ರಾಸುಗೆ ಮೇವು ಸಿಗಲಿಲ್ಲವೆಂದು ಗುಬ್ಬಿ ತಹಸೀಲ್ದಾರ್ ನ ಬಯ್ದ ರೈತನ ಬಂಧನ

By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಫೆಬ್ರವರಿ 11: ಎಮ್ಮೆಗಳಿಗಾಗಿ ಮೇವು ಕೇಳಿ ಸತ್ಯಾಗ್ರಹ ನಡೆಸುತ್ತಿದ್ದ ರೈತರೊಬ್ಬರನ್ನು, ತಹಸೀಲ್ದಾರ್ ರನ್ನು ನಿಂದಿಸಿದ ಆರೋಪದಲ್ಲಿ ಬಂಧಿಸಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದಿದೆ. ಮಲ್ಲಿಕಾರ್ಜುನ್ ಎಂಬುವರು ಬಂಧಿತ ರೈತ. ಗೋಶಾಲೆಗಳಲ್ಲಿ ಎಮ್ಮೆಗಳಿಗೆ ಮೇವು ನೀಡದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಮಲ್ಲಿಕಾರ್ಜುನ್ ಅವರಿಗೆ ಪೆಟ್ರೋಲ್ ಬಂಕ್ ಇದೆ ಎಂಬ ಕಾರಣಾಕ್ಕಾಗಿ ಅವರಿಗೆ ಮೇವು ನೀಡಲು ಅಧಿಕಾರಿಗಳು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಮಲ್ಲಿಕಾರ್ಜುನ್, ಗುಬ್ಬಿ ತಾಲೂಕಿನ ತಹಸೀಲ್ದಾರ್ ವಿಶ್ವನಾಥ್ ಅವರಿಗೆ ದೂರವಾಣಿ ಕರೆ ಮಾಡಿ, ಬೈದಿದ್ದರು. ಏಕವಚನದಿಂದ ನಿಂದಿಸಿದ್ದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ.[ಫೆ.13ರಂದು ಶೀಬಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ]

Farmer arrested in Gubbi for abusing Tehsildar

ಚೇಳೂರಿನ ನಾಡ ಕಚೇರಿ ಎದುರು ಎಮ್ಮೆಗಳ ಜೊತೆ ಬಂದು ಆ ರೈತ ಸತ್ಯಾಗ್ರಹ ನಡೆಸಿದ್ದರು. ಆದರೆ ಮಲ್ಲಿಕಾರ್ಜುನ್ ಮೇವು ಪಡೆಯಲು ಅರ್ಹರಿದ್ದರಾ ಅಥವಾ ಇಲ್ಲವಾ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ದೂರವಾಣಿಯಲ್ಲಿ ತಹಸೀಲ್ದಾರ್ ನ ನಿಂದಿಸಿದ ಕಾರಣಕ್ಕೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mallikarjun, Farmer arrested in Gubbi for scolding Tehsildar. He requested feed for his cattle. But, officers refused. Angry farmer called Gubbi tehsildar through phone and abused.
Please Wait while comments are loading...