ರಂಗಾಯಣ ರಘು ರಾಜಕೀಯಕ್ಕೆ ಎಂಟ್ರಿ, ಜೆಡಿಎಸ್ ನಿಂದ ಸ್ಪರ್ಧೆ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 26: ವೈವಿಧ್ಯಮಯ ಪಾತ್ರಗಳ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುವ ನಟ 'ರಂಗಾಯಣ ರಘು' ಅವರು ಸಕ್ರಿಯ ರಾಜಕೀಯ ಪ್ರವೇಶಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಬಂದಿದೆ. ಈ ಸುದ್ದಿಯನ್ನು ಖಚಿತಪಡಿಸಿದ ರಂಗಾಯಣ ರಘು ಅವರು, ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದರು.

'ದೇವೇಗೌಡರು ಹಾಗೂ ಕುಮಾರಣ್ಣ ಅವರ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ, ಯಾವ ಕ್ಷೇತ್ರದಿಂದ ಸ್ಪರ್ಧೆ ಎಂಬುದರ ಬಗ್ಗೆ ಈಗಲೇ ಚರ್ಚೆ ಬೇಡ' ಎಂದರು.

Rangayana Raghu to enter politics likely to contest from JDS

'ನಾನು ಚಿಕ್ಕವರಿಂದಲೂ ಅಪ್ಪ-ಅಣ್ಣ ಇಬ್ಬರು 'ಜೆ ಡಿ ಎಸ್' ನಲ್ಲೇ ಕೆಲಸ ಮಾಡಿದವರು ಹಾಗಾಗಿ ಆ ಪಕ್ಷದ ಮೇಲೆ ಅಕ್ಕರೆ ಮತ್ತು ಅವರು ಮಾಡಿರೋ ಕೆಲಸಗಳು ನೆನಪಿದೆ. ಪಾವಗಡ ನಮ್ಮ ಸ್ವಂತ ಊರು ಅಲ್ಲಿಗೆ ಇಲ್ಲಿ ತನಕ ಹೆಚ್ಚಾಗಿ ಬಂದಿರೋದು ದೇವೇಗೌಡರು ಹಾಗೂ ಕುಮಾರಣ್ಣ ಹಾಗಾಗಿ ಅದೇ ಪಕ್ಷ ಇಷ್ಟವಾಗುತ್ತೆ' ಎಂದರು.

ರೈತರು ಪಡುತ್ತಿರೋ ಕಷ್ಟದ ಹೊರೆಯನ್ನ ಸ್ಪಲ್ವನಾದರು ಕಡಿಮೆ ಮಾಡೋ ಕೆಲಸ ಮಾಡುತ್ತೇನೆ ವರ್ಷಗಟ್ಟಲೆ ತಿಂಗಳುಗಟ್ಟಲೆ ಕಷ್ಟ ಪಟ್ಟು ಬೆಳೆಯೋ ಬೆಳೆಗೆ ಸರಿಯಾದ ಬೆಲೆ ಸಿಗಬೇಕು ಅದಕ್ಕಾಗಿ ರೈತರ ಪರವಾದ ಪಕ್ಷವನ್ನ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Rangayana Raghu to enter active politics and likely to contest from Madhugiri with JDS ticket.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ