ತುಮಕೂರು: ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಸಿ.ಚನ್ನಿಗಪ್ಪ

By: ತುಮಕೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು/ತುಮಕೂರು, ಜನವರಿ 22: ಜೆಡಿಎಸ್ ನ ತುಮಕೂರು ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಸಿ. ಚನ್ನಿಗಪ್ಪ ಅವರನ್ನು ನೇಮಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಅದೇಶ ಹೊರಡಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತುಮಕೂರು ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಸಿ.ಚನ್ನಿಗಪ್ಪ, ಕಾರ್ಯಾಧ್ಯಕ್ಷರಾಗಿ ಆರ್.ಸಿ.ಆಂಜಿನಪ್ಪ ಆಯ್ಕೆ ಮಾಡಲಾಯಿತು.

C Chennigappa

ತುಮಕೂರು ನಗರ ಕ್ಷೇತ್ರದಿಂದ ಸಿ ಚನ್ನಿಗಪ್ಪ ಅವರನ್ನು ಕಣಕ್ಕಿಳಿಸಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇದರ ಜತೆಗೆ ಕಳೆದ ಭಾರಿ ಕಣಕ್ಕಿಳಿದಿದ್ದ ಗೋವಿಂದರಾಜು ಹಾಗು ಜೆಡಿಎಸ್ ತುಮಕೂರು ನಗರಾಧ್ಯಕ್ಷ ನರಸೇಗೌಡ ಅವರ ಹೆಸರು ಕೂಡಾ ಚರ್ಚೆಗೊಳಪಟ್ಟಿತು.

ಕಳೆದ ಬಾರಿ ಕೂಡಾ ನರಸೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದವರು, ಆದರೆ, ಟಿಕೆಟ್ ಕೈತಪ್ಪಿತ್ತು. ತಿಪಟೂರು ಹಾಗು ತುಮಕೂರು ನಗರ ಹೊರತು ಪಡಿಸಿದರೆ ಉಳಿದೆಲ್ಲಾ ತಾಲೂಕುಗಳಲ್ಲಿ ಹಾಲಿ ಶಾಸಕರೆ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ ಸಿ ಗೌರೀಶಂಕರ್, ಶಿರಾ ಕ್ಷೇತ್ರದಿಂದ ಬಿ ಸತ್ಯನಾರಾಯಣ. ಮಧುಗಿರಿಯಿಂದ ವೀರಭದ್ರಯ್ಯ ಕಣಕ್ಕಿಳಿಯುವುದು ಖಚಿತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister C Chennigappa appointed as Tumakuru JDS district President and he is likely to get ticket from Tumakuru city constituency in next assembly election.
Please Wait while comments are loading...