ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಹರಿಹಾಯ್ದ ರಾಮಲಿಂಗಾರೆಡ್ಡಿ

|
Google Oneindia Kannada News

ತುಮಕೂರು, ನವೆಂಬರ್ 25 : ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಬರಲು ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತುಮಕೂರಿನಲ್ಲಿ ಶನಿವಾರ ನ.25ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಿಲಿಟರಿ ಸರಿಯಾಗಿ ಕಾರ್ಯ ನಿರ್ವಹಿದೆ ಇದ್ದರೆ ಬಾಂಗ್ಲಾ ವಲಸಿಗರು ಬರಲು ಸಾಧ್ಯವಿಲ್ಲ ಆದರೆ ಇದು ರಾಜ್ಯ ಸರ್ಕಾರದ ವೈಫಲ್ಯ ಎಂದು ಅನಂತ್ ಕುಮಾರ್ ಹೆಗಡೆ ಹಾಳುತ್ತಾರೆ ಆದರೆ ಉತ್ತರನ ಪೌರುಷ ಒಲೆಯ ಮುಂದೆ ಅಷ್ಟೇ ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಬರಲು ಕೇಂದ್ರ ಸರ್ಕಾರವೇ ಕಾರಣ, ಕಾವೇರಿ, ಮಹಾದಾಯಿ ಅಂತಹ ವಿಚಾರವನ್ನು ಕೇಂದ್ರದ ಮುಂದೆ ಚರ್ಚಿಸಲು ನಾಯಕರುಗಳಿಗೆ ಆಗಿಲ್ಲ ಎಂದರು.

Karnataka Home Minister Accuses Union Government failed to curb Bangla migration

ವಕೀಲರಿಗೆ ವಿನಯ್ ಕುಲಕರ್ಣಿ ಬೆದರಿಕೆ ಹಾಕಿರುವ ವಿಚಾರ ಕುರಿತು ಮಾತನಾಡಿ, ತನಿಖೆ ನಂತರವೇ ಅದು ವಿನಯ್ ಕುಲಕರ್ಣಿ ಅವರ ಧ್ವನಿ ಹೌದೋ ಅಥವಾ ಅಲ್ಲವೋ ಎಂದು ತಿಳಿಯುತತ್ದೆ. ಧ್ವನಿ ಮುದ್ರಣ ನೀಡಿದರೆ ಪರಿಶೀಲನೆಗಾಗಿ ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯವರು ವಿನಯ್ ಕುಲಕರ್ಣಿ ಅವರ ರಾಜಿನಾಮೆ ಕೇಳುತ್ತಿದ್ದಾರೆ. ಬಿಜೆಪಿಯವರು ಮೋದಿಯವರನ್ನೊಬ್ಬರನ್ನು ಬಿಟ್ಟು ಎಲ್ಲರ ರಾಜೀನಾಮೆಯನ್ನು ಕೇಳುತ್ತಾರೆ ಎಂದು ಹೇಳಿದರು.

English summary
Karnataka Home Minister Ramalinga Reddy alleged that Union Government has failed to curb Bangla infiltration in the border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X