ಹೊಗಳುವ ಭರದಲ್ಲಿ ದೇವೇಗೌಡರನ್ನು ಹುಚ್ಚುನಾಯಿಗೆ ಹೋಲಿಸಿದ ಗುಬ್ಬಿ ಶಾಸಕ

By: ಕುಮಾರಸ್ವಾಮಿ
Subscribe to Oneindia Kannada
   ದೇವೇಗೌಡರನ್ನು ಹುಚ್ಚುನಾಯಿಗೆ ಹೋಲಿಸಿದ ಗುಬ್ಬಿ ಶಾಸಕ

   ಕೊರಟಗೆರೆ, ಡಿಸೆಂಬರ್ 5: ನಮ್ಮ ಹಿಂದಿನ ಪ್ರಧಾನ ಮಂತ್ರಿಗಳನ್ನು ನೋಡಿ, ಆರಾಮವಾಗಿ ಮನೆಯಲ್ಲಿದ್ದು ಎಲ್ಲ ಸೌಕರ್ಯಗಳನ್ನು ಅನುಭವಿಸುತ್ತಿದ್ದಾರೆ. ಸರಕಾರವೇ ಅವರಿಗೆ ಎಲ್ಲ ಸವಲತ್ತು ಕೊಟ್ಟು ಬಿಳಿಯಾನೆಯ ಹಾಗೆ ಸಾಕುತ್ತಿದೆ. ಆದರೆ ಈ ಮನುಷ್ಯ ಹುಚ್ಚು ನಾಯಿ ಸುತ್ತಿದ ಹಾಗೆ ಇಡೀ ರಾಜ್ಯದಲ್ಲಿ ಸುತ್ತಾಡುತ್ತಿದ್ದಾರಲ್ರೀ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೊಗಳಿದರು.

   ಬಳ್ಳಾರಿ ರಾಜಕೀಯ : ಹೊಸ ದಾಳ ಉರುಳಿಸಿದ ದೇವೇಗೌಡರು!

   ಹ್ಞಾಂ, ಇದು ಖಂಡಿತಾ ಹೊಗಳಿಕೆ. ಮಾಜಿ ಪ್ರಧಾನಿ- ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಬಗ್ಗೆ ಶ್ರೀನಿವಾಸ್ ಹೊಗಳಲು ಬಳಸಿದ ಮಾತಿದು. ಜೆಡಿಎಸ್ ಸಂಘಟನೆಗಾಗಿ ದೇವೇಗೌಡರು ರಾಜ್ಯದಾದ್ಯಂತ ಸುತ್ತಾಡುತ್ತಿದ್ದಾರೆ ಎಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಸಭೆಯೊಂದರಲ್ಲಿ ಜನರ ಮುಂದೆ ಹೇಳಿದ ಮಾತಿದು.

   JDS supremo HD Devegowda roaming around the state like a mad dog: Gubbi MLA

   ಅಷ್ಟೇ ಅಲ್ಲ, ನಾನು (ಎಸ್.ಆರ್.ಶ್ರೀನಿವಾಸ್) ಹಾಗೂ ಪಿ.ಆರ್.ಸುಧಾಕರ್ ಲಾಲ್ (ಕೊರಟಗೆರೆ ಶಾಸಕ) ಜನರ ಕೆಲಸಗಳನ್ನು ಮಾಡಿಕೊಡುವ ಸಲುವಾಗಿ ಹುಚ್ಚುನಾಯಿಯ ಥರ ಸುತ್ತಾಡುತ್ತಿದ್ದೀವಿ ಎಂದು ಕೂಡ ಹೇಳಿದರು. ಅವರ ಭಾವನೆಯೇನೋ ಜನರಿಗೆ ಅರ್ಥವಾಯಿತು. ಆದರೆ ಬಳಸಿದ ಭಾಷೆ ಚರ್ಚೆಗೆ ಕಾರಣವಾಗಿದೆ.

   ಸಿದ್ದರಾಮಯ್ಯ ವಿರುದ್ಧದ ಸಿಟ್ಟನ್ನೆಲ್ಲ ಹೊರಹಾಕಿದ ದೇವೇಗೌಡರು

   ಅಂದಹಾಗೆ ಇಂಥ ಭೀಕರವಾದ ಭಾಷಣವನ್ನು ಸ್ವತಃ ದೇವೇಗೌಡರ ಎದುರಿಗೇ ಮಾಡಿದ್ದಾರೆ ಶ್ರೀನಿವಾಸ್. ಅದರ ಜತೆಗೆ, ದೇವೇಗೌಡರು ನಮಗೆ "ಜನಸೇವೆ ಮಾಡ್ರೋ ಬಡ್ಡಿ ಮಕ್ಕಳಾ" ಎಂದು ಬುದ್ಧಿ ಹೇಳುತ್ತಾರೆ ಅಂತ ಕೂಡ ಮಾತನಾಡಿದ್ದಾರೆ. ಒಟ್ಟಾರೆ ಗುಬ್ಬಿ ಶಾಸಕರ ಭಾಷಣವೇ ಈಗ ಎಲ್ಲ ಕಡೆ ಸುದ್ದಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   JDS supremo HD Devegowda roaming around the state like a mad dog for the good of country, this was the phrase used by Gubbi JDS MLA S.R.Srinivas to praise HDD in Koratagere taluk, Tumakuru district on Monday, December 4th.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ