ಪಾವಗಡದ ಅಂಗಡಿಗಳಲ್ಲಿ ಪೆನ್, ಪೆನ್ಸಿಲ್ ಜತೆಗೆ ಎಣ್ಣೆಯೂ ಮಾರ್ತಾರೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ತುಮಕೂರು, ಆಗಸ್ಟ್ 23: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಕುಡಿಯುವುದಕ್ಕೆ ನೀರು ಸಿಗುತ್ತೋ ಇಲ್ಲವೋ ಮದ್ಯವಂತೂ ಬೆಳಂಬೆಳಗ್ಗೆ ಸಿಗತ್ತೆ. ಪೆನ್-ಪೆನ್ಸಿಲ್, ಅಕ್ಕಿ-ಬೇಳೆಯಂಥದ್ದನ್ನು ಮಾರುವ ಅಂಗಡಿಗಳಲ್ಲೂ ಮದ್ಯ ಮಾರಾಟವೇ ಜೋರು. ಹಗಲಿನಲ್ಲೇ ಫುಲ್ ಟೈಟಾಗಿ ಓಡಾಡುವವರು ಜಾಸ್ತಿಯಾಗಿ ಮಹಿಳೆಯರು-ಮಕ್ಕಳು ರಸ್ತೆಗೆ ಬರೋದೇ ಕಷ್ಟವಾಗಿದೆ.

ಪಟ್ಟಣಕ್ಕೆ ಹತ್ತಿರವೇ ಇರೋ ರೊಪ್ಪ ಗ್ರಾಮದಲ್ಲಿ ಬೆಳಗಿನ ಜಾವವೇ ಎಣ್ಣೆ ಸೇಲ್ ಅರಂಭವಾದರೆ ಮಧ್ಯರಾತ್ರಿವರೆಗೂ ನಡೆಯುತ್ತಲೇ ಇರುತ್ತದೆ, ಇದು ಒಂಥರಾ ಆದರೆ, ಗುಂಡಾರ್ಲಹಳ್ಳಿ, ನಲ್ಲದೀಗಲಬಂಡೆ ಮತ್ತಿತರ ಗ್ರಾಮಗಳಲ್ಲಿ ಶಾಲೆಗಳ ಹತ್ತಿರವೇ ಅಕ್ರಮವಾಗಿ ಮದ್ಯದಂಗಡಿಗಳು ಆಗಿವೆ. ಆ ಗ್ರಾಮಸ್ಥರು ಏನೇ ಗೋಳು ತೋಡಿಕೊಂಡರೂ ನಯಾಪೈಸೆ ಪ್ರಯೋಜನ ಆಗ್ತಿಲ್ಲ.[ಓಣಂ ಹಬಕ್ಕೆ ಆನ್ ಲೈನ್ ಮೂಲಕವೇ ಮದ್ಯ ಸಮಾರಾಧನೆ]

Illegal liquor sale in Pavagad taluk

ಮಹಿಳೆಯರು, ವಿದ್ಯಾರ್ಥಿಗಳಿಗೂ ರೂಢಿ: ಇತ್ತೀಚೆಗೆ ಮಹಿಳೆಯರು, ಹೈಸ್ಕೂಲ್ ಸ್ಟೂಡೆಂಟ್ಸ್ ಕುಡಿತ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇಡೀ ತಾಲೂಕಿನಲ್ಲಿ 23 ಅನಧಿಕೃತ ಮದ್ಯದಂಗಡಿಗಳು ಇವೆಯಂತೆ. ಆದರೆ ತಾಲ್ಲೂಕು ವ್ಯಾಪ್ತಿಯ ಗ್ರಾಮದಲ್ಲಿ ತಲಾ 4 ಅಕ್ರಮ ಗಡಾಂಗುಗಳಿವೆ.

ಕೆಲವು ಕಡೆಯಂತೂ ಮದ್ಯದಂಗಡಿಗಳ ಮಾಲೀಕರೇ ಗೂಡಂಗಡಿಗಳಿಗೆ ಮಾರುತ್ತಾರೆ. ಅವುಗಳನ್ನು ಸಣ್ಣ-ಪುಟ್ಟ ಅಂಗಡಿಯವರು ಡಬಲ್ ರೇಟಿಗೆ ಸೇಲ್ ಮಾಡ್ತಿದ್ದಾರೆ.[ಅಕ್ರಮ ಮದ್ಯದ ವಿಷಯದಲ್ಲಿ ಕರ್ನಾಟಕವೇ ನಂಬರ್ 1!]

ಮದ್ಯ ಮಾರಾಟಕ್ಕೆ ಸರಕಾರವೇ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡೋದಿಲ್ಲ. ತೀರಾ ಒತ್ತಡ ಬಂದರೆ ಒಂದಿಷ್ಟು ದಂಡ ಹಾಕಿ, ಮಾರಾಟಗಾರರನ್ನು ಬಿಟ್ಟುಬಿಡ್ತಾರೆ.

ವೈ.ಎನ್.ಹೊಸಕೋಟೆ ಹೋಬಳಿ ಅಂದರೆ ಸೆಕೆಂಡ್ಸ್ ಮದ್ಯಕ್ಕೆ ಬಹಳ ಫೇಮಸ್ಸಾಗಿದೆ. ಇಲ್ಲಿ ತಯಾರಾಗುವ ಸೆಕೆಂಡ್ಸ್ ಮದ್ಯವೇ ಇಡೀ ಜಿಲ್ಲೆಗೆ ಸರಬರಾಜುಗುತ್ತಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ.[ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದ ಅಬಕಾರಿ ಸಚಿವ]

ಇತ್ತೀಚೆಗೆ ಪ್ರಗತಿ ಪರಿಶೀಲನೆ ಸಭೆಯಲ್ಲೇ ಜಿಲ್ಲಾ ಪಂಚಾಯಿತಿ ಸದಸ್ಯರು, ವೈ.ಎನ್.ಹೊಸಕೋಟೆಯಲ್ಲಿ ಸೆಕೆಂಡ್ಸ್ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದರು.

ಮನೆಯಲ್ಲೂ ಮಾರಾಟ: ಆಲದ ಮರದಹಟ್ಟಿಯ ಮನೆಯೊಂದರಲ್ಲಿ ಮದ್ಯದ ಮಾರಾಟ ಬಹಳ ಜೋರಂತೆ. ಇನ್ನು ಕಿಲಾರ್ಲಹಳ್ಳಿಯಲ್ಲಿ ಹೋಟೆಲೊಂದಿದೆ. ಹಾಲಿಗಿಂತ ಆಲ್ಕೋ ಹಾಲ್ ಮಾರುವುದರಲ್ಲೇ ಭಾರಿ ಆದಾಯ ಪಡೆಯುತ್ತಿರುವ ಇದರ ಮಾಲೀಕನಿಗೆ ಯಾರ ಭಯವೂ ಇಲ್ಲ.

ಇಷ್ಟೇ ಅಲ್ಲ, ಹೋಟೆಲ್ ಮಾಡ್ತೀವಿ ಅಂತ ಅನುಮತಿ ಪಡೆದು ಡಾಬಾಗಳನ್ನು ಶುರು ಮಾಡ್ತಾರೆ. ಅಲ್ಲಿ ಮದ್ಯ ಮಾರಾಟವೂ ಇರುತ್ತದೆ. ಹೋಟೆಲ್ ಅಂದರೆ ಆಹಾರ ಪೂರೈಕೆಗೆ ಮಾತ್ರ ಅನುಮತಿ. ಆದರೇನು ಮಾಡೋದು ಅಂಥವರ ಹಿಂದೆ ದೊಡ್ಡದೊಡ್ಡವರು ಇರ್ತಾರೆ ಎಂದು ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Illegal liquor sale at it's peak in Pavagad taluk, Tumkur district. Liquor selling in provision stores, Dabas of village illegally. Villagers demanding officers take immediate action against illegal liquor selling.
Please Wait while comments are loading...