ಸಾಲಿನಲ್ಲಿ ನಿಂತು ಸಾವಿಗೀಡಾದ ಎಪ್ಪತ್ತರ ಸಿದ್ದಪ್ಪ

Posted By:
Subscribe to Oneindia Kannada

ತುಮಕೂರು ನವೆಂಬರ್ 19: ತುಮಕೂರಿನಲ್ಲಿ ಮೈಸೂರು ಬ್ಯಾಂಕಿನ ಮುಂದೆ ಸರತಿ ಸಾಲಿನಲ್ಲಿ ನಿಂತ 70 ವರ್ಷದ ವೃದ್ಧ ಶನಿವಾರ ಕ್ಯೂನಲ್ಲಿಯೇ ಜೀವಕಳೆದುಕೊಂಡಿದ್ದಾರೆ.

ತುಮಕೂರು ತಾಲ್ಲೂಕು ಚೇಳೂರಿನ ಎಸ್ ಬಿಎಂ ಬ್ಯಾಂಕಿನ ಮುಂದೆ ಶನಿವಾರ ಮಧ್ಯಾಹ್ನ 12.30 ಕ್ಕೆ ಸಿದ್ದಪ್ಪ(70) ನೋಟನ್ನು ಬದಲಾಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದಿದ್ದಾರೆ. ಸರತಿ ಸಾಲಿನಲ್ಲಿ ನಿಂತಿದ್ದ ಜನರು ಅವರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದರಾದರೂ ಅವರು ಸಾವಿಗೀಡಾಗಿದ್ದಾರೆ. ಅವರ ಮೃತ ಶರೀರವನ್ನು ಪರಿವಾರಕ್ಕೆ ಒಪ್ಪಿಲಾಗಿದೆ.

siddappa

ಶನಿವಾರ ದೇಶಾದ್ಯಂತ ಹಿರಿಯ ನಾಗರಿಕರಿಗೆ ನೋಟುಗಳ ಬದಲಾವಣೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆಯೇ ಬ್ಯಾಂಕಿನ ಮುಂದೇ ಹಿರಿಯ ನಾಗರಿಕರೇ ತುಂಬಿದ್ದರು.

ಇನ್ನು ವಿರೋಧ ಪಕ್ಷದವರು ಐವತ್ತು ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ನೋಟು ಬದಲಾವಣೆ ಆಗಲು ಅವಕಾಶ ಕಲ್ಪಿಸಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದವು. ಹಾಗಯೇ ನೋಟಿನ ಕಾರಣದಿಂದಾಗಿ ಆದ ಅನೇಕ ಸಾವು ನೋವುಗಳಿಗೆ ಸರ್ಕಾರದ ದಿಢೀರ್ ನಿರ್ಧಾರವೇ ಕಾರಣ ಎಂದು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A senior citizen died, following a cardiac arrest while waiting in queue to exchange his old notes. The incident occurred at Tumkur today at 12.30 PM. The 70 year old Siddappa was standing in queue at the State Bank of Mysore breach in Cheluru, Tumkur.
Please Wait while comments are loading...