ಟಿಕ್ ಟಿಕ್ ಓಟವನ್ನು ನಿಲ್ಲಿಸಿದ ತುಮಕೂರಿನ ಎಚ್ಎಂಟಿ!

Posted By:
Subscribe to Oneindia Kannada

ತುಮಕೂರು, ಮೇ 04: ಹಿಂದೂಸ್ತಾನ್ ಮಷೀನ್ ಟೂಲ್ಸ್(ಎಚ್ಎಂಟಿ) ಕೈಗಡಿಯಾರ ಕಂಪನಿಯ ತುಮಕೂರಿನ ಘಟಕ ಶಾಶ್ವತವಾಗಿ ಮುಚ್ಚಲಾಗಿದೆ. ಕಾರ್ಖಾನೆಯ ಕಾರ್ಮಿಕರ ಹೋರಾಟದ ಬದುಕು ಅಂತ್ಯವಾಗಿದೆ. ದೀರ್ಘಕಾಲದಿಂದ ನಷ್ಟದಲ್ಲಿದ್ದ ಕಾರ್ಖಾನೆಗೆ ಇತ್ತೀಚೆಗೆ ಬೀಗ ಜಡಿಯಲಾಗಿದೆ.

ಶಾಪಗ್ರಸ್ತ ಕಾರ್ಖಾನೆ ಎನಿಸಿಕೊಂಡು ಕೇಂದ್ರದ ಅನುದಾನದ ನೆರವಿನಿಂದ ನಿಧಾನಗತಿಯಲ್ಲಿ ಚಟುವಟಿಕೆ ಆರಂಭಿಸುವ ಕುರುಹು ತೋರಿದ್ದ ಕಂಪನಿ ಕಾರ್ಮಿಕರ ದಿನ (ಮೇ 1) ರಂದು ಕಾರ್ಮಿಕರಿಗೆ ಬಿಡುಗಡೆ ಪತ್ರ ನೀಡಲಾಗಿದೆ.

ಸಂಸ್ಥೆಯಲ್ಲಿ ಬಹುತೇಕ 125 ಕಾರ್ಮಿಕರು ಮೇ ದಿನಕ್ಕೂ ಮುನ್ನವೇ ಬಿಡುಗಡೆ ಪತ್ರ ಪಡೆದುಕೊಂಡು ಎರಡು ದಿನ ಕಳೆದರೂ ಕಾರ್ಖಾನೆಯತ್ತ ಬಂದು ಹೋಗಿ ಮಾಡಿ ಹಳೆ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉನ್ನತ ಅಧಿಕಾರಿಗಳು ಮಾತ್ರ ಹೊಸೂರಿನ ಘಟಕಕ್ಕೆ ಶಿಫ್ಟ್ ಆಗಿದ್ದಾರೆ. [ಎಚ್ಎಂಟಿ ಸಮಾಧಿ ಮೇಲೆ ಕಾಂಗ್ರೆಸ್ಸಿಗರ ದುಡ್ಡಿನ ಸೌಧ]

Hindustan Machine Tools Ltd (HMT) Finally Shuts downs Tumakuru Unit

ಇನ್ನೊಂದು ಮೂಲದ ಪ್ರಕಾರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಇನ್ನು 8-10 ವರ್ಷ ಮಾತ್ರ ಕಾರ್ಯನಿರ್ವಹಣಾ ಅವಧಿ ಇತ್ತು. ಹೀಗಾಗಿ ಸ್ವಲ್ಪ ಮುಂಚಿತವಾಗಿ ಸ್ವಯಂ ನಿವೃತ್ತಿ (ವಿಆರ್ ಎಸ್) ಪಡೆದುಕೊಳ್ಳಲು ಸೂಚಿಸಲಾಯಿತು. ಹೊಸ ನೇಮಕಾತಿ ನಡೆದು ಇಲ್ಲಿ ಮೂರು ದಶಕದ ಮೇಲಾಗಿತ್ತು.

'ಮುಂಚಿತವಾಗಿ ನಿವೃತ್ತಿಯಾಗಿರುವುದು ಆರ್ಥಿಕ ನಷ್ಟಕ್ಕಿಂತ ಭಾವನಾತ್ಮಕ ನಷ್ಟ. ಅದರಲ್ಲೂ ಮೇ 01ರ ಕಾರ್ಮಿಕರ ದಿನದಂದು ಕಾರ್ಖಾನೆ ತೊರೆಯಲು ಹೇಳಿದ್ದು ನೋವು ತಂದಿದೆ' ಎಂದು ತುಮಕೂರು ಘಟಕದ ಮೊದಲ ಮಹಿಳಾ ಉದ್ಯೋಗಿ ನಾಗರತ್ನಮ್ಮಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿದ್ದಾರೆ.

ವಿಆರ್ ಎಸ್ ಅನಿವಾರ್ಯವಾಗಿತ್ತು: ಇನ್ನೊಂದೆಡೆ ಬಹುಕಾಲದ ನಂತರ ಕಾರ್ಖಾನೆಯಿಂದ ಸಂಬಳ, ಬಾಕಿ ಮೊತ್ತ ಕೈ ಸೇರಿದ ಖುಷಿ ಹಲವರಲ್ಲಿದೆ. ಕೆಲವರು ಬಲವಂತವಾಗಿ ವಿಆರ್ ಎಸ್ ಗೆ ತುತ್ತಾಗಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೆ, ಇದು ಕಾರ್ಖಾನೆ ಮ್ಯಾನೇಜ್ಮೆಂಟ್ ಗೂ ಅನಿವಾರ್ಯವಾಗಿತ್ತು.

ಸ್ವಯಂ ನಿವೃತ್ತಿ ಅಡಿಯಲ್ಲಿ ನಿವೃತ್ತಿ ಪಡೆಯುವ ಉದ್ಯೋಗಿಗಳಿಗೆ 2007ರ ವೇತನ ಆಯೋಗದಂತೆ ಸಂಬಳ ಭತ್ಯೆ ಸಿಗಲಿದೆ. ಮೂರು ಸಂಸ್ಥೆಗಳಾ ಸ್ಥಿರ, ಚರಾಸ್ತಿಗಳನ್ನು ಸರ್ಕಾರಿ ನಿಯಮದಂತೆ ಹರಾಜು ಹಾಕಲಾಗುವುದು ಎಂದು ಸಿಸಿಇಎ ಹೇಳಿದೆ.

1978ರಲ್ಲಿ ಮಾಜಿ ಸಂಸದ ಕೆ ಲಕ್ಕಪ್ಪ ಅವರು ಮುತುವರ್ಜಿ ವಹಿಸಿ ತುಮಕೂರಿನಲ್ಲಿ ಎಚ್ ಎಂಟಿ ಕಾರ್ಖಾನೆ ಸ್ಥಾಪನೆಯಾಗಿಸುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನ ಘಟಕದ ನಂತರ ಇದು ಕರ್ನಾಟಕದಲ್ಲಿ ಎರಡನೇ ಘಟಕವಾಗಿತ್ತು.

ಬೆಂಗಳೂರಿನ ಘಟಕ ಜಪಾನ್ ಸಹಕಾರದೊಂದಿಗೆ 1963ರಲ್ಲೇ ಆರಂಭಗೊಂಡಿತ್ತು. ತುಮಕೂರಿನ ಘಟಕ ಸುಮಾರು 119 ಎಕರೆ ವಿಸ್ತೀರ್ಣದಲ್ಲಿದ್ದು ಒಟ್ಟು 20 ವಿಭಾಗಗಳಲ್ಲಿ ಒಟ್ಟಾರೆ 1,600ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು.

ಶ್ರೀಗಳ ಆಶೀರ್ವಾದ: ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರು ಸ್ವಯಂಪ್ರೇರಿತರಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ(ಕೆಐಎಡಿಬಿ) ಗೆ 40 ಎಕರೆ ಭೂಮಿಯನ್ನು ನೀಡಿದ್ದರು. ತುಮಕೂರಿನ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮುಖ್ಯ ಕಾರ್ಖಾನೆ ಎನಿಸಿಕೊಂಡಿದ್ದ ತುಮಕೂರಿನ ಘಟಕದಲ್ಲಿ ಒಂದು ಕಾಲಕ್ಕೆ ಎಚ್ ಎಂಟಿಯ ಜನಪ್ರಿಯ ಬ್ರ್ಯಾಂಡ್ ಗಳಾದ ಸಂಗಮ್, ಉತ್ಸವ್, ಎಲಿಗೆನ್ಸ್, ಪೈಲಟ್ ಮುಂತಾದ ಕೈಗಡಿಯಾರಗಳನ್ನು ತಯಾರಿಸಲಾಗುತ್ತಿತ್ತು.

ವರ್ಷದ ಆರಂಭದಲ್ಲೇ ಸಿಕ್ಕ ಸೂಚನೆ: ಎಚ್ ಎಂಟಿ ಸಮೂಹದ ಎಲ್ಲಾ ಸಂಸ್ಥೆಗಳನ್ನು ಮುಚ್ಚಲು ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟದ ಸಮಿತಿ (ಸಿಸಿಇಎ) ಜನವರಿ ತಿಂಗಳಲ್ಲೇ ಸೂಚಿಸಿತ್ತು.

ಇತಿಹಾಸ ಪುಟ ಸೇರಿದ ಎಚ್ಎಂಟಿ ಕಾರ್ಖಾನೆ

ಇತಿಹಾಸ ಪುಟ ಸೇರಿದ ಎಚ್ಎಂಟಿ ಕಾರ್ಖಾನೆ

-
-
-
ಇತಿಹಾಸ ಪುಟ ಸೇರಿದ ಎಚ್ಎಂಟಿ ಕಾರ್ಖಾನೆ

ಇತಿಹಾಸ ಪುಟ ಸೇರಿದ ಎಚ್ಎಂಟಿ ಕಾರ್ಖಾನೆ

-

53 ವರ್ಷಗಳಿಂದ ಭಾರತೀಯರಿಗೆ ನಿಖರ ಸಮಯ ತೋರಿಸುತ್ತಿದ್ದ ಕಂಪನಿ 2000ದಿಂದ ನಷ್ಟದ ಹಾದಿಯಲ್ಲಿ ಸಾಗುತ್ತಾ ಬಂದಿತ್ತು. 1961ರಲ್ಲಿ ಜಪಾನ್‌ನ ಸಿಟಿಜನ್‌ ವಾಚ್‌ ಕಂಪನಿಯ ಸಹಯೋಗದಲ್ಲಿ ಆರಂಭವಾದ ಎಚ್‌ಎಂಟಿ ವಾಚಸ್‌ ಕಂಪನಿಯು 2011-12ನೇ ಸಾಲಿನಲ್ಲಿ 224.04 ಕೋಟಿ ರೂ. ನಷ್ಟ ಅನುಭವಿಸಿತು. 2012-13ನೇ ಸಾಲಿನಲ್ಲಿ ಇದು 242.47 ಕೋಟಿ ರೂ.ಗೆ ಏರಿತು. 2012ರಲ್ಲಿ ಕೇಂದ್ರ ಸರ್ಕಾರ ಈ ಕಂಪನಿಗೆ 694.52 ಕೋಟಿ ರೂ. ಸಾಲ ನೀಡಿದರೂ ಕಂಪನಿ ನಷ್ಟದಿಂದ ಬಿಡುಗಡೆ ಹೊಂದಲೇ ಇಲ್ಲ.

ಕಂಪನಿ ನಷ್ಟದ ಹಾದಿ ಹಿಡಿದಾಗ ಮೇಲಕ್ಕೆತ್ತಲು ಕೇಂದ್ರ ಸರ್ಕಾರ ಆರ್ಥಿಕ ನೆರವನ್ನು ಮಾತ್ರ ನೀಡಿತು. ಆದರೆ, ಯಾವುದೇ ಇತರೆ ಸಮಸ್ಯೆ ಪರಿಹರಿಸಲು ಮುಂದಾಗಲಿಲ್ಲ. ಸರ್ಕಾರ ಹಾಗೂ ಮ್ಯಾನೇಜ್ಮೆಂಟ್ ಮನಸ್ಸು ಮಾಡಿದ್ದರೆ ಕಂಪನಿಯ ಅವನತಿ ತಪ್ಪಿಸಬಹುದಾಗಿತ್ತು. ಬದಲಾದ ವ್ಯವಸ್ಥೆಗೆ ತಕ್ಕಂತೆ ವಾಚ್ ರೂಪಿಸುವುದು ಕಷ್ಟದ ಕೆಲಸವಾಗಿರಲಿಲ್ಲ. ದೇಶದ ಸಮಯ ಪಾಲಕರಾದ ಎಚ್ ಎಂಟಿ ಪುನರ್ ಉತ್ಠಾನ ಆಗದಿರಲು ಮುಖ್ಯ ಕಾರಣ ಇಚ್ಛಾಶಕ್ತಿ ಕೊರತೆ.ಕೊನೆಗೆ ಎಚ್ ಎಂಟಿ ಇತಿಹಾಸ ಪುಟ ಸೇರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindustan Machine Tools Ltd (HMT), shut their gates on the last factory in Tumakuru. The factory unit, which once manufactured wristwatches for brands such as Sangam, Utsav, Elegance and Pilot, among others, had about 120 workers on board as of now.
Please Wait while comments are loading...