ಆ ಮಸೀದಿ ಮುಂದೆ ಸಿಎಂ ಸಿದ್ದು ಹೋಗಿದ್ದೇಕೆ?

Posted By:
Subscribe to Oneindia Kannada

ತುಮಕೂರು: ನವೆಂಬರ್ 16: ತುಮಕೂರಿಗೆ ಮಂಗಳವಾರ ಬರ ಪರಿಶೀಲನೆಗೆ ಹೋಗಿದ್ದರು. ಈ ವೇಳೆ ಚಿಕ್ಕನಾಯಕನಹಳ್ಳಿಗೂ ಹೊಗಿದ್ದರು ಆದರೆ ಎಲ್ಲರು ಆ ಮಸೀದಿ ಮುಂದೆ ಹೋಗಬಾರದು ಎಂದುಕೊಳ್ಳುತ್ತಿರುವಾಗಲೇ. ಅವೆಲ್ಲಾ ಮೌಢ್ಯ ಎಂದು ಸಿಎಂ ಹೊಗಿಯೇ ಬಿಟ್ಟರು.

ಸಿಎಂ ಸಿದ್ದರಾಮಯ್ಯ ಅವರು ಮೌಢ್ಯ ಎಂದು ಹೇಳಿ ಹೋದ ಮಸೀದಿ ಯಾವುದು ಎಂದರೆ ಚಿಕ್ಕನಾಯಕನಹಳ್ಳಿಯಲ್ಲಿರುವ ತಾತಯ್ಯನ ಗೋರಿ, ಅಥವಾ ಮಸೀದಿ.[ತುಮಕೂರಿನ ಬರಪೀಡಿತ ತಾಲ್ಲೂಕುಗಳಿಗೆ ಸಿಎಂ ಭೇಟಿ]

Cm siddaramaiah went on in front of tataiah mosque

ಈ ಗೋರಿ ಬಹಳ ಪುರಾತನವಾಗಿದ್ದು ಹಿಂದೂ ಮತ್ತು ಮುಸ್ಲೀಂ ಭಾಂಧವ್ಯ ಹೊಂದಿರುವ ಮಸೀದಿಯಾಗಿದೆ ಕರ್ನಾಟಕದವರು ಇದನ್ನು ತಾತಯ್ಯನ ಗೋರಿ ಎಂದು ಕೂಗುವುದರಿಂದ ಇದೇ ಹೆಸರೇ ಪ್ರಚಲಿತದಲ್ಲಿದೆ.
ಇಲ್ಲಿ ಮಕ್ಕಳ ಸಣ್ಣ ಪುಟ್ಟ ರೋಗಗಳಿಗೆ , ದೊಡ್ಡವರ ಕಷ್ಟಗಳ ನಿವಾರಣೆ ಮತ್ತು ದೆವ್ವ ಪೀಡೆಗಳ ಕಾಟ ತಪ್ಪಿಸಲು ಜನರು ಬಹಳ ದೂರದಿಂದ ಇಲ್ಲಿಗೆ ಬರುತ್ತಾರೆ.[ನೋಟು ಬ್ಯಾನ್: ಜೇಟ್ಲಿಗೆ 5 ಸಲಹೆ ನೀಡಿದ ಸಿದ್ದರಾಮಯ್ಯ]

ಹಾಗೆಯೇ ಅಧಿಕಾರಸ್ಥರು, ರಾಜಕಾರಣಿಗಳು ಈ ಗೋರಿಯನ್ನು ಕಂಡರೆ ಹೆದರುತ್ತಾರೆ. ಎಕೆಂದರೆ ಈ ಗೋರಿಯ ಮುಂದೆ ವಾಹನದಲ್ಲಿ , ಅಥವಾ ವಾಹನ ಚಲಾಯಿಸಿಕೊಂಡು ಹೋದರೆ ಅವರು ಮುಂದಿನ ಬಾರಿಗೆ ಅಧಿಕಾರದಲ್ಲಿ ಇರುವುದಿಲ್ಲ ಎಂಬುದು ಇಲ್ಲಿನ ಪ್ರತೀತಿ. ಈ ಹಿಂದೆ ಈ ರೀತಿಯ ಅನೇಕ ಘಟನೆಗಳಿಂದ ಶಾಸಕರು, ಅಧಿಕಾರಿಗಳು ತಮ್ಮ ಸ್ಥಾನದಿಂದ ಕೆಳಗಿಳಿದಿರುವ ಉದಾಹರಣೆಗಳಿವೆ.

ಸಿಎಂ ಸಿದ್ದರಾಮಯ್ಯ ಅವರು ಮೌಢ್ಯ ಎಂದು ಮಹದೇಶ್ವರ ಬೆಟ್ಟಕ್ಕೆ ಹೋಗಿ ಬಂದಿದ್ದು ನೋಡಿದ್ದೇವೆ. ಹಾಗೂ ಈಗಲೂ ಈ ರೀತಿಯ ಮತ್ತೊಂದು ಮೌಢ್ಯಕ್ಕೆ ಸೆಡ್ಡು ಎಂಬಂತೆ ಸಿಎಂ ಇಲ್ಲಿಯೂ ತಮ್ಮ ನಿರ್ಧಾರ ಬದಲಿಸಿಲ್ಲ. ಹೀಗಾಗಿ ಎಲ್ಲ ಪಕ್ಷಗಳು ಮುಂದಿನ ಚುನಾವಣೆಗೆ ಸಜ್ಜಾಗುತ್ತಿರುವ ವೇಳೆಯಲ್ಲಿ ಅಯ್ಯೋ ನಮ್ಮ ಮುಖ್ಯಮಂತ್ರಿಗಳು ಹೀಗೆ ಮಾಡಿಬಿಟ್ಟರಲ್ಲಾ ಎಂದು ಚಿಕ್ಕನಾಯಕನಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cm siddaramaiah went on in front of tataiah mosque in chikkanayakanahalli. Other congress Activists said not to go in front of this mosque. Because any officer to go in front of his mosque that officer lose our power in next days.
Please Wait while comments are loading...