ಶಿವಕುಮಾರರ ದರ್ಶನ ಪಡೆಯದೆ ಶಿವೈಕ್ಯರಾದ ಗೌರಿಶಂಕರ ಶ್ರೀ

Posted By:
Subscribe to Oneindia Kannada

ತುಮಕೂರು, ಜನವರಿ 11: ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೌರಿಶಂಕರ ಶ್ರೀಗಳು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಶಿವೈಕ್ಯರಾಗಿದ್ದಾರೆ. ಸಿದ್ದಗಂಗಾ ಶ್ರೀಗಳನ್ನು ನೋಡಬೇಕು ಮಾತನಾಡಿಸಬೇಕು, ಆಶೀರ್ವಾದ ಪಡೆಯಬೇಕು ಎಂಬ ಅವರ ಆಸೆ ಕೊನೆಗೂ ಆಸೆಯಾಗಿಯೇ ಉಳಿದಿದೆ.

1975ರ ಮೇ 26ರಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಅಂದಿನ ರಾಷ್ಟ್ರಪತಿ ಜೈಲ್ ಸಿಂಗ್ ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರ ಸಮ್ಮುಖದಲ್ಲಿ ಗೌರಿಶಂಕರ ಸ್ವಾಮೀಜಿ ಆಯ್ಕೆಯಾಗಿದ್ದರು. ಆದರೆ ಸಲಿಂಗ ಕಾಮ ಆರೋಪ ಮೇಲೆ 1987ರಲ್ಲಿ ಅವರನ್ನು ಹೊರಹಾಕಲಾಗಿತ್ತು. ಇದಾದ ಮೇಲೆ ಗೌರಿ ಶಂಕರ ಸ್ವಾಮೀಜಿಗಳು ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಸಂದಿಸಿಯೇ ಇಲ್ಲ.[ಗೌರಿಶಂಕರ ಸ್ವಾಮೀಜಿ ನಿಧನ: ಸಿದ್ದಗಂಗಾ ಮಠದಲ್ಲಿ ಬಿಗಿಭದ್ರತೆ]

GowriShankar swamiji's desire not Finished

2008ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಆರೋಪಗಳೆಲ್ಲವೂ ದೋಷಮುಕ್ತವಾದ ಮೇಲೆಯೂ ಗೌರಿ ಶಂಕರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಯನ್ನು ದರ್ಶನ ಮಾಡಬೇಕೆಂಬ ಹಂಬಲ ಪೂರೈಸಲೇ ಇಲ್ಲ. ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನದಂದು ಅವರನ್ನು ಕಾಣಬೇಕು, ಅವರ ಆಶೀರ್ವಾದ ಪಡೆಯಬೇಕು ಎಂಬ ಹೆಬ್ಬೆಯಕೆಯನ್ನು ದೇವರು ಪೂರ್ಣ ಮಾಡಲೇ ಇಲ್ಲ.[ಅಧಿಕಾರ ಹಸ್ತಾಂತರಕ್ಕೆ ಗೌರಿಶಂಕರ ಸ್ವಾಮೀಜಿ ಆಕ್ಷೇಪ]

ಅದರೆ 4 ತಿಂಗಳ ಹಿಂದೆ ಅವರನ್ನು ಕಾಣಲು ಸಿದ್ದಗಂಗಾ ಮಠಕ್ಕೆ ಹೋದರು ಶ್ರೀಗಳನ್ನು ನೋಡಲಾಗಲಿಲ್ಲ. ಅದರೆ ಭಕ್ತರಿಗೆ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲಿದೆ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ಅದ್ಯಾವ ಕಾಣದ ಶಕ್ತಿ ಗುರುಶಿಷ್ಯರನ್ನು ಒಂದು ಮಾಡಲು ಬಿಡಲೇ ಇಲ್ಲ ಎಂಬುದೇ ತಿಳಿಯದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jangama Matt President Gowrishankar Swamiji passed away at 2 am Wednesday in kims hospital. But he wants to desire to look Sri Shivakumara swamiji is not finished.
Please Wait while comments are loading...