ತುಮಕೂರಿನಲ್ಲಿ ಬಿಜೆಪಿ ಮುಖಂಡನಿಂದ ವರದಿಗಾರನ ಮೇಲೆ ಹಲ್ಲೆ

Posted By: Nayana
Subscribe to Oneindia Kannada

ತುಮಕೂರು, ಡಿಸೆಂಬರ್ 02 : ಪತ್ರಿಕಾಗೋಷ್ಠಿ ನೆಪದಲ್ಲಿ ಕರೆಸಿಕೊಂಡು ಖಾಸಗಿ ಸುದ್ದಿವಾಹಿನಿ ವರದಿಗಾರನ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರಿನಲ್ಲಿ ಶನಿವಾರ ನಡೆದಿದೆ.

ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ಖಾಸಗಿ ವಾಹಿನಿ ವರದಿಗಾರ ವಾಗೀಶ್ ಅವರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೆಬ್ಬಾಕ ರವಿ, ಪಾಲಿಕೆ ಸದಸ್ಯ ಬಾವಿಕಟ್ಟೆ ನಾಗಣ್ಣ ಅವರು ಹಲ್ಲೆ ನಡೆಸಿದ್ದಾರೆ. ತುಮಕೂರಿನ ಹೋಟೆಲ್ ವೊಂದರಲ್ಲಿ ಅಧ್ಯಕ್ಷ ಜ್ಯೋಗಣೇಶ್ ಅವರು ಪತ್ರಿಕಾಗೋಷ್ಠಿಗೆ ಆಹ್ವಾನಿಸಿದ್ದರು.

BJP leader attacks on Tv reporter

ಪತ್ರಿಕಾಗೋಷ್ಠಿ ಮಧ್ಯದಲ್ಲೇ ಗುಂಪುಕಟ್ಟಿಕೊಂಡು ಏಕಾಏಕಿ ವರದಿಗಾರನ ಮೇಲೆ ಬಿಜೆಪಿ ಕಾರ್ಯಕರ್ತರು ಎರಗಿದ್ದಾರೆ. ಹೆಬ್ಬಾಕ ರವಿ ಹಾಗೂ ಬಾವಿಕಟ್ಟೆ ನಾಗಣ್ಣನ ಅಕ್ರಮ ಗಣಿಗಾರಿಕೆ ಕುರಿತು ಹಲವು ಬಾರಿ ವಾಗೀಶ್ ಅವರು ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆ. ಹೆಬ್ಬಾಕ ರವಿ ಈ ಹಿಂದೆ ಹಲವು ಪತ್ರಕರ್ತರಿಗೆ ಧಕ್ಮಿ ಹಾಕಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a strange incident, BJP leader of Tumkur district Hebbaka Ravi attacked on a news channel reporter Vageesh in Tumkur this morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ