ತುಮಕೂರು: ಪಾರ್ಕ್ ನಲ್ಲಿ ಇಬ್ಬರು ಮಕ್ಕಳ ಮೇಲೆ ಆ್ಯಸಿಡ್ ದಾಳಿ

Posted By: Nayana
Subscribe to Oneindia Kannada

ತುಮಕೂರು, ಫೆಬ್ರವರಿ 13: ಪಾರ್ಕ್ ನಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಕಿಡಿಗೇಡಿ ಪುಂಡರ ಗುಂಪೊಂದು ಆ್ಯಸಿಡ್ ದಾಳಿ ನಡೆಸಿದ ಘಟನೆ ತುಮಕೂರಿನಲ್ಲಿ ಮಂಗಳವಾರ ನಡೆದಿದೆ.

ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮನೆಯ ಸಮೀಪದಲ್ಲಿದ್ದ ಪಾರ್ಕ್ ಒಂದರಲ್ಲಿ ಆಟವಾಡಲು ತೆರಳಿದ್ದ ದರ್ಶನ್(10 ) ವಿನಯ್ (4) ಎನ್ನುವ ಮಕ್ಕಳ ಮೇಲೆ ಕಿಡಿಗೇಡಿಗಳ ಗುಂಪೊಂದು ಆಸಿಡ್ ದಾಳಿ ನಡೆಸಿದೆ. ದಾಳಿ ಸಂದರ್ಭದಲ್ಲಿ ಮಕ್ಕಳ ಮಕ್ಕಳ ಮುಖ ಹಾಗೂ ತೆಲೆಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Acid attack on Children in Tumkur

ತಿಪಟೂರು ವಾಸಿ ಆನಂದ ಎಂಬುವವರ ಮಕ್ಕಳಾಗಿದ್ದು, ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಕಿಡಿಗೇಡಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Acid attack on children in park at Tumkur. A group of youths did this crime on two childrens called Darshan(10) vinay(4) in a same family on Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ