ಅತ್ತೆ ಜೊತೆಗಿನ ಪತಿಯ ಅನೈತಿಕ ಸಂಬಂಧ: ಬಲಿಯಾದಳು ಪತ್ನಿ!

Written By:
Subscribe to Oneindia Kannada

ತುಮಕೂರು, ಜೂ 11: ಗುಬ್ಬಿ ತಾಲೂಕನ್ನು ಬೆಚ್ಚಿಬೀಳಿಸಿದ್ದ ಪಿಎಸೈ ಪತ್ನಿಯ ಬರ್ಭರ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೂನ್ ನಾಲ್ಕರಂದು ಹೊಸದುರ್ಗ ಠಾಣೆ ಪಿಎಸೈ ಗಿರೀಶ್ ಅವರ ಪತ್ನಿ ಪ್ರಫುಲ್ಲಾ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಪಿಎಸೈ ಗಿರೀಶ್ ಮತ್ತು ಕೊಲೆಯಾದ ಪ್ರಪುಲ್ಲಾ ತಾಯಿ ಮಹಾದೇವಮ್ಮ ನಡುವಿನ ಅನೈತಿಕ ಸಂಬಂಧ, ಪ್ರಪುಲ್ಲಾಳನ್ನು ಬಲಿ ತೆಗೆದುಕೊಂಡಿದೆ. ಈ ಸಂಬಂಧ ಇವರಿಬ್ಬರನ್ನು ಜೊತೆಗೆ ಪಿಎಸೈ ಗಿರೀಶನ ಆರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. (ಪರಪುರುಷನ ತೆಕ್ಕೆಗೆ ಬಿದ್ದ ಪತ್ನಿಯ ಕೊಂದ ಪತಿ)

ಗುಬ್ಬಿ ತಾಲೂಕು ಸಂಗನಹಳ್ಳಿಯ ತೋಪಿನಲ್ಲಿ ಪಿಎಸೈ ಪತ್ನಿ ಪ್ರಫುಲ್ಲಾ(26) ಅವರ ಕೊಲೆಯಾಗಿತ್ತು. ಕೊಲೆ ಮಾಡಿರುವುದನ್ನು ಗಿರೀಶ್ ಸ್ನೇಹಿತ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕೊಲೆಗೆ ಸಂಚು ರೂಪಿಸಿದ್ದು ಪ್ರಫುಲ್ಲಾ ತಾಯಿ ಮಹದೇವಮ್ಮ ಮತ್ತು ಪತಿ ಗಿರೀಶ್ ಎಂದು ವಿಚಾರಣೆಯ ವೇಳೆ ಈತ ಹೇಳಿಕೆ ನೀಡಿದ್ದಾನೆ.

Husband's illegal affair with mother-in-law: Wife murdered by husband's friend

ತನ್ನ ತಾಯಿ ತನ್ನ ಗಂಡನ ಜೊತೆ ಏಕಾಂತದಲ್ಲಿ ಇದ್ದಿದ್ದನ್ನು ಹಲವಾರು ಬಾರಿ ಕಣ್ಣಾರೆ ಕಂಡಿದ್ದ ಪ್ರಪುಲ್ಲಾ, ಎರಡು ತಿಂಗಳ ಹಿಂದೆ ಗಂಡ ಪಿಎಸೈ ಗಿರೀಶ್ ಜೊತೆ ಠಾಣೆಯಲ್ಲಿಯೇ ಜಗಳವಾಡಿಕೊಂಡು ತವರು ಮನೆ ಸಂಗನಳ್ಳಿಗೆ ಬಂದಿದ್ದರು.

ತಮ್ಮ ಅಕ್ರಮ ಸಂಬಂಧ ಎಲ್ಲಿ ಬಯಲಾಗುತ್ತೋ ಅನ್ನೋ ಭಯದಿಂದ ಪ್ರಫುಲ್ಲಾ ತಾಯಿ ಮಹಾದೇವಮ್ಮ ಮತ್ತು ಪತಿ ಗಿರೀಶ್, ಪ್ರಫುಲ್ಲಾಳನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಇದಕ್ಕೆ ಗಿರೀಶ್ ಸ್ನೇಹಿತ, ಗ್ರಾಮ ಪಂಚಾಯತಿ ಸದಸ್ಯ ಚಿದಾನಂದ ಸಾಥ್ ನೀಡಿದ್ದಾನೆ.

ಅದರಂತೇ, ಜೂನ್ ನಾಲ್ಕರಂದು ರಾತ್ರಿ ಊಟ ಮಾಡಲು ಮನೆಗೆ ಬಂದಿದ್ದ ಚಿದಾನಂದ್, ಪ್ರಫುಲ್ಲಾರನ್ನು ಮನೆಗೆ ಬಿಡುವ ನೆಪದಲ್ಲಿ ಕರೆದೊಯ್ದು, ಸಂಗನಹಳ್ಳಿ ಮಾವಿನ ತೋಪಿನಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. (ಅತ್ತಿಗೆಯನ್ನು ಕೊಂದ ಮೈದುನ)

ಇನ್ನೊಂದು ಮಾಹಿತಿಯ ಪ್ರಕಾರ, ದಂಪತಿಗಳ ನಡುವೆ ಸಂಬಂಧ ತೀರಾ ಹದೆಗೆಟ್ಟಿತ್ತು. ಅಳಿಯನೊಂದಿಗಿನ ದೈಹಿಕ ಸಂಬಂಧ ಉಳಿಸಿಕೊಳ್ಳಲು ನೆಲಮಂಗಲ ಮೂಲದ ಹುಡುಗಿಯ ಜತೆ ಮದುವೆ ಮಾಡಲು ಮಹದೇವಮ್ಮ ತಯಾರಿ ನಡೆಸಿದ್ದರು ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Husband's illegal affair with mother-in-law: Hosadurga Police Station PSI Girish wife (Prapulla, Age 26) murdered. So far, Police arrested Husband, mother-in-law and six of husband's friends.
Please Wait while comments are loading...