ದಲಿತ ಯುವಕನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಗುಬ್ಬಿ ಹುಡುಗಿ ದೂರು

By: ಕುಮಾರಸ್ವಾಮಿ
Subscribe to Oneindia Kannada

ಗುಬ್ಬಿ, ಜನವರಿ 19: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಹಲ್ಲೆ ಮಾಡಿದವರ ಬಂಧನ ಬುಧವಾರ ಆಗಿತ್ತು. ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಯುವಕ ಅಭಿಷೇಕ್ ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಒಂಬತ್ತನೇ ತರಗತಿ ಓದುತ್ತಿರುವ ಮಗಳು ಶಾಲೆಗೆ ಹೋಗಿ-ಬರುವಾಗ ಅಭಿಷೇಕ್ ತೊಂದರೆ ನೀಡುತ್ತಿದ್ದ. ಈ ಬಗ್ಗೆ ನಾಲ್ಕೈದು ಬಾರಿ ಬುದ್ಧಿವಾದ ಹೇಳಿದರೂ ಪ್ರಯೋಜನವಾಗಲಿಲ್ಲ. ಜನವರಿ 17ರಂದು ನನ್ನ ಮಗಳ ಕೈ ಹಿಡಿದು ಎಳೆದಾಡಿದ್ದ. ಆಸಿಡ್ ಹಾಕುವುದಾಗಿ ಬೆದರಿಕೆ ಕೂಡ ಹಾಕಿದ್ದ. ಹೇಗೋ ತಪ್ಪಿಸಿಕೊಂಡ ಹುಡುಗಿ ಮನೆ ಸೇರಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.[ಗುಬ್ಬಿ ಅಮಾನುಷ ಪ್ರಕರಣ: ಅಭಿಷೇಕ್ ಗೆ ರು.1 ಲಕ್ಷ ನೆರವು]

Gubbi girl parents files complaint under POCSO act

ಮಗಳು ಈ ಬಗ್ಗೆ ಹೇಳಿಕೊಂಡು, ಆತ್ಮಹತ್ಯೆಗೆ ಯತ್ನಿಸಿದಳು. ಆ ನಂತರ ಜನವರಿ 18ರಂದು ಹುಡುಗನ ಕಡೆಯವರು ಮನೆ ಬಳಿ ಬಂದು ಗಲಾಟೆ ಮಾಡಿದರು. ಆದ್ದರಿಂದ ದೂರು ನೀಡುತ್ತಿದ್ದೇವೆ ಎಂದು ಹುಡುಗಿಯ ತಾಯಿ ವಿವರಿಸಿದ್ದಾರೆ. ದೂರನ್ನು ಎಎಸ್ ಪಿ ಮಂಜುನಾಥ್ ಅವರಿಗೆ ನೀಡಲಾಗಿದೆ.[ಹುಡುಗಿಯನ್ನು ಕೆಣಕಿದವನ ಬೆತ್ತಲು ಮಾಡಿ ಬಗ್ಗುಬಡಿದ ಜನ]

ಈ ವೇಳೆ ಮಾತನಾಡಿದ ಬಾಲಕಿ, ನಾನು ಅವನನ್ನು ಪ್ರೀತಿಸಿಲ್ಲ. ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದಾನೆ. ಆತ ಹಾಗೂ ಆತನ ಸ್ನೇಹಿತ ಸೇರಿ, ನನ್ನ ಬೆನ್ನು ಬಿದ್ದು ಮಾನಸಿಕ-ದೈಹಿಕ ಹಿಂಸೆ ನೀಡುತ್ತಿದ್ದರು. ಅಭಿಷೇಕ್ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೂರು ದಾಖಲಿಸಬೇಕು ಎಂದು ಹೇಳಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A complaint registered against dalit boy under POCSO act, who was beaten by Gubbi (Tumakuru District) girl relatives alleging harassment by him.
Please Wait while comments are loading...