿರುವ ಸಿದ್ದಗಂಗಾ | Oneindia Kanndaa

ತುಮಕೂರು, ಜನವರಿ 22: ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ನಿಗದಿ ಮಾಡಿದ್ದ ಅವಧಿ ಮುಕ್ತಾಯವಾಗಲು ಬರುತ್ತಿದ್ದಂತೆ ಭಕ್ತಾದಿಗಳಲ್ಲಿ ನೂಕು-ನುಗ್ಗಲು ಪ್ರಾರಂಭವಾಗಿ ಮಠದ ಬಳಿ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು.

3:30 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆನಂತರ ಅಂತಿಮ ವಿಧಿ ವಿಧಾನ ಕಾರ್ಯ ಪ್ರಾರಂಭ ಆಗುತ್ತವೆ ಎನ್ನಲಾಗಿತ್ತು. ಹಾಗಾಗಿ ಲಕ್ಷಾಂತರ ಮಂದಿ ಅಂತಿಮ ದರ್ಶನಕ್ಕಾಗಿ ಸಾಲುಗಳಲ್ಲಿ ನಿಂತು ಕಾಯುತ್ತಿದ್ದರು.

ಋತುಮತಿಯಾಗಿದ್ದ ನಮ್ಮನ್ನೂ ಒಳಗೇ ಕೂರಿಸಿ ಊಟ ಹಾಕಿಸಿದ ಮಹಾಮಹಿಮ ಶ್ರೀ!ಋತುಮತಿಯಾಗಿದ್ದ ನಮ್ಮನ್ನೂ ಒಳಗೇ ಕೂರಿಸಿ ಊಟ ಹಾಕಿಸಿದ ಮಹಾಮಹಿಮ ಶ್ರೀ!

ಸಾರ್ವಜನಿಕ ದರ್ಶನದ ಅವಧಿ ಮುಗಿಯುತ್ತಾ ಬಂದಷ್ಟು ಭಕ್ತಾದಿಗಳಲ್ಲಿ ಆತಂಕ ಹೆಚ್ಚಾಗಿ ಕೆಲ-ಕಾಲ ನೂಕುನುಗ್ಗಲು ಉಂಟಾಯಿತು. ಆದರೆ ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತೆಗೆದುಕೊಂಡರು.

lakhs of people pay last tribute to Shivakumara swami

ಕ್ಯಾತಸಂದ್ರ ಗೇಟ್‌, ಗುಬ್ಬಿ ಗೇಟ್‌ ಸೇರಿ ಶ್ರೀ ಮಠಕ್ಕೆ ಬರುವ ಬಹುತೇಕ ದಾರಿಗಳಲ್ಲಿ ಭಕ್ತಾದಿಗಳು ಸಾಲಿನಲ್ಲಿ ಬಂದು ಶ್ರೀಗಳ ಅಂತಿಮ ದರ್ಶನ ಮಾಡಿದರು. ಸಾಲಿನಲ್ಲಿ ನಿಂತವರಿಗೆ ಸ್ಥಳೀಯರೆ ಆಹಾರ, ನೀರಿನ ವ್ಯವಸ್ಥೆ ಮಾಡಿದ್ದರು. ಸಮಯ ಮುಗಿದರೂ ಸಹ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಲೇ ಇದ್ದಾರೆ.

ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸಮಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸಮಯದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

ಶ್ರೀಗಳ ಅಂತಿಮ ದರ್ಶನಕ್ಕೆ ಬಂದವರಿಗೆ ಸಿದ್ದಗಂಗೆ ಮತ್ತು ಇನ್ನೂ ಕೆಲವು ಕಡೆ ಉಚಿತ ವಸತಿ ಸೌಲಭ್ಯಗಳನ್ನು ಸಹ ನೀಡಲಾಗಿದೆ. ಉಚಿತ ಅನ್ನದಾಸೋಹಗಳು ಸಹ ನಡೆದವು.

ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು!ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು!

ಸಾರ್ವಜನಿಕ ದರ್ಶನದ ಬಳಿಕ ಇದೀಗ ಸರ್ಕಾರದ ವತಿಯಿಂದ ಗೌರವ ಶ್ರೀಗಳಿಗೆ ಗೌರವ ಸಲ್ಲಿಸಲಾಗುತ್ತದೆ. ಆ ನಂತರ ಅಂತಿಮ ವಿಧಿ ವಿಧಾನಗಳು ಆರಂಭವಾಗುತ್ತವೆ. ಈಗಾಗಲೇ ಕ್ರಿಯಾಸಮಾಧಿ ಸಿದ್ದಗೊಂಡಿದೆ.

English summary
Lakhs of people pay last tributes to Shivakumara Swami in Siddaganga mutt Tumakur. last rites will begin soon. Government also paying respect to Shivakumara Swami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X