'ಜೈ ಗಂಗಾಜಲ್' ಸಿನಿಮಾ ಖ್ಯಾತಿಯ ಇಶಾ ಪಂತ್ ತುಮಕೂರು ಎಸ್ಪಿ

By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಜನವರಿ 3: ತುಮಕೂರು ಜಿಲ್ಲೆಯ ಹೊಸ ಎಸ್ ಪಿ ಆಗಿ ಇಶಾ ಪಂತ್ ಅಧಿಕಾರ ವಹಿಸಿಕೊಂಡಿದ್ದಾರೆ. ಈಗಾಗಲೇ ದಕ್ಷತೆಗೆ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಐಪಿಎಸ್ ಪೊಲೀಸ್ ಅಧಿಕಾರಿ ಆಕೆ. ಇನ್ನು ತುಮಕೂರು ಜಿಲ್ಲೆಗೆ ಮೊದಲ ಬಾರಿಗೆ ಮಹಿಳಾ ಎಸ್ ಪಿಯೊಬ್ಬರು ಬಂದಂತಾಗಿದೆ.

ಇನ್ನೂ ಆಸಕ್ತಿಕರ ಸಂಗತಿ ಅಂದರೆ ಇಶಾ ಪಂತ್ ಅವರ ಜೀವನ ಗಾಥೆಯಿಂದ ಸ್ಫೂರ್ತಿ ಪಡೆದು ಹಿಂದಿ ಸಿನಿಮಾ ಕೂಡ ಬಂದಿದೆ. ಜೈ ಗಂಗಾಜಲ್ ಎಂಬ ಸಿನಿಮಾ ಬಂದಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಅಭಿನಯಿಸಿದ್ದರು. ಇನ್ನು ತುಮಕೂರು ಜಿಲ್ಲೆಯ ಮೂವತ್ತಾರನೇ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಇಶಾ ಪಂತ್.[ತುಮಕೂರಿನಲ್ಲಿ ಹೊಸವರ್ಷಕ್ಕೆ ನಕಲಿ ಡ್ರಗ್ ಮಾರಾಟ ಯತ್ನ]

Jai Ganga Jal movie fame Isha Panth Tumakuru SP

ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಇಶಾ, ಮಧ್ಯಪ್ರದೇಶದಲ್ಲಿ ಡ್ರಗ್ಸ್, ಭಟ್ಟಿ ಸಾರಾಯಿ ನಿಷೇಧಿಸಿದ್ದ ಸನ್ನಿವೇಶವು ತಮ್ಮ ಜೀವನದಲ್ಲಿ ಮರೆಯಲಾಗದ್ದು ಎಂದು ಹೇಳಿದ್ದಾರೆ. ಆಕೆ ಈ ಮೊದಲು ಕಲಬುರಗಿಯಲ್ಲಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಚಾರವಾಗಿ ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಯಾವಾಗ ಕರೆ ಬಂದರೂ ಸ್ಪಂದಿಸುತ್ತೇನೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Isha Panth took over the charge as Tumakuru SP. She is the first woman SP of Tumakuru. Jai Ganga Jal- Hindi movie satarred Priyanka Chopra inspired by Isha Panth life.
Please Wait while comments are loading...