2ನೇ ದಿನಕ್ಕೆ ಕಾಲಿಟ್ಟ ಪರಿವರ್ತನಾ ಯಾತ್ರೆ: ತುರುವೆಕೆರೆಯಲ್ಲಿ ಬಿಜೆಪಿ ನಾಯಕರು

Posted By:
Subscribe to Oneindia Kannada

ತುಮಕೂರು, ನವೆಂಬರ್ 03: 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ ಆರಂಭಿಸಿರುವ 75 ದಿನಗಳ ಪರಿವರ್ತನಾ ಯಾತ್ರೆಯ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

ಸಿದ್ದರಾಮಯ್ಯ ಸರ್ಕಾರ ತೊಲಗಿಸಲು ಕೈ ಜೋಡಿಸಿ : ಬಿಎಸ್‌ವೈ ಕರೆ

ಯಡಿಯೂರಿನ ಸಿದ್ದಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಎರಡನೇ ದಿನದ ಯಾತ್ರೆ ಶುರುವಾಗಿದ್ದು, ಬೆಳಿಗ್ಗೆ 11 ಗಂಟೆಗೆ ತುರುವೆಕೆರೆಯಿಂದ ರಥಯಾತ್ರೆ ಆರಂಭವಾಗಿದೆ.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರ

Day 2 of Karnataka BJP's Parivartana Rally: Leaders are in Turuvekere

ತುರುವೇಕೆರೆ ಪಟ್ಟಣಕ್ಕೆ ಸುಮಾರು ಅರ್ಧ ಕಿ.ಮೀ ದೂರದಲ್ಲೇ ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಗತ ಕೋರಿದರು.

ನಂತರ ತುರುವೇಕೆರೆಯಲ್ಲಿ ಏರ್ಪಾಡಾಗಿದ್ದ ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಜ್ಯೋತಿ ಬೆಳಗಿ ಚಾಲನೆ ನೀಡಿದರು.

Day 2 of Karnataka BJP's Parivartana Rally: Leaders are in Turuvekere

ನಂತರ ಮಾತನಾಡಿದ ಅವರು, "ಲೂಟಿ, ಭ್ರಷ್ಟಾಚಾರ, ಹಗರಣ, ಜಾರ್ಜ್ ಅವರನ್ನು ವಜಾ ಮಾಡದೆ ದ್ರೋಹ ಮಾಡುತ್ತಿರುವ ಕಾಂಗ್ರೆಸ್ ಪಶ್ಚಾತ್ತಾಪ ಮಾಡಿಕೊಳ್ಳಬೇಕು" ಎಂದರು.

ಪಾಪ ಪರಿಹಾರಕ್ಕಾಗಿ ಪರಿವರ್ತನಾ ಯಾತ್ರೆ - ಸಿದ್ದರಾಮಯ್ಯ

"ಜನರ ಯಾವ ಸಮಸ್ಯೆಯನ್ನೂ ಪರಿಹರಿಸದೆ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿರುವುದು ಮೂರ್ಖತನದ ಪರಮಾವಧಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

Day 2 of Karnataka BJP's Parivartana Rally: Leaders are in Turuvekere

ನ.2 ರಿಂದ ಬೆಂಗಳೂರಿನಲ್ಲಿ ಆರಂಭವಾದ ಯಾತ್ರೆ ಜ.28, 2018 ರವರೆಗೆ ಮುಂದುವರಿಯಲಿದ್ದು, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ನಯಕರು ಪರಿವರ್ತನಾ ಯಾತ್ರೆ ಕೈಗೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Parivartana Rally by karnataka BJP is in Turuvekere in Tumakuru district today. As 2nd day of Rally, state BJP president and former chief minister of Karnataka BS Yeddyurappa adresses the people of Turuvekere.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ