ಐಟಿ ದಾಳಿ: ತುಮಕೂರಿನ ಡಿಸಿಸಿ ಬ್ಯಾಂಕಿನಲ್ಲಿ ಸಿಕ್ಕಿದ್ದು 50 ಕೋಟಿ

Posted By:
Subscribe to Oneindia Kannada

ತುಮಕೂರು, ಡಿಸೆಂಬರ್, 28: ತುಮಕೂರಿನ ಜಿಲ್ಲಾ ಸಹಕಾರಿ ಬ್ಯಾಂಕಿನ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ರು 50 ಕೋಟಿ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರಿನ ಡಿಸಿಸಿ ಬ್ಯಾಂಕಿನ ಮೇಲೆ ಆರು ಜನರಿದ್ದ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಹಣದ ವಿನಿಮಯ ಮತ್ತು ಹಣ ಡೆಪಾಸಿಟ್ ಸಂಬಂಧ ಪರಿಶೀಲನೆ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ರು 50 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.[ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ 5ದಿನದಲ್ಲಿ 162 ಕೋಟಿ ಜಮೆ, ತನಿಖೆ]

black money

ಇನ್ನು ಈ ಸಂಬಂಧ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರನ್ನು ತನಿಖೆಗೆ ಒಳಪಡಿಸಲಿದ್ದು, ಅಕ್ರಮದಲ್ಲಿ ಯಾರು, ಯಾರು ಭಾಗಿಯಾಗಿದ್ದಾರೆ ಎಂಬುದು ಬೆಳಕಿಗೆ ಬರಬೇಕಿದೆ.[ಕಪ್ಪನ್ನು ಬಿಳಿ ಮಾಡುತ್ತಿದ್ದ ಎಸ್ ಬಿಎಂ ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ]

ಮೊನ್ನೆಯಷ್ಟೇ ಮಂಗಳೂರು ಮತ್ತು ಬಾಗಲಕೋಟೆಯ ಡಿಸಿಸಿ ಬ್ಯಾಂಕಿನ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Income Tax today conducted raids at the DCC bank at Tumkur, 50 kilometres away from Bengaluru. The raid was conducted following a tip off which stated that the bank had indulged in conversion of demonetised noted on a large scale.
Please Wait while comments are loading...