ಕೊರಟಗೆರೆ ಬಳಿ ಒಂದೇ ಗಂಟೆಯಲ್ಲಿ 2 ಅಪಘಾತ

By: ಕುಮಾರಸ್ವಾಮಿ
Subscribe to Oneindia Kannada

ಒಂದೇ ಗಂಟೆ ಸುಮಾರಿನಲ್ಲಿ ಒಂದೇ ಸ್ಥಳದಲ್ಲಿ ಎರಡು ಅಪಘಾತಗಳು ಕೊರಟಗೆರಯ ಥರಣಿ ಗ್ರಾಮದ ಬಳಿ ಜರುಗಿದೆ. ಅಪಘಾತದಲ್ಲಿ ಐವರು ಸಾವಿಗೀಡಾಗಿದ್ದಾರೆ.

ತುಮಕೂರಿನ ಕೊರಟಗೆರೆಯ ಥರಣಿ ಗ್ರಾಮದ ಬಳಿ ಸಂಜೆ 6ಗಂಟೆ ಸುಮಾರಿಗೆ ಬೈಕ್ ಗೆ ಹಿಂಬಂದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕರಿಯಪ್ಪ(58) ಸ್ಥಳದಲ್ಲೇ ಮೃತಪಟ್ಟಿದ್ದಾರೆ.[ಬೈಕ್ ಗೆ ಬಸ್ ಡಿಕ್ಕಿ: ಅಣ್ಣ ಸ್ಥಳದಲ್ಲೇ ಸಾವು, ತಂಗಿ ಸ್ಥಿತಿ ಗಂಭೀರ]

hamp

ಅದೇ ಸ್ಥಳದಲ್ಲಿ ಸಂಜೆ 7 ಗಂಟೆಗೆ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದಿದ್ದ ಬಸ್ಸಿನಲ್ಲಿ ಇಬ್ಬರು ಮತ್ತು ಬೈಕಿನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ರಾಜೇಂದ್ರ (48) , ಕೇಶವ ಮೂರ್ತಿ (55) ಮೃತರು.
ರಾಮು ಗಾಯಗೊಂಡ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು ಪಾವಗಡ ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಗಳಿರುವುದರಿಂದಲೇ ಈ ರೀತಿಯ ಪ್ರಕರಣಗಳು ಜರುಗುತ್ತಿವೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At the same hour of the 2 accident in Koratagere, One Car-Bike accident another one is Bike-Bus accident.
Please Wait while comments are loading...