ತುಮಕೂರಿನಲ್ಲಿ ಐಎಸ್‌ಐಎಸ್ ಉಗ್ರನ ಬಂಧನ

Posted By:
Subscribe to Oneindia Kannada

ತುಮಕೂರು, ಜನವರಿ 22 : ತುಮಕೂರಿನಲ್ಲಿ ಐಎಸ್‌ಐಎಸ್ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಶುಕ್ರವಾರ ಮುಂಜಾನೆ ಮಂಗಳೂರಿನಲ್ಲಿಯೂ ಐಎಸ್‌ಐಎಸ್ ಉಗ್ರ ಸಂಘಟನೆ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಸೈಯದ್ ಹುಸೇನ್ (25) ಎಂದು ಗುರುತಿಸಲಾಗಿದೆ. ಮುಂಜಾನೆ 4.30ರ ಸುಮಾರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ತುಮಕೂರಿನ ಗುಮ್ನಿ ಸರ್ಕಲ್ ಬಳಿಯ ಸೈಯದ್ ನಿವಾಸದ ಮೇಲೆ ದಾಳಿ ನಡೆಸಿ, ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. [ಮಂಗಳೂರಲ್ಲಿ ISIS ಉಗ್ರನ ಸೆರೆ]

arrest

ಮುಂಬೈ ಮತ್ತು ಚೆನ್ನೈನಿಂದ ಬಂದ ಅಧಿಕಾರಿಗಳು ಮಂಗಳೂರಿನಲ್ಲಿ 2.30ರ ಸುಮಾರಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದರು. ಈ ಬಂಧನದ ಬಳಿಕ ತುಮಕೂರಿನಲ್ಲಿ ಹುಸೇನ್ ಬಂಧಿಸಲಾಗಿದೆ. ಇದೇ ತಂಡದ ಕೆಲವು ಅಧಿಕಾರಿಗಳು ಹುಸೇನ್ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.[ಇರಾಕಿ ಉಗ್ರರ ಕಣ್ಣು ದಕ್ಷಿಣ ಭಾರತದ ಮೇಲೆ ಏಕಿದೆ?]

* ಬೆಂಗಳೂರಲ್ಲಿ ಇಬ್ಬರು ಶಂಕಿತ ಅಲ್ ಖೈದಾ ಉಗ್ರರ ಸೆರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 25-year-old Syed Hussain has been arrested in Tumakuru by National Investigation Team (NIA) for allegedly trying to spread ISIS ideology.
Please Wait while comments are loading...