ಪ್ರಧಾನಿಗೆ ಭಯ ಎನ್ನುವ ಸಿದ್ದರಾಮಯ್ಯಗೆ ಅಧಿಕಾರದ ಸೊಕ್ಕು: ಬಿಎಸ್ ವೈ

Posted By:
Subscribe to Oneindia Kannada
   ಪ್ರಧಾನಿಗೆ ಭಯ ಎನ್ನುವ ಸಿದ್ದರಾಮಯ್ಯಗೆ ಅಧಿಕಾರದ ಸೊಕ್ಕು : ಬಿಎಸ್ ವೈ | Oneindia Kannada

   ತುಮಕೂರು, ಅಕ್ಟೋಬರ್ 31: "ಪ್ರಧಾನಿಗೆ ನನ್ನ ಕಂಡರೆ ಭಯ ಅಂತ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಕ್ಕಿನಿಂದ ಮೆರೆಯುತ್ತಿದ್ದಾರೆ. ಸರ್ವಾಧಿಕಾರಿಯ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾರೆ. ಪ್ರಧಾನಿ ಬಗ್ಗೆ ಅವರು ನೀಡಿದ ಹೇಳಿಕೆ ಮೂರ್ಖತನದ ಪರಮಾವಧಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತುಮಕೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಧರ್ಮಸ್ಥಳಕ್ಕೆ ಮೀನು ಮಾತ್ರ ಯಾಕೆ, ಕೋಳಿನೂ ತಿಂದು ಹೋಗಿದ್ದೆ: ಸಿಎಂ

   ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರಸ್ವಾಮೀಜಿ ದರ್ಶನ ಪಡೆದ ನಂತರ ಮಾತನಾಡಿದ ಅವರು, ಸಿದ್ದರ್ಮಾಯ್ಯ ಹಾಗೂ ಕೆ.ಜೆ.ಜಾರ್ಜ್ ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರು ಕೋಟಿ ರುಪಾಯಿ ಲೂಟಿ ಮಾಡಿದ್ದಾರೆ. ಅವರ ಹಗರಣಗಳನ್ನು ಬಯಲು ಮಾಡುತ್ತೇನೆ ಎಂದು ಗುಡುಗಿದರು.

   BSY angry on Siddaramaiah over his remark on PM Modi

   ರಾಜ್ಯದ ಜನರು ಭಕ್ತಿಯಿಂದ ನಡೆದುಕೊಳ್ಳುವ ಮಂಜುನಾಥ ದೇವಸ್ಥಾನಕ್ಕೆ ಹೋಗುವಾಗ ಪ್ರಧಾನಿ ಮೋದಿ ಅವರು ಉಪವಾಸ ಇದ್ದರು. ಆದರೆ ಸಿದ್ದರಾಮಯ್ಯ, ನಾನು ಕೋಳಿ- ಮೀನು ತಿಂದು ಹೋಗಿದ್ದೆ ಎನ್ನುವ ಮೂಲಕ ರಾಜ್ಯದ ಜನರ ನಂಬಿಕೆಗೆ ಅವಮಾನ ಮಾಡಿದ್ದಾರೆ. ಈ ರೀತಿ ಧೋರಣೆಯ ಮುಖ್ಯಮಂತ್ರಿಯನ್ನು ಪಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.

   ಬಿಜೆಪಿಗೆ ನನ್ನನ್ನು ಕಂಡರೆ ಭಯ : ಸಿದ್ದರಾಮಯ್ಯ

   ಇನ್ನು ಯಾವುದೇ ಸಂದರ್ಭದಲ್ಲೂ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದವರು, ಅವರನ್ನು ಜೈಲಿಗೆ ಕಳಿಸುತ್ತೇವೆ ಎಂಬ ಹೇಳಿಕೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕುತ್ತೇನೆ. ಹೈ ಕೋರ್ಟ್ ನಲ್ಲಿ ಈ ಬಗ್ಗೆ ಮನವಿ ಸಲ್ಲಿಸಲಿದ್ದೇನೆ ಎಂದು ಕೂಡ ಹೇಳಿದರು.

   BSY angry on Siddaramaiah over his remark on PM Modi

   ಸಿ.ಪಿ.ಯೋಗೇಶ್ವರ್ ಹಾಗೂ ಪಿ.ರಾಜೀವ್ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ ಎಂಬ ಮಾಹಿತಿ ನೀಡಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP state president BS Yeddyurappa alleges on Siddaramaiah as egoistic, He refers CM remark on PM Narendra Modi in Tumakuru Siddaganga mutt.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ