ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಳಿಯಾರು ಶಾಲಾ ದುರಂತ: ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣು

|
Google Oneindia Kannada News

ತಮಕೂರು, ಮಾರ್ಚ್. 12 : ಅನುಮತಿ ಇಲ್ಲದೆ ಹುಳಿಯಾರುನಲ್ಲಿ ಹಾಸ್ಟೆಲ್ ನಡೆಸಿ ಮೇಲುಸ್ತುವಾರಿ ಇಲ್ಲದೆ ಮೂರು ಅಮಾಯಕ ಮಕ್ಕಳನ್ನು ಬಲಿ ತೆಗೆದುಕೊಂಡ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಮತ್ತು ಕಾರ್ಯದರ್ಶಿ ಕವಿತಾ ಕಿರಣ್ ಶನಿವಾರ ರಾತ್ರಿ ಹುಳಿಯಾರು ಪೋಲಿಸ್ ಠಾಣೆ ಪೋಲಿಸರಿಗೆ ಶರಣಾದರು.

ಬುಧವಾರ ರಾತ್ರಿ ನಡೆದ ಶಾಲಾ ದುರ್ಘಟನೆಗೆ ಸಂಬಂಧಿಸಿದಂತೆ ಹುಳಿಯಾರು ಠಾಣೆಯಲ್ಲಿ 304 ಎ ಅಡಿಯಲ್ಲಿ ಕಿರಣ್ ಕುಮಾರ್ ಹಾಗೂ ಅವರ ಪತ್ನಿ ಕವಿತಾ ಕಿರಣ್ ಸೇರಿದಂತೆ ಒಟ್ಟು ಆರು ಜನ ವಿರುದ್ಧ ದೂರು ದಾಖಲಾಗಿತ್ತು.[ಹುಳಿಯಾರು ಶಾಲಾ ದುರಂತ: ಆರೋಪಿಗಳಾದ ಕಿರಣ್, ಕವಿತಾ ನಾಪತ್ತೆ]

Huliyur school tragedy 2 accused surrendered infornt of police

ಅಡುಗೆ ಭಟ್ಟ ಶಿವಯ್ಯ ,ಸಹಾಯಕಿ ರಂಗಲಕ್ಷ್ಮಿ ,ಮೇಲ್ವಿಚಾರಕ ಸುಹಾಸ್ ಮತ್ತು ಜಗದೀಶ್ ಅವರನ್ನು ಗುರುವಾರ ರಾತ್ರಿ ಬಂಧಿಸಿ ಬೇಲ್ ಮೇಲೆ ಬಿಡುಗಡೆಗೊಳಿಸಲಾಗಿತ್ತು.

ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಕಿರಣ್ ಹಾಗೂ ಕವಿತಾ ನಾಪತ್ತೆಯಾಗಿದ್ದರು. ಇದೀಗ ಶನಿವಾರ ರಾತ್ರಿ ಹುಳಿಯಾರು ಠಾಣೆಗೆ ವಕೀಲರುಗಳೊಂದಿಗೆ ಡಿವೈಎಸ್ಪಿ ವೇಣುಗೋಪಾಲ್ ಮುಂದೆ ಶರಣಾದರು.

English summary
Tumkur district Huliyur school tragedy 2 accused surrendered infornt of Huliyur police station on March 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X