ತುಂಗಭದ್ರಾ ಡ್ಯಾಂನಿಂದ ಪಾವಗಡ ತಾಲೂಕಿಗೆ ನೀರು

Posted By:
Subscribe to Oneindia Kannada

ತುಮಕೂರು, ನವೆಂಬರ್ 24: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿಗೆ ತುಂಗಭದ್ರಾ ಅಣೆಕಟ್ಟೆಯಿಂದ ಪೈಪ್ ಲೈನ್ ಮೂಲಕ ನೀರು ಪೂರೈಕೆ ಯೋಜನೆ ನಿಯಮಾನುಸಾರ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.

ಪ್ರಾಥಮಿಕ ಯೋಜನಾ ವರದಿಗೆ 1,703.69 ಕೋಟಿಗಳಿಗೆ ಈಗಾಗಲೇ ಅನುಮೋದನೆ ದೊರೆತಿದೆ. ಆರ್ಥಿಕ ಮತ್ತು ಯೋಜನಾ ಇಲಾಖೆಯು ಕೋರಿರುವ ಸ್ಪಷ್ಟೀಕರಣಗಳಿಗೆ ವಿವರಗಳನ್ನು ಸಲ್ಲಿಸಲಾಗಿದೆ. [ಫ್ಲೋರೋಸಿಸ್: ಕುಡಿಯುವ ನೀರಿನ ಬಗ್ಗೆ ಎಚ್ಚರ]

ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಸಹಮತಿ ದೊರೆತ ಬಳಿಕ ಯೋಜನೆಯನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.[ಕಲ್ಪತರು ನಾಡು ತುಮಕೂರು ಕ್ಷೇತ್ರ ನೋಡಿ]

 Drought hit Pavagada taluk to get water from TB Dam : HK Patil

ಪ್ಲೋರೈಡ್ ಯುಕ್ತ ನೀರಿನಿಂದಾಗಿ ತಾಲ್ಲೂಕಿನ ಜನತೆ ಹಲ್ಲು, ಕಣ್ಣು, ಜಠರ, ಗರ್ಭಕೋಶ, ಮೂಳೆ ಸಂಬಂಧಿ ತೊಂದರೆಗಳಿಂದ ನರಳುತ್ತಿದ್ದಾರೆ.[ತುಮಕೂರು : 1 ರೂ.ಗೆ ಶುದ್ಧ ಕುಡಿಯುವ ನೀರು]

ಹಾಗಾಗಿ ಸರ್ಕಾರ ಹೇಮಾವತಿ ಅಥವಾ ಭದ್ರಾ ಮೇಲ್ದಂಡೆ ಯೋಜನೆ ಯಾವುದಾದರೂ ಸರಿ ಮೊದಲು ಕಾಮಗಾರಿ ಆರಂಭಿಸಿ ಪಾವಗಡ ತಾಲ್ಲೂಕಿನ ಜನರಿಗೆ ನೀರು ಒದಗಿಸಬೇಕು ಎಂದು ತಾಲೂಕಿನ ಸಮಗ್ರ ನೀರು ಹೋರಾಟ ವೇದಿಕೆ ಹಾಗೂ ಅನೇಕ ಎನ್ ಜಿಒಗಳು ಪ್ರತಿಭಟನೆ ನಡೆಸುತ್ತಾ ಬಂದಿವೆ.[ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್]

ಪಾವಗಡ ಮತ್ತು ಮಧುಗಿರಿ ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಕೊರತೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್ ಅವರ ಸಲಹೆಯಂತೆ, 53 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Drought hit Pavagada taluk to get water from Tunga Bhadra Dam via pipeline said H.K. Patil, Minister for Rural Development and Panchayat Raj. Siddaramaiah government has taken steps to supply drinking water to this drought-hit taluk.
Please Wait while comments are loading...