ತುಮಕೂರು: ಟ್ರಾಫಿಕ್ ಪೊಲೀಸ್ ಯುವಕರ ನಡುವೆ ಮಾರಾಮಾರಿ

Posted By:
Subscribe to Oneindia Kannada

ತುಮಕೂರು, ನವೆಂಬರ್ 22 : ಸಂಚಾರಿ ಪೊಲೀಸ್ ಮತ್ತು ಯುವಕ ಒಬ್ಬರಿಗೊಬ್ಬರು ಶರ್ಟ್ ಕಾಲರ್ ಹಿಡಿದು ಕಿತ್ತಾಡಿಕೊಂಡಿರುವ ಘಟನೆ ಬುಧವಾರ ತುಮಕೂರಿನಲ್ಲಿ ನಡೆದಿದೆ.

ರಿಯಾಜ್ ಪಾಷಾ ಹಾಗೂ ಮಹಮದ್ ಯೂಸೂಪ್ ಎಂಬ ಯುವಕರು ಹೆಲ್ಮೆಟ್ ಧರಿಸದೇ ಬೈಕ್ ಒಡಿಸುತಿದ್ದಕ್ಕೆ ಸಂಚಾರಿ ಪೂರ್ವ ಠಾಣೆಯ ಎಎಸ್ ಐ ಬಸವರಾಜು ತುಮಕೂರು ವಿಶ್ವವಿದ್ಯಾಲಯ ಬಳಿ ತಡೆದಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ಯುವಕರ ನಡವೆ ಮಾತಿನ ಚಕಮಕಿ ನಡೆದಿದೆ.

A heated argument broke out between a traffic cop and a youth in Tumakuru

ಯುವಕರು ದಾಖಲೆ ನೀಡದಿದ್ದಾಗ ಪೊಲೀಸರು ಅವಾಚ್ಯ ಶಬ್ದಗಳಿಂದ ಬೈದಿದಾರೆ. ಹಾಗಾಗಿ ಯುವಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಹೊಡೆದಾಡಿಕೊಡಿದ್ದಾರೆ ಎನ್ನಲಾಗಿದೆ.

ಈ ಘಟನೆಯಲ್ಲಿ ಯುವಕರಿಗೆ ಹಾಗೂ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಯುವಕರನ್ನು ಹೊಸಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A heated argument broke out between a traffic cop and a youth in Tumakuru. The youth is seen assaulting the cop and is seen holding the collar of the inspector here. The incident happened near Tumakuru University November 22.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ