ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಟನೆ ನಡುವೆಯೂ ಕೊರಟಗೆರೆಯಲ್ಲಿ ಕಾಲಾ ಪ್ರದರ್ಶನ

By Nayana
|
Google Oneindia Kannada News

ತುಮಕೂರು, ಜೂನ್ 8: ರಜನಿಕಾಂತ್ ಅಭಿನಯದ ಕಾಲಾ ಚಲನಚಿತ್ರ ಕರ್ನಾಟಕದಲ್ಲಿ ವಿವಾದದ ನಡುವೆಯೂ ಗುರುವಾರ ಕೆಲವು ಕಡೆ ಪ್ರದರ್ಶನ ಕಂಡಿದೆ. ಶುಕ್ರವಾರ ತುಮಕೂರಿನ ಕೊರಟಗೆರೆಯಲ್ಲಿ ಒಂದೇ ಒಂದು ಚಿತ್ರಮಂದಿರದಲ್ಲಿ ಮಾತ್ರ ಪ್ರದರ್ಶನ ಕಂಡಿದೆ.

ತುಮಕೂರು ಜಿಲ್ಲೆಯ 11 ತಾಲೂಕುಗಳ ಪೈಕಿ ಕೊರಟಗೆರೆಯಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ, ಪಾವಗಡ, ತುಮಕೂರು, ಶಿರಾ ಕಡೆಯಿಂದ ಕೊರಟಗೆರೆಗೆ ಪ್ರೇಕ್ಷಕರು ಆಗಮಿಸುತ್ತಿದ್ದಾರೆ. ಕನ್ನಡಪರ ಸಂಘಟನೆಯ ಪ್ರತಿಭಟನೆಯ ನಡುವೆಯೂ ಚಲನಚಿತ್ರ ಬಿಡುಗಡೆ ಮಾಡಿದ್ದಾರೆ.

'ಕಾಲಾ' ವಿಮರ್ಶೆ: 'ರಾಜಕಾರಣಿ' ರಜನಿಗಾಗಿ 'ಕ್ರಾಂತಿಕಾರಿ' ಸಿನಿಮಾ.!

ಕನ್ನಡ ಪರ ಸಂಘಟನೆಯ ಕಾರ್ಯಕರ್ತರಿಂದ ಚಲನಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು, ಕಾಲಾ ಚಿತ್ರವನ್ನು ತಡೆಹಿಡಿಯುವಂತೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿದರು. ಕೊರಟಗೆರೆ ಪಟ್ಟಣದ ಶಿವಗಂಗಾ ಚಿತ್ರಮಂದಿರದಲ್ಲಿ ಬೆಳಗ್ಗೆ 10 ಮತ್ತು ಮಧ್ಯಾಹ್ನ 2 ಗಂಟೆಯ ಪ್ರಸಾರ ಮುಕ್ತಾಯವಾಗಿದೆ.

Kaala House full in Koratagere

ಕನ್ನಡಪರ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲೂ ಚಲನಚಿತ್ರ ಪ್ರಸಾರ ಹಿನ್ನೆಲೆ ಕಾರ್ಯಕರ್ತರು ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರ ಘಟನೆಯೂ ನಡೆಯಿತು.

English summary
Rajinikath starred Kaala film showing in House full at Shivaganga theatre in Koratagere of Tumkur district despite opposition by pro kannada activists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X