ಪೊಲೀಸರ ನಿರ್ಲಕ್ಷ್ಯ: ಕಾಮುಕರ ಪಾಲಾಗುತ್ತಿರೋ ಅರೆಹುಚ್ಚಿ

Posted By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada

ಪಾವಗಡ, ಸೆಪ್ಟೆಂಬರ್ 12: ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಓಡಾಡುತ್ತಿದ್ದ ಹುಡುಗಿಯೊಬ್ಬಳಿಗೆ ಕಿಡಿಗೇಡಿಗಳು ಕುಡಿಸಿ, ಸಿಗರೇಟು ಸೇದಿಸಿದ್ದಲ್ಲದೆ, ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲು ಯತ್ನಿಸಿದಂಥ ಅಮಾನುಷ ಘಟನೆ ಪಾವಗಡದಲ್ಲಿ ನಡೆದಿದೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಚಾರ ಇದಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಿರುವ ಪೊಲೀಸರೂ ಸುಮ್ಮನೇ ಕುಳಿತಿರುವುದು ನಾಗರಿಕರ ಅಸಹನೆಗೆ ಕಾರಣವಾಗಿದೆ.

ಇದರ ಪರಿಣಾಮವಾಗಿ,ಆಕೆಗೆ ಅರಿವಿಲ್ಲದಂತೆ ಆಕೆಯ ಮೇಲೆ ಲೈಂಗಿಕ ಆಕ್ರಮಣಗಳು ನಡೆಯುತ್ತಿವೆ ಎಂಬುದು ಇಲ್ಲಿನ ನಾಗರಿಕರ ಅಳಲು.

A teenage girl became victim of rapists in Pavagada

ವೇಶ್ಯಾವಾಟಿಕೆಗೆ ಒಲ್ಲೆ ಎಂದಿದ್ದಕ್ಕೆ ಆಕೆಯನ್ನು ಪತಿ, ಮಾವನೇ ಕೊಂದರೆ?

ದಯನೀಯ ಪರಿಸ್ಥಿತಿ: ಹುಚ್ಚಿಯಾಗಿರುವ ಆ ಯುವತಿ, ಸಿಕ್ಕ ಸಿಕ್ಕವರ ಹತ್ತಿರ ಹೋಗಿ ನನಗೆ ಹತ್ತು ರು. ಕೊಡಿ ನಿಮಗೆ ಮುತ್ತು ಕೊಡುತ್ತೇನೆ ಎಂದು ಕೇಳುತ್ತಿದ್ದಾಳೆ. ಇದು ಕಾಮುಕರಿಗೆ ತಮ್ಮ ದುಶ್ಚಟಗಳನ್ನು ತೋರಲು ಹೊಸ ಅವಕಾಶ ಮಾಡಿಕೊಟ್ಟಿದೆ.

A teenage girl became victim of rapists in Pavagada

ಪೊಲೀಸರ ನಿರ್ಲಕ್ಷ್ಯ: ಮಂಗಳವಾರ ರಾತ್ರಿ ಎಂಟು ಜನರ ಗ್ಯಾಂಗ್ ಒಂದು ಈ ಆಟೋದಲ್ಲಿ ಕರೆದುಕೊಂಡು ಹೋಗಿದೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಇದು ನಮ್ಮ ಇಲಾಖೆ ಬರುವುದಿಲ್ಲ ಎಂದು ವಿಷಯವನ್ನು ತಮ್ಮ ಗಮನಕ್ಕೆ ತಂದವರನ್ನೇ ಬೈದು ಕಳುಹಿಸಿದ್ದಾರೆನ್ನಲಾಗಿದೆ.

ಸ್ಥಳೀಯರ ಮನವಿ: ಇಂಥ ಘಟನೆಗಳು ಆ ಯುವತಿಯ ಬಳಿ ಆಗಾಗ ನಡೆಯುತ್ತಲೇ ಇರುವುದರಿಂದ ಆಕೆಯನ್ನು ರಕ್ಷಿಸಲು ಸಂಬಂಧಪಟ್ಟ ಇಲಾಖೆಯೇ ಮುಂದೆ ಬರಬೇಕೆಂದು ಸ್ಥಳೀಯರು ಕೇಳಿಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A teenage girl who seems to be a mental patient is wandering in Pavagada since three days has become innocent victim of Rapists, says the sources.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ