ಸಿದ್ಧರಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿ ವಿಡಿಯೋ ತೆಗೆದರು

Posted By:
Subscribe to Oneindia Kannada

ತುಮಕೂರು, ಮಾರ್ಚ್ 22 : ಪ್ರೇಮಿಗಳನ್ನು ವಿವಸ್ತ್ರಗೊಳಿಸಿ, ಫೋಟೋ ತೆಗೆದು, ವಿಡಿಯೋ ಮಾಡಿರುವ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿದಾಗಿ ಹುಡುಕಾಟ ನಡೆದಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟದಲ್ಲಿ ಭಾನುವಾರ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರ ಬೆಳಗ್ಗೆ ಗ್ರಾಮಸ್ಥರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. [ಮತ್ತೆ ಸಿಕ್ಕಿಬಿದ್ರು ಮೂವರು ನಕಲಿ ಪೊಲೀಸರು!]

rape

ಘಟನೆಯ ವಿವರ : ಭಾನುವಾರ ಮಧ್ಯಾಹ್ನ ಚಿಕ್ಕನಾಯಕನಹಳ್ಳಿಯ 20 ವರ್ಷದ ಯುವತಿ ಪಾವಗಡದ ತನ್ನ ಪ್ರಿಯಕರನ ಜೊತೆ ಸಿದ್ಧರಬೆಟ್ಟಕ್ಕೆ ಹೋಗಿದ್ದಳು. ಏಕಾಂತದಲ್ಲಿ ಅವರಿಬ್ಬರು ಮಾತನಾಡುತ್ತಾ ಕುಳಿತಿದ್ದ ವೇಳೆ ಅಲ್ಲಿಗೆ ಬಂದ ಯುವಕ ಅವರ ಫೋಟೋ ತೆಗೆದಿದ್ದಾನೆ. [ಕಾವೇರಿ ತೀರದಲ್ಲಿ ಕಾಮುಕನಿಗೆ ಚಪ್ಪಲಿ ಸೇವೆ]

ಈ ಫೋಟೋವನ್ನು ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿ ಹಾಕುವುದಾಗಿ ಅವನು ಬೆದರಿಕೆ ಹಾಕಿದ್ದಾನೆ. ನಂತರ ಅಲ್ಲಿಗೆ ಬಂದ ಮೂವರು ಯುವಕರು ಯುವತಿ ಜೊತೆ ಇದ್ದವನನ್ನು ಬೇರೆ ಕರೆ ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ಫೋಟೋ ತೆಗೆದಿದ್ದಾರೆ. ವಿಡಿಯೋ ಮಾಡಿದ್ದಾರೆ.

ಯುವಕನನ್ನು ಅಲ್ಲಿಯೇ ಕೂರಿಸಿ ಯುವತಿಯ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರ ನಡೆಸಲೂ ಯತ್ನಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.ಯುವಕರಿಂದ ತಪ್ಪಿಸಿಕೊಂಡ ಯುವತಿ ಬೆಟ್ಟದಲ್ಲಿರುವ ಈಶ್ವರನ ಗುಡಿಯಲ್ಲಿ ರಾತ್ರಿ ಅಡಗಿ ಕುಳಿತಿದ್ದಳು.

ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ಕರೆದ ಯುವತಿ ಸಹಾಯ ಮಾಡುವಂತೆ ಕೇಳಿದ್ದಾಳೆ. ಗ್ರಾಮಸ್ಥರು ಯುವತಿಗೆ ಬಟ್ಟೆ ನೀಡಿ, ಯುವಕನನ್ನು ಪತ್ತೆ ಹಚ್ಚಿ ಇಬ್ಬರನ್ನು ರಕ್ಷಿಸಿದ್ದಾರೆ. ಬಂಡೆಹಳ್ಳ ಗ್ರಾಮಸ್ಥರ ಜೊತೆ ಪೊಲೀಸ್ ಠಾಣೆಗೆ ತೆರಳಿದ ಯುವ ಜೋಡಿ ಘಟನೆ ಬಗ್ಗೆ ದೂರು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pair of lovers who went to Siddharabetta Hills in Koratagere taluk of Tumakuru district On Sunday evening, they met a stranger and he split them by threatening them at knife point. Stranger attempted to rape her, she managed to escape after kicking him in his private parts. She surfaced at the nearby Bandehalli village with green leaves as clothing on Monday morning. Koratagere police have registered a case and taken up investigation.
Please Wait while comments are loading...