ತುಮಕೂರಲ್ಲಿ ಟೂಲ್ ಪಾರ್ಕ್ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ

Posted By:
Subscribe to Oneindia Kannada

ತುಮಕೂರು, ಆಗಸ್ಟ್ 24 : ತುಮಕೂರಿನ ಕೈಗಾರಿಕಾ ಪ್ರದೇಶದಲ್ಲಿ ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ಸ್ಥಾಪನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 421 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಸ್ಥಾಪನೆಯಾಗಲಿದ್ದು, 4 ಸಾವಿರ ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಈ ಕುರಿತು ಮಾಹಿತಿ ನೀಡಿದರು. ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ ಎಂದರು.[ತುಮಕೂರು : ಸಿದ್ದಗಂಗಾ ನಗರ ಸಾರಿಗೆಗೆ 32 ಬಸ್ ಸೇರ್ಪಡೆ]

Govt approved to set up Integrated Machine Tools Park in Tumakuru

'ವಸಂತ ನರಸಾಪುರದಲ್ಲಿ ಸಮಗ್ರ ಆಧುನಿಕ ಉಪಕರಣಾಗಾರೋದ್ಯಾನ (ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್) ಸ್ಥಾಪಿಸಲು ವಿಶೇಷ ಉದ್ದೇಶ ವಾಹಕ ( ಸ್ಪೆಷಲ್ ಪರ್ಪಸ್ ವೆಹಿಕಲ್ ) ರಚನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ' ಎಂದು ಹೇಳಿದರು.[ಏನಿದು ತುಮಕೂರಿನ ಮೆಗಾ ಫುಡ್‌ಪಾರ್ಕ್?]

'ಪಾರ್ಕ್ ಸ್ಥಾಪನೆಯಿಂದಾಗಿ ಸುಮಾರು ನಾಲ್ಕು ಸಾವಿರ ಮಂದಿಗೆ ನೇರ ಉದ್ಯೋಗ ದೊರೆಯಲಿದೆ. ಈ ವಿಶೇಷ ಉದ್ದೇಶ ವಾಹಕವನ್ನು ಚನ್ನೈ-ಬೆಂಗಳೂರು ಮತ್ತು ಚಿತ್ರದುರ್ಗದವರೆಗೂ ವಿಸ್ತರಿಸಲಾಗುವುದು' ಎಂದು ಸಚಿವರು ವಿವರಣೆ ನೀಡಿದರು.[ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್]

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಸುಮಾರು 500 ಎಕರೆ ಪ್ರದೇಶ ಇದಕ್ಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a cabinet meeting Karnataka Government approved to set up Integrated Machine Tools Park in Tumakuru. The project cost Rs 421 crore.
Please Wait while comments are loading...