ಸಿದ್ಧರಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿದವ ಸಿಕ್ಕಿಬಿದ್ದ

Posted By:
Subscribe to Oneindia Kannada

ತುಮಕೂರು, ಮಾರ್ಚ್ 24 : ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿ ವಿಡಿಯೋ ತೆಗೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮಿಗಳ ಮೊಬೈಲ್ ದೋಚಿದ್ದ ಆರೋಪಿ, ಆ ಮೊಬೈಲ್ ಮೂಲಕ ಕರೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಆರೋಪಿಯನ್ನು ತುಮಕೂರು ಸಮೀಪದ ಅರೆಗುಜ್ಜನಹಳ್ಳಿ ಮೂಲದ ಭೀಮರಾಜ್ ಎಂದು ಗುರುತಿಸಲಾಗಿದೆ. ಖಾಕಿ ವೇಷ ತೊಟ್ಟು ಪ್ರೇಮಿಗಳನ್ನು ಬೆದರಿಸಿದ್ದ ಈತ ವಿವಸ್ತ್ರಗೊಳಿಸಿ ವಿಡಿಯೋ ತೆಗೆದಿದ್ದ. ಅವರ ಬಟ್ಟೆ, ಮೊಬೈಲ್ ದೋಚಿದ್ದ. ಈ ಬಗ್ಗೆ ಪ್ರೇಮಿಗಳು ಕೊರಟಗೆರೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬುಧವಾರ ಸಂಜೆ ಬಂಧಿಸಿದ್ದಾರೆ. [ಸಿದ್ಧರಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿ ವಿಡಿಯೋ ತೆಗೆದರು]

bhimaraj

ಮಾರ್ಚ್ 20ರ ಭಾನುವಾರ ಮಧ್ಯಾಹ್ನ ಚಿಕ್ಕನಾಯಕನಹಳ್ಳಿಯ 20 ವರ್ಷದ ಯುವತಿ ಪಾವಗಡದ ತನ್ನ ಪ್ರಿಯಕರನ ಜೊತೆ ಸಿದ್ಧರಬೆಟ್ಟಕ್ಕೆ ಹೋಗಿದ್ದಳು. ಏಕಾಂತದಲ್ಲಿ ಅವರಿಬ್ಬರು ಮಾತನಾಡುತ್ತಾ ಕುಳಿತಿದ್ದ ವೇಳೆ ಅಲ್ಲಿಗೆ ಬಂದಿದ್ದ ಭೀಮರಾಜ್ ಅವರ ಫೋಟೋ ತೆಗೆದಿದ್ದ. [ಕಾವೇರಿ ತೀರದಲ್ಲಿ ಕಾಮುಕನಿಗೆ ಚಪ್ಪಲಿ ಸೇವೆ]

ಚಾಕು ತೋರಿಸಿ ಇಬ್ಬರನ್ನು ಬೆದರಿಸಿದ್ದ. ಈ ಫೋಟೋವನ್ನು ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ. ನಂತರ ಯುವಕನನ್ನು ಬೇರೆ ಕಡೆ ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ಫೋಟೋ ತೆಗೆದಿದ್ದ, ವಿಡಿಯೋ ಮಾಡಿದ್ದ. ಯುವತಿಯ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ್ದ. ಅವನಿಂದ ತಪ್ಪಿಸಿಕೊಂಡ ಯುವತಿ ಬೆಟ್ಟದಲ್ಲಿರುವ ಈಶ್ವರನ ಗುಡಿಯಲ್ಲಿ ರಾತ್ರಿ ಅಡಗಿ ಕುಳಿತಿದ್ದಳು. ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಸಹಾಯ ಪಡೆದು ಪ್ರೇಮಿಗಳು ಬಚಾವಾಗಿದ್ದರು.

ಸಿಕ್ಕಿಬಿದ್ದದ್ದು ಹೇಗೆ? : ಯುವಕ ಮತ್ತು ಯುವತಿಯ ವಿಡಿಯೋ ಮಾಡಿದ ಈತ ಬಳಿಕ ಬಟ್ಟೆ, ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದ. ಪ್ರೇಮಿಗಳು ಈ ಕುರಿತು ಪೊಲೀಸರಿಗೆ ದೂರು ಕೊಟ್ಟಿದ್ದರು. ಯುವತಿಯ ಮೊಬೈಲ್‌ನಿಂದ ಅಕ್ಕನಿಗೆ ಭೀಮರಾಜ್ ಕರೆ ಮಾಡಿದ್ದು, ಕರೆಗಳ ಮಾಹಿತಿ ಸಂಗ್ರಹಣೆ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಭೀಮರಾಜ್ ಜೊತೆ ಇನ್ನೂ ಕೆಲವು ಯುವಕರು ಇದ್ದರು ಎಂದು ಪ್ರೇಮಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tumakuru Koratagere police arrested Bhimaraj in connection with the case of Pair of lovers stripped at Siddharabetta Hills in Koratagere taluk On Sunday, March 20th evening.
Please Wait while comments are loading...