ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ: ಡಿಸಿಎಂ ಪರಮೇಶ್ವರ್

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಡಿಸೆಂಬರ್ 24: ಶ್ರೀಗಳು ಆರೋಗ್ಯವಾಗಿದ್ದಾರೆ. ಪೂಣ೯ ಗುಣಮುಖರಾದ ಬಳಿಕ ಭಕ್ತರಿಗೆ ದಶ೯ನ ನೀಡಲಿದ್ದಾರೆ. ಭಕ್ತಾದಿಗಳು ಸಹಕರಿಸಬೇಕೆಂದು ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಹೇಳಿಕೆ ನೀಡಿದ ಅವರು ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮರಳಿ ಬಂದ ಬಳಿಕ ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಟ್ಟಿದ್ದೇನೆ. ಶ್ರೀಗಳ ಆರೋಗ್ಯ ಸುಧಾರಿಸಿದೆ. ಎಲ್ಲಾ ಹಾರ್ಮೋನ್ಸ್ ನಾರ್ಮಲ್ಲಾಗಿ ಕೆಲಸ ಮಾಡುತ್ತಿವೆ.

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಎರಡು ದಿನದಲ್ಲಿ ಡಿಸ್‌ಚಾರ್ಜ್‌ ಸಾಧ್ಯತೆಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಎರಡು ದಿನದಲ್ಲಿ ಡಿಸ್‌ಚಾರ್ಜ್‌ ಸಾಧ್ಯತೆ

ಸಣ್ಣ ಇನ್ಫೆಕ್ಷನ್ ಅಗಿದೆ ಎಂಬ ಕಾರಣಕ್ಕೆ ಶ್ರೀಗಳನ್ನು ಯಾರೂ ಭೇಟಿ ಮಾಡೋಕೆ ಬಿಡುತ್ತಿಲ್ಲ.ಸ್ವಲ್ಪ ದಿನಗಳ ಬಳಿಕ ಭಕ್ತಾಧಿಗಳಿಗೆ ದರ್ಶನ ನೀಡುತ್ತಾರೆ. ನನ್ನ ಬಳಿ ಅವರು ಮಾತಾಡ್ಲಿಲ್ಲ. ಆದ್ರೆ ನನ್ನ ಕಣ್ಣು ಬಿಟ್ಟು ನೋಡಿದ್ರು. ಪರಮೇಶ್ವರ್ ಬಂದಿದ್ದಾರೆ ಅಂದ ತಕ್ಷಣ ಕಣ್ಣುಬಿಟ್ಟು ನೋಡಿದ್ರು.

Dr. Sri Shivakumara Swamiji helath condtion is good now

ನೋವು ಇರುವ ಉದ್ದೇಶದಿಂದ ಸ್ವಲ್ಪ ಪೇನ್ ಕಿಲ್ಲರ್ ಔಷಧಿ ನೀಡಿದ್ದಾರೆ ಎಂದು ಶ್ರೀಗಳ ಆರೋಗ್ಯದ ಬಗ್ಗೆ ತಿಳಿಸಿದರು.

ರಮೇಶ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು ಮಾಧ್ಯಮಗಳಲ್ಲಿ ರಮೇಶ ಜಾರಕಿಹೊಳಿ ರಾಜೀನಾಮೆ ವಿಚಾರ ಬರುತ್ತದೆ. ಇದು ಸತ್ಯಕ್ಕೆ ದೂರವಾಗಿದೆ. ಸಂಪುಟ ವಿಸ್ತರಣೆ ಬಳಿಕ ಇಂಥ ಅಸಮಾಧಾನ ಗಳು ಸಹಜ.

ಇನ್ನೂ ಒಂದು ವಾರ ಶಿವಕುಮಾರ ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆಇನ್ನೂ ಒಂದು ವಾರ ಶಿವಕುಮಾರ ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ

ಅವರನ್ನ ಮನವೊಲಿಸುವ ಯತ್ನ ಮಾಡುತ್ತೇವೆ. ಖಗೆ೯ ಅವರ ಜೊತೆಯೂ ಮಾತನಾಡುತ್ತೇವೆ. ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಕೈ ತಪ್ಪಲು ನಾನು ಮತ್ತು ದಿನೇಶ್ ಗುಂಡೂರಾವ್ ಕಾರಣ ಅಲ್ಲ. ಇದು ಪಕ್ಷದ ಹೈ ಕಮಾಂಡ್ ತೀಮಾ೯ನ ಮಾಡಿದೆ.

ಶಿವಕುಮಾರ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್.ಡಿ.ಕುಮಾರಸ್ವಾಮಿಶಿವಕುಮಾರ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್.ಡಿ.ಕುಮಾರಸ್ವಾಮಿ

ಗೃಹ ಖಾತೆ ಎಂ.ಬಿ‌ ಪಾಟೀಲರಿಗೆ ನೀಡುವ ವಿಚಾರ ಕುರಿತು ಪ್ರತಿಕ್ರಯಿಸಿದ ಪರಮೇಶ್ವರ್ ಅವರು ಖಾತೆ ಬದಲಾವಣೆ ಕುರಿತ ಚರ್ಚೆ ನಡೆದಿಲ್ಲ. ಅದೆಲ್ಲವೂ ಪಕ್ಷ ನಿರ್ಧರಿಸುತ್ತದೆ ಎಂದು ತಿಳಿಸಿದರು.

English summary
Deputy Chief Minister Parameshwar Said that Dr. Sri Shivakumara Swamiji helath condtion is good now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X