ಜೆಡಿಎಸ್ ನ 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್

Posted By:
Subscribe to Oneindia Kannada

ತುಮಕೂರು, ಜುಲೈ 24 : ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಬಾಕಿಯಿರುವಾಗ ಜಾತ್ಯತೀತ ಜನತಾದಳದ ಬಂಡಾಯ ಶಾಸಕರನ್ನು ತನ್ನ ಮನೆಯೊಳಗೆ ಸೇರಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಜೆಡಿಎಸ್ ನ 7 ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದಂತಾಗಿದೆ. ಬರುವ ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ಚಾಮರಾಜಪೇಟೆಯ ಜೆಡಿಎಸ್ ನ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಕಾಂಗ್ರೆಸ್ಸಿಗೆ ಜಮೀರ್ ಎಂಟ್ರಿ ಕೊಡುವುದಕ್ಕೂ ಮುನ್ನವೇ ತಗುಲಿತು ಶಾಕ್!

ಭಾನುವಾರ ತುಮಕೂರಿನ ಮಾಜಿ ಶಾಸಕ ಎಚ್.ನಿಂಗಪ್ಪ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, "ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದು, ಆ ಪಕ್ಷಕ್ಕೆ ಸೇರಲು ಒಪ್ಪಿಗೆ ಸಿಕ್ಕಿದೆ. ತಮ್ಮ ಜೊತೆಗೆ ಜೆಡಿಎಸ್ ನ 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ" ಎಂದು ಹೇಳಿದರು.

'ಚಾಮರಾಜಪೇಟೇಲಿ JDS ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ'

ಜೆಡಿಎಸ್ ನ 7 ಬಂಡಾಯ ಶಾಸಕರು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಷರತ್ತು ಹಾಕಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವಿಳಂಬ ಮಾಡಿತ್ತು. ರಾಜ್ಯಸಭಾ ಚುನಾವಣೆ ಆದ ನಂತರ ಎಲ್ಲಾ ವಿವಾದಗಳಲ್ಲೂ ಈ ಬಂಡಾಯ ಶಾಸಕರು ಕಾಂಗ್ರೆಸ್ ಪರ ನಿಂತಿದ್ದಾರೆ.

 ಟಿಕೆಟ್ ನೀಡುವುದು ಖಚಿತ

ಟಿಕೆಟ್ ನೀಡುವುದು ಖಚಿತ

ಜಮೀರ್ ಹೇಳಿಕೆ ನೋಡಿದರೆ ಶಾಸಕರಾದ ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿ ಸಿದ್ದೇಗೌಡ, ಜಮೀರ್ ಅಹಮ್ಮದ್, ಇಕ್ಬಾಲ್ ಅನ್ಸಾರಿ ಮತ್ತು ಭೀಮಾನಾಯ್ಕ್ ಅವರಿಗೆ ಕಾಂಗ್ರೆಸ್ 2018ರ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವುದು ಖಚಿತವಾಗಿದಂತಾಗಿದೆ.

ಏ ಕ್ಯಾ ಜಮೀರ್ ಭಾಯ್, ನಿಮ್ಮನ್ನು ಬೆಳೆಸಿದ ದೇವೇಗೌಡರಿಗೇ ಚಾಲೆಂಜಾ!

 ಕಾಂಗ್ರೆಸ್ ರಣತಂತ್ರ

ಕಾಂಗ್ರೆಸ್ ರಣತಂತ್ರ

ಆಯಾ ಕ್ಷೇತ್ರಗಳಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದರಿಂದ ಕಾಂಗ್ರೆಸ್‍ಗೇನೂ ನಷ್ಟವಾಗುವುದಿಲ್ಲ. ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ ಪ್ರಭಾವ ಅಷ್ಟಾಗಿ ಇಲ್ಲ. ಹಾಗಾಗಿ ಬಂಡಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಅವರ ಪ್ರಭಾವ ಹಾಗೂ ಕಾಂಗ್ರೆಸ್ ಶಕ್ತಿ ಒಟ್ಟುಗೂಡಿಸಿಕೊಂಡು ಗೆಲ್ಲುವ ತಂತ್ರ ರೂಪಿಸಿದೆ.

 ವಲಸಿಗರಿಗೆ ಶಾಕ್ ಕೊಟ್ಟಿದ್ದ ಸಿದ್ದರಾಮಯ್ಯ

ವಲಸಿಗರಿಗೆ ಶಾಕ್ ಕೊಟ್ಟಿದ್ದ ಸಿದ್ದರಾಮಯ್ಯ

ಕಾಂಗ್ರೆಸ್ಸಿಗೆ ಬೇರೆ ಪಕ್ಷಗಳಿಂದ ವಲಸೆ ಬರುವುದನ್ನು ಸ್ವಾಗತ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ, ವಲಸೆ ಬಂದವರಿಗೆಲ್ಲ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದಿಲ್ಲ ಎಂದು ಇತ್ತೀಚೆಗೆ ಹೇಳಿರುವುದುನ್ನು ಇಲ್ಲಿ ಗಮನಿಸಬೇಕಾಗಿರುವುದು ಅತಿ ಮುಖ್ಯವಾಗಿದೆ.

H D Devegowda warns Zameer Ahmed Khan, JDS MLA | Oneindia Kannada
 ಜಮೀರ್ ಜೆಡಿಎಸ್ ನ 7 ಬಂಡಾಯ ಶಾಸಕರ ಕ್ಯಾಪ್ಟನ್

ಜಮೀರ್ ಜೆಡಿಎಸ್ ನ 7 ಬಂಡಾಯ ಶಾಸಕರ ಕ್ಯಾಪ್ಟನ್

ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿ ಸಿದ್ದೇಗೌಡ,ಇಕ್ಬಾಲ್ ಅನ್ಸಾರಿ ಮತ್ತು ಭೀಮಾನಾಯ್ಕ್ ರಾಜ್ಯಸಭಾ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿ ಜೆಡಿಎಸ್ ನಿಂದ ಹೊರ ಬಿದ್ದಿದ್ದಾರೆ. ಅಂದಿನಿಂದ ಇಂದಿನವರೆಗೂ ಇವರೆಲ್ಲರಿಗೆ ಜಮೀರ್ ದಂಡ ನಾಯಕರಾಗಿದ್ದಾರೆ. ಜಮೀರ್ ಮಾರ್ಗದಲ್ಲಿಯೇ ಆರು ಜನರು ಸಾಗುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Congress at last has decided to induct 7 suspended MLAs of JD(S). This has been confirmed by Jameer Ahmed Khan to the media. They will be joining the Congress party in December 2017. Will they get Congress ticket to contest in Karnataka Assembly Election 2018?.
Please Wait while comments are loading...