ಬಿಜೆಪಿ ವಿರುದ್ಧ ಆರೋಪ : ಸೊಗಡು ಶಿವಣ್ಣಗೆ ನೋಟಿಸ್

Posted By: Ananthanag
Subscribe to Oneindia Kannada

ತುಮಕೂರು, ಅಕ್ಟೋಬರ್, 29: ತುಮಕೂರಿನ ಮಾಜಿ ಶಾಸಕ, ಮಾಜಿ ಸಚಿವ ಸೊಗಡು ಶಿವಣ್ಣರವರಿಗೆ ಅಶಿಸ್ತು ಮತ್ತು ಪಕ್ಷದ ನಾಯಕತ್ವದ ವಿರುದ್ಧ ಕಾರ್ಯಕರ್ತರನ್ನು ಪ್ರೇರೇಪಿಸಿರುವ ಆರೋಪದ ಮೇಲೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.

ತಮ್ಮ ಹಾಗು ತಮ್ಮ ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಮಾಜಿ ಸಚಿವ ಶಿವಣ್ಣ ತಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಮತ್ತಿತರ ಮುಖಂಡರಿಗೆ ಇದೀಗ ನಡುಕ ಶುರುವಾಗಿದೆ.

Sogadu Shivanna

ಪಕ್ಷ ಪದಾಧಿಕಾರಿಗಳ ನೇಮಕಾತಿಯಲ್ಲಿ ನಿಷ್ಟಾವಂತರಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಯಡಿಯೂರಪ್ಪ ಹಿಂಬಾಲಕರಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಸೊಗಡು ಶಿವಣ್ಣ ಅವರೊಂದಿಗೆ ಪಕ್ಷದ ನಂದೀಶ್ ಸಹ ಪಕ್ಷದ ವಿರುದ್ಧವಾಗಿ ಮಾತಾಡಿದ್ದು, ಪಕ್ಷವನ್ನು ಆರೋಪಿಸಿರುವುದನ್ನು ಮಾಜಿ ಸಿಎಂ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿದಂತಿದೆ.

ಹೀಗಾಗಿ ನೋಟಿಸ್ ನೀಡಲು ಮುಖ್ಯ ಕಾರಣ ಪಕ್ಷದ ಕಾರ್ಯಕರ್ತರನ್ನು ಪಕ್ಷದ ನಾಯಕತ್ವದ ವಿರುದ್ಧವೇ ಪ್ರೇರೇಪಿಸಿದ್ದು, ಅಶಿಸ್ತಿನಿಂದ ವರ್ತಿಸಿರುವುದೇ ಆಗಿದೆ.

ಅಲ್ಲದೆ ಶಂಕರಪ್ಪ ಅಧ್ಯಕ್ಷತೆಯ ಶಿಸ್ತು ಸಮಿತಿಯ ಸಭೆ ಸೇರಿ ನೋಟಿಸ್ ಜಾರಿ ಮಾಡುವ ನಿರ್ಧಾರವನ್ನು ತೊಗೆದುಕೊಳ್ಳಲಾಗಿದೆ ಎಂದು ಜಿಜೆಪಿ ಮೂಲಗಳು ತಿಳಿಸಿವೆ. ಅಲ್ಲದೆ ರಾಜ್ಯ ಬಿಜೆಪಿ ಪಕ್ಷದ ವಿರುದ್ಧ ಮಾತನಾಡುವವರ ಬಗ್ಗೆ ನಿಗಾ ವಹಿಸಲು ಸೂಚಿಸಿದೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP State president B.S. Yeddyurappa on Friday sent out a message of asserting himself in the organisation,with the party disciplinary committee sending show-cause notices to Sogadu Shivanna and Nandeesh
Please Wait while comments are loading...