ಆರತಕ್ಷತೆಯಲ್ಲಿದ್ದ ವಧು ನಾಪತ್ತೆ, ಪ್ರಿಯಕರ ಜೊತೆ ವಿವಾಹ!

Posted By: Gururaj
Subscribe to Oneindia Kannada

ತುಮಕೂರು, ನವೆಂಬರ್ 12 : ಆರಕ್ಷತೆಯಲ್ಲಿದ್ದ ವಧು ಕಲ್ಯಾಣ ಮಂದಿರದಿಂದ ಪರಾರಿಯಾದ ಘಟನೆಗೆ ತಿರುವು ಸಿಕ್ಕಿದೆ. ಭಾನುವಾರ ಬೆಳಗ್ಗೆ ಪ್ರಿಯಕರನ ಜೊತೆ ಆಕೆ ವಿವಾಹವಾಗಿದ್ದಾಳೆ. ಕಲ್ಯಾಣ ಮಂದಿರಕ್ಕೆ ಕರೆತಂದಿದ್ದ ಟಿಟಿ ಡ್ರೈವರ್ ಜೊತೆಯೇ ಆಕೆ ವಿವಾಹವಾಗಿದ್ದು ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.

ಭಾನುವಾರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕಾವ್ಯಾ, ಯಡಿಯೂರು ನಿವಾಸಿ ರಾಮಕೃಷ್ಣ ವಿವಾಹ ಯಡಿಯೂರಿನಲ್ಲಿ ನಡೆಯಬೇಕಿತ್ತು. ಶನಿವಾರ ಕಲ್ಯಾಣ ಮಂಟಪಕ್ಕ ಆಗಮಿಸಿದ್ದ ಕಾವ್ಯಾ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದಳು.

ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ದಾಳಿ

Bride escape from marriage hall in Tumakuru

ಭಾನುವಾರ ಬೆಳಗ್ಗೆ 9.30ಕ್ಕೆ ವಿವಾಹ ನಿಶ್ಚಯವಾಗಿತ್ತು. ಆದರೆ, ಶನಿವಾರ ರಾತ್ರಿ 11.30ರ ಸುಮಾರಿಗೆ ವಧು ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದಳು. ಭಾನುವಾರ ಬೆಳಗ್ಗೆ ಕ್ಯಾಬ್ ಚಾಲಕ ರಮೇಶ್ ಜೊತೆ ಆಕೆ ವಿವಾಹ ಮಾಡಿಕೊಂಡಿದ್ದಾಳೆ.

ಪೊಲೀಸರ ರಕ್ಷಣೆ ಕೋರಿದ ಬಾಗಲಕೋಟೆಯ ಪ್ರೇಮಿಗಳು

ಕ್ಯಾಬ್ ಚಾಲಕ ರಮೇಶ್ ಮತ್ತು ಕಾವ್ಯಾ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಾವ್ಯಾ ಕುಟುಂಬದವರು ಕಾಮಾಕ್ಷಿಪಾಳ್ಯದಿಂದ ರಮೇಶ್ ಅವರ ಟಿಟಿಯಲ್ಲಿಯೇ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು.

ರಾತ್ರಿ 11.30ರ ಸುಮಾರಿಗೆ ಇಬ್ಬರೂ ಟಿಟಿ ವಾಹನದಲ್ಲಿಯೇ ಪರಾರಿಯಾಗಿದ್ದು, ಬೆಂಗಳೂರಿನಲ್ಲಿ ಇಂದು ಮುಂಜಾನೆ 5.30ಕ್ಕೆ ವಿವಾಹವಾಗಿದ್ದಾರೆ. ತಾನು ರಮೇಶ್ ಜೊತೆ ವಿವಾಹವಾಗಿದ್ದೇನೆ ಎಂದು ಕಾವ್ಯ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ರಾಮಕೃಷ್ಣ ಮನೆಯುವರೂ ತಾವೇ ಎಲ್ಲಾ ಖರ್ಚನ್ನು ಹಾಕಿಕೊಂಡು ಮದುವೆಗೆ ಸಿದ್ಧತೆ ನಡೆಸಿದ್ದರು. ಆರತಕ್ಷತೆಯೂ ಚೆನ್ನಾಗಿ ನಡೆದಿತ್ತು. ಆದರೆ, ವಿವಾಹಕ್ಕೂ ಮೊದಲೇ ವಧುಪರಾರಿಯಾಗಿ ಪ್ರೀತಿಸಿದ ಹುಡುಗನ ಕೈ ಹಿಡಿದ್ದಾರೆ. ವಧು ಮನೆಯವರ ವಿರುದ್ಧ ಪೊಲೀಸರಿಗೆ ದೂರು ಕೊಡಲು ರಾಮಕೃಷ್ಣ ಕುಟುಂಬದವರು ನಿರ್ಧರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A bride performed the escape act from the marriage hall hours before the muhurat at Tumakuru on Saturday night. She married her lover on Sunday, November 12 early morning in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ