ತಾಕತ್ತಿದ್ರೆ RSS ಬ್ಯಾನ್ ಮಾಡ್ಲಿ: ಸಿದ್ದುಗೆ ಶಿವಣ್ಣ ಸವಾಲ್

Posted By:
Subscribe to Oneindia Kannada

ತುಮಕೂರು, ಜನವರಿ 10: ಆರ್ ಎಸ್ ಎಸ್. ಬಜರಂಗದಳ ಹಾಗೂ ಬಿಜೆಪಿಯವರು ಉಗ್ರಗಾಮಿಗಳೆಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಸೊಗುಡು ಶಿವಣ್ಣ, ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ರ್ ಎಸ್ ಎಸ್ ಬ್ಯಾನ್ ಮಾಡಲಿ ಎಂದು ಸವಾಲು ಹಾಕಿದರು.

'ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು'

ಆರ್ ಎಸ್ ಎಸ್ ಬ್ಯಾನ್ ಮಾಡಿ ಈ ರೀತಿಯ ಹೇಳಿಕೆ ನೀಡಲಿ. ಜಾತಿ-ಧರ್ಮದ ಹೆಸರಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. ಮೀರ್ ಸಾದೀಕ್ ತನ ಬಿಟ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಕೆಂಡಕಾರಿದರು.

ಸಂಕ್ರಾಂತಿ ವಿಶೇಷ ಪುಟ

Former minister Sogadu Shivanna slams CM Siddaramaiah of his controversial statement

ಸಿದ್ದರಾಮಯ್ಯ ತಮ್ಮ ಹೆಸರನ್ನು ಮೀರ್ ಸಾದಿಕ್ ಅಂತ ಬದಲಿಸಿಕೊಳ್ಳಲಿ, ಅವರಿಗೆ ಸಿದ್ದರಾಮಯ್ಯ ಎಂದು ಹೆಸರು ಇಟ್ಟಿರುವುದು ಅವರ ತಂದೆ-ತಾಯಿಯರ ದುರದೃಷ್ಟ ಎಂದು ಹರಿಯಾಯ್ದರು.

Former minister Sogadu Shivanna slams CM Siddaramaiah of his controversial statement

ಆರ್ ಎಸ್ ಎಸ್. ಬಜರಂಗದಳ ಹಾಗೂ ಬಿಜೆಪಿಯವರು ಉಗ್ರಗಾಮಿಗಳು ಎಂದು ಸಿದ್ದರಾಮಯ್ಯ ಅವರು ಬುಧವಾರ ಚಾಮರಾಜನಗರದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಲವು ಆರ್ ಎಸ್ ಎಸ್ ಮುಖಂಡರು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister Sogadu Shivanna slammed CM Siddaramaiah of his controversial statement against BJP, RSS and Bajrang Dal, Calls Them Terrorists.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ