ದಿನೇಶ್ ಗುಂಡೂರಾವ್ ಕಲಬೆರಕೆ- ಕುಲಬೆರಕೆ ಎಂದ ಸೊಗಡು ಶಿವಣ್ಣ

Posted By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಏಪ್ರಿಲ್ 16 : "ದಿನೇಶ್ ಗುಂಡೂರಾವ್ ಕಲಬೆರಕೆ ಹಾಗೂ ಕುಲ ಬೆರಕೆಯಿಂದ ಹುಟ್ಟಿರುವವನು. ನಮ್ಮಲ್ಲಿ ಸನ್ಯಾಸಿಗಳಿಗೆ ಹಾಗೂ ಸ್ವಾಮಿಗಳಿಗೆ ವಿಶೇಷ ಗೌರವ ಇದೆ. ಅವನು ನಾಲ್ಕು ಬಾರಿ ಶಾಸಕನಾದರೂ ಶಬ್ದ ಬಳಕೆಯ ಬಗ್ಗೆ ಅರಿವಿಲ್ಲ. ಕಲಬೆರಕೆ ಹಾಗೂ ಕುಲಬೆರಕೆ ಎರಡನ್ನೂ ಬರೆಸಿಕೊಂಡು ಹುಟ್ಟಿರುವವನು" ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಆ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ ಸೊಗಡು ಶಿವಣ್ಣ, ಅವನ ಅಪ್ಪ- ಅಮ್ಮ ಆ ಥರ ಅಲ್ಲ. ಆದರೆ ಅವನಿಗೆ ಬಂದಿದೆ. ಅವನು ಈ ಕಡೆ ಬಂದಾಗ ನಾವೂ ತಕ್ಕದಾಗಿಯೇ ಹೇಳಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಆ ರೀತಿ ಮಾತನಾಡಿದ್ದು ನಮ್ಮ ದೇಶಕ್ಕೆ ಹಾಗೂ ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ ಎಂದು ಶಿವಣ್ಣ ಹೇಳಿದರು.

ಧೈರ್ಯವಿದ್ದರೆ ಅವನ ಹೆಂಡತಿಯನ್ನು ಹಿಂದೂ ಮಠ- ಮಂದಿರಗಳಿಗೆ ಕರೆದುಕೊಂಡು ಹೋಗಲಿ ಎಂದು ಸವಾಲು ಹಾಕಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ದಿನೇಶ್ ಗುಂಡೂರಾವ್ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ನಂತರ ಸ್ವತಃ ದಿನೇಶ್ ಗುಂಡೂರಾವ್, ಆ ರೀತಿ ಹೇಳಿಕೆ ನೀಡಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದರು.

Karnataka Elections: Sogadu Shivanna controversial statement against Dinesh Gundu Rao

ಆದರೆ, ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Elections 2018: Former minister, BJP leader Sogadu Shivanna controversial statement in Tumakuru against Congress leader Dinesh Gundu Rao, for his ramarks against Uttar Pradesh chief minister Yogi Adityanath.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ