ಸೊಗಡು ಶಿವಣ್ಣಗೆ ಟಿಕೆಟ್ ಗೆ ಒತ್ತಾಯ, ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ

Posted By: ತುಮಕೂರು ಪ್ರತಿನಿಧಿ
Subscribe to Oneindia Kannada

ತುಮಕೂರು, ಏಪ್ರಿಲ್ 12: ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬ ಸ್ಥಿತಿ ಏರ್ಪಟ್ಟಿದೆ. ಸೊಗಡು ಶಿವಣ್ಣ ಅವರಿಗೆ ತುಮಕೂರು ನಗರದ ಟಿಕೆಟ್ ಗೆ ಆಗ್ರಹಿಸಿ ಪಕ್ಷದ ಪದಾಧಿಕಾರಿಗಳು ಗುರುವಾರ ರಾಜೀನಾಮೆ ನೀಡಿದ್ದಾರೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ಮುಖಂಡರು ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಮೊದಲ ಪಟ್ಟಿಯಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷ ನಿಷ್ಠ ಸೊಗಡು ಶಿವಣ್ಣ ಅವರಿಗೆ ಎರಡನೇ ಪಟ್ಟಿಯಲ್ಲಿ ಆದ್ಯತೆ ಮೇಲೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾರ್ಯಕರ್ತರ ಕಾವು ತಾಗಿದ ಮೇಲೆ ಸೊಗಡು ಪರ ಸುರೇಶ್ ಗೌಡ ಬ್ಯಾಟಿಂಗ್!

ತುಮಕೂರು ಜಿಲ್ಲೆಯ ಪರಿಶಿಷ್ಟ ಪಂಗಡ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಿ.ಕೆ.ಬಸವರಾಜು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುಮಾಯೂನ್ ಪಾಷಾ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ಉಪಾಧ್ಯಕ್ಷ ಲಕ್ಷೀ ನರಸಿಂಹರಾಜು, ತುಮಕೂರು ನಗರ ಘಟಕದ ಉಪಾಧ್ಯಕ್ಷರಾದ ಪಂಚಾಕ್ಷರಯ್ಯ ಮತ್ತು ಎಂ.ಪಿ.ಕುಮಾರ ಸ್ವಾಮಿ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಶಾಂತರಾಜು, ನಗರ ಕಾರ್ಯಕಾರಣಿ ಸದಸ್ಯ ಬನಶಂಕರಿ ಬಾಬು ರಾಜೀನಾಮೆ ನೀಡಿದ್ದಾರೆ.

BJP office bearers resigned, urging ticket for Sogadu Shivanna

ತುಮಕೂರು ನಗರ ಆಟೋ ಪ್ರಕೋಷ್ಠದ ಸಂಚಾಲಕರಾದ ಆರ್.ನವೀನ್ ಕುಮಾರ್ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: BJP office bearers resigned, urging ticket for Sogadu Shivanna from Tumakuru city constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ