ಸೊಗಡು ಮನೆಯಲ್ಲಿ ಸಭೆ ಸೇರಿರುವ ಅತೃಪ್ತರು ಯಾರು?

By: ಕುಮಾರ ಸ್ವಾಮಿ
Subscribe to Oneindia Kannada

ತುಮಕೂರು, ಜನವರಿ 18: ಮಾಜಿ ಸಚಿವ ಶಿವಣ್ಣ ಮನೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಅತೃಪ್ತ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಈಶ್ವರಪ್ಪ ಸೇರಿದಂತೆ, ಹಲವಾರು ನಾಯಕರು ಪಾಲ್ಗೊಂಡಿದ್ದಾರೆ.

ಈ ಬಗ್ಗೆ ವಿವರಣೆ ನೀಡಿದ ಸೊಗಡು ಶಿವಣ್ಣ, ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಜನವರಿ 19ರಂದು ಭಿನ್ನಮತೀಯರ ಸಭೆಯನ್ನು ಕರೆದಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಈ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಯಡಿಯೂರಪ್ಪನವರಲ್ಲಿ ಯಾವ ರೀತಿ ಅಹವಾಲು ಸಲ್ಲಿಸಬೇಕೆಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದರ ಜತೆಯಲ್ಲೇ, ಮನೆಯಲ್ಲಿ ಭಾರತ ಮಾತ ಕಾರ್ಯಕ್ರಮವನ್ನು ಮಾಡುತ್ತಿರುವುದರಿಂದ ಪಕ್ಷದ ಕೆಲವು ಪ್ರಮುಖರನ್ನು ಆಹ್ವಾನಿಸಿದ್ದೇನೆ ಎಂದು ವಿವರಿಸಿದ ಅವರು, ''ಬಿಜೆಪಿಯಲ್ಲಿ ನಂಬಿಕೆ ಏರುಪೇರಾಗಿದೆ ಅದನ್ನು ಸರಿಪಡಿಸುತ್ತವೆ.

Dissident leaders of Karnataka BJP gathered in Tumakuru

ಯಡಿಯೂರಪ್ಪ ಪಕ್ಷ ತೊರೆದಾಗಲೂ ಬಿಜೆಪಿಯಲ್ಲೇ ಇದ್ದೆವು. ಅವರಿಗೆ ಅನ್ಯಾಯವಾದಾಗಲೂ ನಾವು ಬಿಜೆಪಿಯಲ್ಲೇ ಇದ್ದೆವು.
ರಾಜಕೀಯದಲ್ಲಿ ಏನಾದರೂ ನಂಬಿಕೆ ಇದ್ದರೆ ಅದು ಮೋದಿವರ ಮೇಲೆ ಮಾತ್ರ'' ಎಂದು ತಿಳಿಸಿದರು.

ಯಡಿಯೂರಪ್ಪ ಅವರ ಮೇಲಿದ್ದ ಭರವಸೆ ಕಡಿಮೆಯಾಗಿದೆ ಎಂದು ತಿಳಿಸಿದ ಅವರು, ಸದ್ಯಕ್ಕೆ ರಾಜ್ಯ ಬಿಜೆಪಿ ಯಲ್ಲಿ ನಂಬಿಕೆ ಕಳೆದುಕೊಂಡಿದ್ದೇವೆ. ಯಡಿಯೂರಪ್ಪ ರಾಜ್ಯಧ್ಯಕ್ಷರಾದ ಸಂದರ್ಭದಲ್ಲಿ ಇದ್ದ ಖುಶಿ ಈಗ ಇಲ್ಲ ಎಂದರು.

ಇದೇ ವೇಳೆ, ತುಮಕೂರು ಬಿಜೆಪಿ ಜಿಲ್ಲಾದ್ಯಕ್ಷ ಸ್ಥಾನ ನೀಡದಿರುವುದಕ್ಕೆ ಮತ್ತೊಮ್ಮೆ ಸೊಗಡು ಅಸಮಾಧಾನ ವ್ಯಕ್ತಪಡಿಸಿದರು.

Dissident leaders of Karnataka BJP gathered in Tumakuru

ಅಪ್ಪ- ಮಗ ಇಬ್ಬರು ಸೋತಿದ್ದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ. ಇಂತಹವರ ಕೈಗೆ ಪಕ್ಷವನ್ನ ಕೊಟ್ಟಿದ್ದಾರೆ. ಇದರಿಂದ ನಮಗೆ ಹೊಟ್ಟೆ ಉರಿಯುತ್ತದೆ. ಇದರ ಬಗ್ಗೆ ಇಂದು ಚರ್ಚೆ ನಡೆಯಲಿದೆ ಎಂದು ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಎಸ್. ಬಸವರಾಜು ಅವರ ಹೆಸರನ್ನೆತ್ತದೆ ಸೊಗಡು ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ಚಾಮರಾಜನಗರದಿಂದ ಬೀದರ್ ವರೆಗೂ ಅತೃಪ್ತರು ಇದ್ದಾರೆ. ನಮ್ಮದೆಲ್ಲರದ್ದೂ ಒಂದೇ ಅನಿಸಿಕೆಯಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

Dissident leaders of Karnataka BJP gathered in Tumakuru

ಸೊಗಡು ಶಿವಣ್ಣ ಮನೆಯಲ್ಲಿ ಸೇರಿರುವ ಬಿಜೆಪಿ ಮುಖಂಡರ ಪಟ್ಟಿ ಇಂತಿದೆ:

ನಾರಾಯಣಸ್ವಾಮಿ ಎಂ.- ಮಾಜಿ ಶಾಸಕ

ಬಿ.ಎಂ ನಾರಾಯಣಸ್ವಾಮಿ - ಮಾಜಿ ಜಿಲ್ಲಾಧ್ಯಕ್ಷರು ಚಿಕ್ಕಬಳ್ಳಾಪುರ

ಲಕ್ಷ್ಮಯ್ಯ - ಮಾಜಿ ಜಿಲ್ಲಾಧ್ಯಕ್ಷ, ಬೆಂಗಳೂರು ಗ್ರಾಮಾಂತರ

ನಿರ್ಮಲ್ ಕುಮಾರ್ ಸುರಾನ - ಮಾಜಿ ಶಾಸಕರು, ರಾಜ್ಯ ಬಿಜೆಪಿ ಉಪಾಧ್ಯಕ್ಷ.

ಕೃಷ್ಣಾ ರೆಡ್ಡಿ- ಬಿಜೆಪಿವಿಭಾಗೀಯ ಕಾರ್ಯದರ್ಶಿ, ಬೆಂಗಳೂರು

ವೆಂಕಟೇಶ ಮೂರ್ತಿ - ಮಾಜಿ ಮೇಯರ್, ಬೆಂಗಳೂರು.

ಎಂ.ವಿ ರವಿಶಂಕರ್ - ಮೈಸೂರು ಬಿಜೆಪಿ ವಿಭಾಗೀಯ ಕಾರ್ಯದರ್ಶಿ, ಮೈಸೂರು.

ಸಿದ್ದರಾಜು- ಮಾಜಿ ಎಂಎಲ್ ಸಿ, ಮೈಸೂರು.

ಗುರುಸ್ವಾಮಿ- ಮಾಜಿ ಶಾಸಕರು ಮೈಸೂರು

ನಂಜುಂಡಸ್ವಾಮಿ - ಮಾಜಿ ಶಾಸಕರು, ಮೈಸೂರು

ಸಿ. ರಮೇಶ್ - ಮಾಜಿ ಎಂಎಲ್ ಸಿ ಮೈಸೂರು

Dissident leaders of Karnataka BJP gathered in Tumakuru

ಸೋಮಣ್ಣ ಬೇವಿನ ಮರದ - ಮಾಜಿ ಎಂಎಲ್ ಸಿ , ಹಾವೇರಿ

ಭೋಜರಾಜ ಕರೋಟಿ- ಮಾಜಿ ಎಂಎಲ್ಸಿ

ಭಾನುಪ್ರಕಾಶ್- ಹಾಲಿ ಎಂಎಲ್ ಸಿ, ಶಿವಮೊಗ್ಗ

ಭಾರತಿ ಜಂಬಗಿ- ಮಾಜಿ ರಾಜ್ಯ ಕಾರ್ಯದರ್ಶಿ ಹಾವೇರಿ

ಗಿರೀಶ್ ಪಟೇಶ್ - ಮಾಜಿ ಛೇರ್ಮನ್ ಶಿವಮೊಗ್ಗ

ಕೆ.ಜಿ ಕುಮಾರಸ್ವಾಮಿ- ಮಾಜಿ ಶಾಸಕ ಶಿವಮೊಗ್ಗ

ಎನ್. ಮಂಜುನಾಥ್ - ತರೀಕೆರೆ - ಹಾಲಿ ರಾಜ್ಯ ಕಾರ್ಯಕಾರಣಿ ಸದಸ್ಯರು

ರೇಖಾ ಹುಲಿಯಪ್ಪಗೌಡ- ಮಾಜಿ ಜಿ.ಪಂ ಸದಸ್ಯರು ಚಿಕ್ಕಮಗಳೂರು

ಸುವರ್ಣ ಶಂಕರ್ - ಶಿವಮೊಗ್ಗ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ

ನಾರಾಯಣ ಸಾ. ಬಾಂಡ್ಗೆ- ಮಾಜಿ ಎಂಎಎಲ್ ಸಿ, ಬಾಗಲಕೋಟೆ

ಶ್ರೀಕಾಂತ್ ಕುಲಕರ್ಣಿ- ಮಾಜಿ ಶಾಸಕ ಜಮಖಂಡಿ

ವಿಲಾಸ್ ರಾವ್ ಪವಾರ್ - ಬೆಳಗಾವಿ ವಿಭಾಗದ ಸೆಲ್ ಕೋರ್ಡಿನೇಟರ್

ರಾಜು ಬಿರಾದಾರ್- ಬಿಜಾಪುರ

ಅಶೋಕ್ ಗಸ್ಥಿ - ರಾಯಚೂರು ಬಿಜೆಪಿ ಮಾಜಿ ವಿಭಾಗೀಯ ಕಾರ್ಯದರ್ಶಿ

ನೇಮಿರಾಜನಾಯಕ - ಮಾಜಿ ಎಂಎಲ್ಎ ಬಳ್ಳಾರಿ

ಸೋಮಲಿಂಗ - ಮಾಜಿ ಶಾಸಕ ಬಳ್ಳಾರಿ

ವಿರುಪಾಕ್ಷಪ್ಪ - ಮಾಜಿ ಸಂಸದ ರಾಯಚೂರು

ಬಸವರಾಜನಾಯ್ಕ - ಮಾಜಿ ಶಾಸಕ ದಾವಣಗೆರೆ

ಶಿವಕುಮಾರ್ , ವೀರೇಶ್ ಆಗನವಾಡಿ, ಬಿಜೆಪಿ ಮುಖಂಡರು

ಅವ್ವಣ್ಣ ಮ್ಯಾಕೇರಿ, ಈಶ್ವರ್ ಸಿಂಗ್ ಠಾಕೂರು, ಶರಣ್ಣಪ್ಪ ತಳವಾರ್ ಪದ್ಮಾಕರ ಪಾಟೀಲ್ ,ಮಹಂತ ಗೌಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dissidents leaders of Karnataka BJP has gathered in former minister Sogadu Shivanna's residence in Tumakuru. Veteran leader K.S. Eshwarappa, former MLA M. Narayana Swamy are among the dissidents.
Please Wait while comments are loading...