ಗೌರಿಶಂಕರ ಸ್ವಾಮೀಜಿ ನಿಧನ: ಸಿದ್ದಗಂಗಾ ಮಠದಲ್ಲಿ ಬಿಗಿಭದ್ರತೆ

Posted By:
Subscribe to Oneindia Kannada

ತುಮಕೂರು, ಜನವರಿ 11: ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ತಾಲೂಕಿನ ಜಂಗಮ ಮಠದ ಪೀಠಾಧ್ಯಕ್ಷರಾದ ಗೌರಿಶಂಕರ ಸ್ವಾಮೀಜಿ ಮಂಗಳವಾರ ರಾತ್ರಿ 2 ಗಂಟೆಗೆ ನಿಧನರಾಗಿದ್ದಾರೆ. ಈ ಹಿನ್ನೆಲೆ ಸಿದ್ದಗಂಗಾ ಮಠದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ನಾಲ್ಕು ತಿಂಗಳ ಹಿಂದೆ ಪಾರ್ಶವಾಯುವಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಗೌರಿಶಂಕರ ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 2 ಗಂಟೆಗೆ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೌರಿಶಂಕರ ಶ್ರೀಗಳ ಪಾರ್ಥೀವ ಶರೀರವನ್ನು ಮಠಕ್ಕೆ ತರದಂತೆ ಸಿದ್ದಗಂಗಾ ಆಡಳಿತಾಧಿಕಾರಿ ವಿಶ್ವನಾಥ್ ತುಮಕೂರು ಜಿಲ್ಲಾ ಆರಕ್ಷಕರಿಗೆ ಪತ್ರ ಬರೆದಿದ್ದು, ಸಿದ್ದಗಂಗಾ ಮಠಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ [ಸಿದ್ದಗಂಗಾ ಮಠಕ್ಕೆ ಗೌರಿ ಶಂಕರ ಸ್ವಾಮೀಜಿ ಭೇಟಿ ಇಲ್ಲ]

Gowrishankar Swamiji passed away at 2 am Wednesday in bengaluru

ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಯಾಗಿದ್ದ ಗೌರಿಶಂಕರ ಸ್ವಾಮೀಜಿ ಹಲವು ವಿವಾದಗಳಿಂದ ಸಿದ್ಧಗಂಗಾ ಮಠದಿಂದ ಹೊರ ನಡೆದಿದ್ದರು. ಸಿದ್ದಗಂಗಾ ಮಠದ ಉತ್ತರಾದಿಕಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಗೌರಿಶಂಕರ ಸ್ವಾಮೀಜಿಗಳು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಗೊಲ್ಲಹಳ್ಳಿ ಜಂಗಮ ಮಠವನ್ನು ಸ್ಥಾಪಿಸಿ ಪೀಠಾಧ್ಯಕ್ಷರಾಗಿದ್ದರು.[ಅಧಿಕಾರ ಹಸ್ತಾಂತರಕ್ಕೆ ಗೌರಿಶಂಕರ ಸ್ವಾಮೀಜಿ ಆಕ್ಷೇಪ]

Gowrishankar Swamiji passed away at 2 am Wednesday in bengaluru

ಇನ್ನು ಕಿಮ್ಸ್ ಆಸ್ಪತ್ರೆಯ ವೈದ್ಯರು ಶ್ರೀಗಳ ಪಾರ್ಥೀವ ಶರೀರನ್ನು ಭಕ್ತರಿಗೆ ಒಪ್ಪಿಸಿದ್ದು ಭಕ್ತರು ಶ್ರೀಗಳ ಜನ್ಮಸ್ಥಳವಾದ ಸೀತಕಲ್ಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದಾರೆ.

ಗೌರಿಶಂಕರ ಸ್ವಾಮೀಜಿ ಹಿನ್ನೆಲೆ

* ಹೆಸರು ಜಗದೀಶ್ ( ಗೌರಿಶಂಕರ್ ಸ್ವಾಮೀಜಿ) ,

* ತಂದೆ ಮುದ್ದಪ್ಪ, ತಾಯಿ ಗೌರಮ್ಮ.

* ಜನನ 08-09-1946 ಸಿತಕಲ್ಲು ಗ್ರಾಮದಲ್ಲಿ ಜನನ.

* 1975 ಮೆ 26 ಸಿದ್ದಗಂಗಾ ಮಠದ ಉತ್ತರಾಧಿಕಾರಿ.

* 1987 ಸಲಿಂಗಕಾಮ ಆರೋಪ. ಮಠದಿಂದ ಹೊರಕ್ಕೆ.

Gowrishankar Swamiji passed away at 2 am Wednesday in bengaluru

* 1988 ಮಠಕ್ಕೆ ಹೊಸ ಉತ್ತರಾಧಿಕಾರಿ ನೇಮಕ. ಕೋರ್ಟ್ ಮೊರೆ ಹೋದ ಗೌರಿ ಶಂಕರ ಶ್ರೀಗಳು.

* 1999 ರಿಂದ ಇಲ್ಲಿಯವರೆಗೂ ಉತ್ತರಾಧಿಕಾರಿ ವಿಚಾರವಾಗಿ ಕೋರ್ಟ್ ನಲ್ಲಿ ವಾದ-ವಿವಾದ.

*2004 ರಲ್ಲಿ ಸಲಿಂಗಕಾಮ ಆರೋಪದಲ್ಲಿ ಹೈಕೊರ್ಟ್ ಜೈಲು ಶಿಕ್ಷೆ, 25 ಲಕ್ಷ ದಂಡ .

* 2008 ಸುಪ್ರೀಂ ಕೋರ್ಟ್ ನಿಂದ ದೋಷಮುಕ್ತಿ ಹೊಂದಿದ ಗೌರಿಶಂಕರ ಸ್ವಾಮೀಜಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Jangama Matt President Gowrishankar Swamiji passed away at 2 am Wednesday in kims hospital, bengaluru. Police tightened security this background Tumkur Siddaganga Matt.
Please Wait while comments are loading...